ಜೋಳದ ರೊಟ್ಟಿ, ಕಾಳು ಪಲ್ಯ, ಮೊಸರು ಚಟ್ನಿ ತಿಂತಿರೋ ಶ್ರೇಯಾಂಕಾ ಪಾಟೀಲ್ ಫೋಟೊ ವೈರಲ್
ಶ್ರೇಯಾಂಕಾ ಪಾಟೀಲ್ ಬಗ್ಗೆ ಈಗ ಎಲ್ಲಾ ಕಡೆಯೂ ಚರ್ಚೆ ನಡೆಯುತ್ತಿದೆ. ಯಾಕಂದ್ರೆ ಈ ಹುಡುಗಿ ಅತಿ ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ ಮಾಡಿದ್ದಾರೆ. ಅದರಲ್ಲೂ ಆರ್‌ಸಿಬಿ ಕಪ್ ಗೆಲ್ಲುವ ಆಸೆಯನ್ನು ಪೂರೈಸುವಲ್ಲಿ ಮಹತ್ವದ ಪಾತ್ರ ಬೀರಿದ್ದಾರೆ, ಕನ್ನಡತಿ ಶ್ರೇಯಾಂಕಾ ಪಾಟೀಲ್. ಹೀಗಿದ್ದಾಗ ಆರ್‌ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಅವರ ಒಂದು ಫೋಟೋ ಫುಲ್ ವೈರಲ್ ಆಗುತ್ತಿದೆ.
ಆರ್‌ಸಿಬಿ ಬೆಂಗಳೂರು ಮಹಿಳಾ ತಂಡದ ಆಟಕ್ಕೆ ಕೋಟ್ಯಂತರ ಫ್ಯಾನ್ಸ್ ಫಿದಾ ಆಗಿದ್ದು, 2024ರ ಸಾಲಿನ WPL ಕಪ್ ಗೆದ್ದು ಇತಿಹಾಸ ನಿರ್ಮಿಸಲು ಕನ್ನಡತಿ ಶ್ರೇಯಾಂಕ ಪಾಟೀಲ್ ಶ್ರಮ ತುಂಬಾ ದೊಡ್ಡದಾಗಿದೆ. ಹೀಗಾಗಿ ಶ್ರೇಯಾಂಕಾ ಅವರ ಬಗ್ಗೆ ಸಿಕ್ಕಾಪಟ್ಟೆ ಸರ್ಚ್ ಮಾಡುತ್ತಿದ್ದಾರೆ ಜನ. ಅಷ್ಟಕ್ಕೂ ಶ್ರೇಯಾಂಕಾ ಪಾಟೀಲ್ ಅವರು ಮೂಲತಃ ಕಲಬುರಗಿ ಜಿಲ್ಲೆಯವರು, ಅವರ ತಂದೆ ಕಲಬುರಗಿ ಮೂಲದ ರಾಜೇಶ್ ಪಾಟೀಲ್ ಬೆಂಗಳೂರಲ್ಲಿ ನೆಲೆಸಿದ್ದಾರೆ. ಇಂತಿಪ್ಪ ಶ್ರೇಯಾಂಕಾ, ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದಾರೆ. ಅವರ ಸಂಪೂರ್ಣ ವಿದ್ಯಾಭ್ಯಾಸ ಬೆಂಗಳೂರಿನಲ್ಲಿಯೇ ಆಗಿದೆ. ಹೀಗಿದ್ರೂ ಅವರು ತಮ್ಮ ಊರಿನ ಆಹಾರ ಸಂಸ್ಕೃತಿ ಮರೆತಿಲ್ಲ. ಜೋಳದ ರೊಟ್ಟಿ & ಮೊಸರು, ಶೇಂಗಾ ಚಟ್ನಿ ಜೊತೆ ಅವರ ಫೋಟೋ ವೈರಲ್ ಆಗುತ್ತಿದೆ.

ಉತ್ತರ ಕರ್ನಾಟಕದ ಊಟ ಇಷ್ಟವಂತೆ!
ಆಹಾರ ಸಂಸ್ಕೃತಿ ವಿಚಾರದಲ್ಲಿ ಉತ್ತರ ಕರ್ನಾಟಕ ಸಾಕಷ್ಟು ಶ್ರೀಮಂತಿಕೆ ಹೊಂದಿದೆ. ಈ ಕಾರಣಕ್ಕೆ ದೇಶಾದ್ಯಂತ ಉತ್ತರ ಕರ್ನಾಟಕದ ಆಹಾರ ಶೈಲಿಗೆ ದೊಡ್ಡ ಹೆಸರು ಕೂಡ ಇದೆ. ಅದರಲ್ಲೂ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶ ದೊರೆಯುವ ಊಟಕ್ಕೆ ನಮ್ಮ ರಾಜ್ಯದ ಉತ್ತರ ಕರ್ನಾಟಕ ಫೇಮಸ್. ಜೋಳದ ರೊಟ್ಟಿ, ಬಗೆಬಗೆಯ ಕಾಳುಗಳು, ಶೇಂಗಾ ಚಟ್ನಿ, ಮೊಸರು ಹೀಗೆ ಎಲ್ಲವನ್ನೂ ಇಷ್ಟಪಟ್ಟು ಜನ ತಿಂತಾರೆ. ಅದ್ರಲ್ಲೂ ಕ್ರಿಕೆಟ್ ಸ್ಟಾರ್ ಶ್ರೇಯಾಂಕಾ ಅವರಿಗೂ ತಮ್ಮ ಊರಿನ ಊಟ & ಜೋಳದ ರೊಟ್ಟಿ ಅಂದ್ರೆ ಪ್ರಾಣವಂತೆ.
ಚಿಕ್ಕ ವಯಸ್ಸಲ್ಲೇ ದೊಡ್ಡ ಸಾಧನೆ
ಶ್ರೇಯಾಂಕಾ ಪಾಟೀಲ್ ಇನ್ನೂ ಚಿಕ್ಕ ಹುಡುಗಿ & ಅವರ ವಯಸ್ಸು ಈಗಿನ್ನು 21 ವರ್ಷ. ಆದ್ರೂ ಅವರು ಮಾಡಿರುವ ಸಾಧನೆ ಇಡೀ ದೇಶಕ್ಕೆ ಇಷ್ಟವಾಗಿದೆ. ಆರ್‌ಸಿಬಿ ಮಾತ್ರ ಅಲ್ಲ, ಇಂಡಿಯನ್ ಕ್ರಿಕೆಟ್ ತಂಡಕ್ಕೂ ಆಡಿದ್ದಾರೆ ನಮ್ಮ ಕನ್ನಡತಿ ಶ್ರೇಯಾಂಕಾ. ಚಿಕ್ಕ ವಯಸ್ಸಿಗೆ ಅವರು ಹೀಗೆ, ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿದ್ದಾರೆ. ಹಾಗೇ ಕೋಟಿ ಕೋಟಿ ಅಭಿಮಾನಿಗಳನ್ನ ಗಳಿಸಿದ್ದಾರೆ ಶ್ರೇಯಾಂಕಾ ಪಾಟೀಲ್.

ಅಪ್ಪ ಕೂಡ ಕ್ರಿಕೆಟ್ ಆಟಗಾರ
ಶ್ರೇಯಾಂಕಾ ಹುಟ್ಟಿ ಬೆಳೆದಿದ್ದು ನಮ್ಮ ಬೆಂಗಳೂರಲ್ಲಿ ಹೀಗಾಗಿ ಶ್ರೇಯಾಂಕಾ ಪಾಟೀಲ್ ಮಾತು ಕೂಡ ಬೆಂಗಳೂರಿನ ವರಸೆಯಲ್ಲೇ ಇರುತ್ತೆ. ನಮ್ಮ ಬೆಂಗಳೂರು ಬೆಡಗಿ ಶ್ರೇಯಾಂಕಾ ಅವರು, ತಮ್ಮ ಬಾಲ್ಯದಲ್ಲಿ ಕ್ರಿಕೆಟ್ ಆಟಗಾರ್ತಿ ಆಗ್ತೀನಿ ಅಂತಾ ಅಂದುಕೊಂಡೇ ಇರಲಿಲ್ಲವಂತೆ. ಆದರೆ ಶ್ರೇಯಾಂಕಾರ ತಂದೆ ರಾಜೇಶ್ ಪಾಟೀಲ್ ಕೂಡ ಕ್ರಿಕೆಟ್ ಆಟಗಾರ ಆಗಿದ್ದರು. ಇದೇ ಕಾರಣಕ್ಕೆ ರಾಜೇಶ್ ಪಾಟೀಲ್ ಅವರು ಮಗಳಿಗೆ ಬೆಂಬಲ ನೀಡಿ ಅವರು ಕ್ರಿಕೆಟ್‌ನಲ್ಲಿ ಸಾಧನೆ ಮಾಡೋಕೆ ಎಲ್ಲಾ ರೀತಿ ಸಹಾಯ ಮಾಡಿದ್ದರಂತೆ.
ಒಟ್ನಲ್ಲಿ ಶ್ರೇಯಾಂಕಾ ಪಾಟೀಲ್ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಹೀಗೆ ಕೋಟಿ ಕೋಟಿ ಅಭಿಮಾನಿಗಳ ಹೃದಯ ಗೆದ್ದಿರುವ ಕ್ರಿಕೆಟ್ ಪ್ಲೇಯರ್ ಶ್ರೇಯಾಂಕಾ ಅವರ ಬಗ್ಗೆ ಫ್ಯಾನ್ಸ್ ಕೂಡ ಖುಷ್ ಆಗಿದ್ದಾರೆ. ಈ ಸಮಯದಲ್ಲಿ, ಶ್ರೇಯಾಂಕಾ ಅವರ ಜೋಳದ ರೊಟ್ಟಿ ಫೋಟೋ ಕೂಡ ಫುಲ್ ವೈರಲ್ ಆಗುತ್ತಿದೆ.












Click it and Unblock the Notifications