Virat Kohli: ವೈರಿಗಳನ್ನೂ ಪ್ರೀತಿಸುವ ಗುಣ ಕೊಹ್ಲಿ ನೋಡಿ ಕಲಿಯಿರಿ!

ಭಾರತ ತಂಡ ಪಾಕಿಸ್ತಾನ ವಿರುದ್ಧ ನಿನ್ನೆ ಅಮೋಘ ಗೆಲುವು ಸಾಧಿಸಿದೆ. ಅದ್ರಲ್ಲೂ ಪಾಕ್ ಪಡೆ ಭಾರತದ ಬೌಲಿಂಗ್ ಅಬ್ಬರದ ಎದುರು ಕೊಚ್ಚಿಕೊಂಡು ಹೋಗಿದೆ. ಹೀಗೆ ಇಂಡಿಯಾ ಟೀಂ ಅಬ್ಬರಕ್ಕೆ ಹಾರಿ ಹೋದ ಪಾಕಿಸ್ತಾನ ತಂಡ ಅಭಿಮಾನಿಗಳಿಗೆ ಉತ್ತರ ಹೇಳಲು ಆಗದೆ ತೊಳಲಾಟದಲ್ಲಿ ಇದೆ. ಈ ಸಮಯದಲ್ಲಿ ವಿರಾಟ್ ಕೊಹ್ಲಿ ಪ್ರೀತಿಯ ಪಾಠ ಹೇಳಿದ್ದಾರೆ.

ಹೌದು, ವಿರಾಟ್ ಕೊಹ್ಲಿ 'ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ' ಅಂತಾರೆ. ಅಕಸ್ಮಾತ್ ಕ್ರಿಕೆಟ್ ಮೈದಾನದಲ್ಲಿ ಕೊಹ್ಲಿರನ್ನ ಎದುರಾಳಿಗಳು ಕೆಣಕಿದರೆ ಸೇಡಿಗೆ ಸೇಡು ಗ್ಯಾರಂಟಿ. ಇಂತಿಪ್ಪ ಮಾನ್ಯ ವಿರಾಟ್ ಕೊಹ್ಲಿ ನಿನ್ನೆ ಪಾಕ್ ಆಟಗಾರ ಬಾಬರ್ ಆಝಮ್‌ ಜತೆಗೆ ನಡೆದುಕೊಂಡ ರೀತಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ನಿನ್ನೆ ಮ್ಯಾಚ್ ಮುಗಿದ ಮೇಲೆ ಆಗಿದ್ದು ಏನು? ಪಾಕಿಸ್ತಾನ ಅಭಿಮಾನಿಗಳು ಕೊಹ್ಲಿ ನೋಡಿ ಏನ್ ಹೇಳ್ತಾ ಇದ್ದಾರೆ? ಬನ್ನಿ ತಿಳಿಯೋಣ.

Discover what Virat Kohli gifted to Pakistan Captain

ಪಂದ್ಯ ಸೋತವರಿಗೆ ಪ್ರೀತಿಯ ಗಿಫ್ಟ್!

ಪಾಕಿಸ್ತಾನ ನಿನ್ನೆ ಹೀನಾಯವಾಗಿ ಸೋತ ಬಳಿಕ ಇಡೀ ಜಗತ್ತು ಅವರನ್ನ ನೋಡುವ ರೀತಿ ಬದಲಾಗಿದೆ. ಅದರಲ್ಲೂ ಪಾಕಿಸ್ತಾನ ಅಭಿಮಾನಿಗಳೇ ತಮ್ಮ ತಂಡದ ಬಗ್ಗೆ ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡಿಗರ ನೆಚ್ಚಿನ ಆಟಗಾರ, ಶತಕೋಟಿ ಭಾರತೀಯರ ಫೇವರಿಟ್ ಕೊಹ್ಲಿ ಮನಮೆಚ್ಚುವ ಕಾರ್ಯವನ್ನ ಮಾಡಿದ್ದಾರೆ. ಕೊಹ್ಲಿ ಅವ್ರ ಈ ಮಾನವೀಯತೆ ಕಂಡು ಇಡೀ ಜಗತ್ತೇ ಚಪ್ಪಾಳೆ ತಟ್ಟಿದೆ.

ಹೌದು, ಭಾರತ & ಪಾಕಿಸ್ತಾನ ರಾಜಕೀಯ ಸಂಬಂಧ ಹದಗೆಟ್ಟಿದ್ದರೂ, 2 ತಂಡದ ಆಟಗಾರರು ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಇದಕ್ಕೆ ನಿನ್ನೆ ಮ್ಯಾಚ್ ನಡೆದ ಅಹಮದಾಬಾದ್ ಕ್ರೀಡಾಂಗಣ ಸಾಕ್ಷಿಯಾಗಿತ್ತು. ಹೈವೋಲ್ಟೇಜ್ ಮ್ಯಾಚ್ ಬಳಿಕ ಪಾಕ್ ಟಿಂ ನಾಯಕ ಬಾಬರ್ ಆಝಮ್ ಅವರನ್ನು ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಮೈದಾನದಲ್ಲೇ ಭೇಟಿ ಮಾಡಿದರು. ಆಗ ಪಾಕ್ ನಾಯಕನಿಗೆ ಧೈರ್ಯ ತುಂಬಿದ ನಮ್ಮ ಕೊಹ್ಲಿ ಹಸ್ತಾಕ್ಷರ ಹಾಕಿದ ಭಾರತ ತಂಡದ 2 ಜೆರ್ಸಿ ನೀಡುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.

Discover what Virat Kohli gifted to Pakistan Captain

ಒಟ್ನಲ್ಲಿ ಭಾರತ & ಪಾಕಿಸ್ತಾನದ ನಡುವಿನ ಪಂದ್ಯವು ಕೇವಲ ಜಿದ್ದಾಜಿದ್ದಿನ ಆಟಕ್ಕೆ ಮಾತ್ರ ಸೀಮಿತವಾಗದೆ ಪ್ರೀತಿಯ ಪಾಠವನ್ನೂ ಹೇಳಿಕೊಟ್ಟಿದೆ. ಈ ಮೂಲಕ ವಿರಾಟ್ ಕೊಹ್ಲಿಯ ಮಾನವೀಯ ಗುಣಕ್ಕೆ ಇಡೀ ಜಗತ್ತು ಫಿದಾ ಆಗಿದೆ. ಅಲ್ದೆ ಕ್ರಿಕೆಟ್ ಅಭಿಮಾನಿಗಳು ಇದನ್ನ ನೋಡಿ ಜೈಹೋ ಅಂತಿದ್ದಾರೆ. ಪಾಕ್ ಅಭಿಮಾನಿಗಳು ಕೂಡ ಕೊಹ್ಲಿ ಗ್ರೇಟ್ ಅಂತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+