ಐಸಿಸಿ ವಿಶ್ವಕಪ್: ಭಾರತ ತಂಡ ವಿಶ್ವಕಪ್ ಚರಿತ್ರೆಯಲ್ಲಿ ಇದುವರೆಗೂ ಯಾರೂ ಮಾಡಲಾಗದ ಸಾಧನೆ ಮಾಡಿದೆ!

ಇಂಡಿಯನ್ ಕ್ರಿಕೆಟ್ ಟೀಂ ಅಂದ್ರೆ ಜಗತ್ತಿಗೆ ಒಂದು ಹೆಮ್ಮೆ ಇದೆ ಕ್ರಿಕೆಟ್ ಇತಿಹಾಸದಲ್ಲೆಲ್ಲಾ ನಮ್ಮ ಹೆಮ್ಮೆಯ ಭಾರತದ ಹೆಜ್ಜೆ ಗುರುತು ಮೂಡಿದೆ. ಹೀಗೆ ಭಾರತ ಕ್ರಿಕೆಟ್ ತಂಡ 1983 ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದು ದೊಡ್ಡ ಸಾಧನೆ ಮಾಡಿದೆ. ಹಾಗೇ 2023ರಲ್ಲಿ ಕೂಡ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿರುವ ಭಾರತ, ಈ ಸಾಧನೆಗೆ ಕೇವಲ 2 ಹೆಜ್ಜೆ ಮಾತ್ರ ಬಾಕಿ ಇದೆ. ಹೀಗಿದ್ದಾಗಲೇ ಇಂದು ಭಾರತ ಇಡೀ ವಿಶ್ವಕಪ್ ಚರಿತ್ರೆಯಲ್ಲಿ ಯಾರೂ ಮಾಡದ ಸಾಧನೆ ಮಾಡಿದೆ.

ಅಂದಹಾಗೆ ಇಂದು ಭಾರತ ತಂಡ ನೆದರ್ಲೆಂಡ್ಸ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವ ಆಡುತ್ತಿದೆ. ಅದರಲ್ಲೂ 48 ವರ್ಷಗಳ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಚರಿತ್ರೆಯಲ್ಲೇ ಈ ತನಕ ಯಾರೂ ಮಾಡದ ಸಾಧನೆ ಮಾಡಿದೆ ಭಾರತ. ಒಂದು ಕಡೆ ನೆದರ್ಲೆಂಡ್ಸ್ ವಿರುದ್ಧ, 400 ರನ್‌ಗಳನ್ನ ಗಳಿಸಿ ಇತಿಹಾಸ ಬರೆದಿರುವ ಭಾರತ, ಜೊತೆಗೆ ಹಿಂದೆ ಯಾರೂ ಮಾಡದ ಮತ್ತು ಮುಂದೆ ಯಾರು ಸುಲಭವಾಗಿ ಮುಟ್ಟೋದಕ್ಕೆ ಆಗದ ಸಾಧನೆ ಮಾಡಿದೆ. ಹಾಗಾದ್ರೆ ಅದು ಏನು?

Discover The Indian Cricket Team Records Against Netherlands Match In 2023 World Cup

ಭಾರತ ತಂಡ ಮುಟ್ಟಿದ್ದೆಲ್ಲಾ ಚಿನ್ನ!

ನಮ್ಮ ಬೆಂಗಳೂರಿನಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತ ತಂಡ, ನೆದರ್ಲೆಂಡ್ಸ್ ತಂಡದ ವಿರುದ್ಧ ಭರ್ಜರಿ 410 ರನ್ ಕಲೆಹಾಕಿದೆ. ಅದರಲ್ಲೂ ರೋಹಿತ್ ಶರ್ಮಾ 61, ಶುಭಮನ್ ಗಿಲ್ 51 ರನ್ ಸೇರಿದಂತೆ ಕಿಂಗ್ ವಿರಾಟ್ ಕೊಹ್ಲಿ 51 & ಶ್ರೇಯಸ್ ಐಯ್ಯರ್ 128 ರನ್, ಮತ್ತು ಕೆ.ಎಲ್. ರಾಹುಲ್ 102 ರನ್ ಗಳಿಸಿದ್ದಾರೆ. ಹೀಗೆ ಇವರೆಲ್ಲರ ಕೊಡುಗೆ ಪರಿಣಾಮ ಭಾರತ ತಂಡವು ಇಂದು ನೆದರ್ಲೆಂಡ್ಸ್ ವಿರುದ್ಧ 410 ಬಾರಿಸಿದೆ. ಈ ಮೂಲಕವೇ ಭಾರತ ವಿಶ್ವಕಪ್ ಇತಿಹಾಸದಲ್ಲಿ ಹಿಂದೆ ಯಾವುದೇ ತಂಡವು ಮಾಡಲಾಗದ & ಮುಂದೆ ಯಾರೂ ಸುಲಭವಾಗಿ ಸಾಧಿಸಲು ಆಗದ ಸಾಧನೆ ಮಾಡಿದೆ. ಏನದು ಗೊತ್ತಾ?

ಭಾರತದ 5 ಬ್ಯಾಟ್ಸ್‌ಮನ್‌ಗಳ ಅರ್ಧಶತಕ!

ಇಂದು ಭಾರತ ಕ್ರಿಕೆಟ್ ತಂಡದ ಮೊದಲ ಆಟಗಾರನಿಂದ ಹಿಡಿದು 5ನೇ ಆಟಗಾರನ ತನಕ ಎಲ್ಲರೂ ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ಇಡೀ ವಿಶ್ವಕಪ್ ಚರಿತ್ರೆಯಲ್ಲಿ ಯಾರೂ ಮಾಡಲಾಗದ ಸಾಧನೆ ಮಾಡಿದೆ ಭಾರತ. ಇದು ಹೊಸ ಇತಿಹಾಸ ನಿರ್ಮಿಸಿದಂತೆ ಆಗಿದ್ದು ಈ ಹಿಂದೆ ಯಾವುದೆ ತಂಡದ ಐವರು ಆಟಗಾರರು ಸಾಲಾಗಿ ಅರ್ಧ ಶತಕ ಅಂದ್ರೆ 50ಕ್ಕೂ ಹೆಚ್ಚು ರನ್ ಗಳಿಸಿರಲಿಲ್ಲ. ಆದರೆ ಈ ಬಾರಿ ಆ ಸಾಧನೆಯನ್ನ ಭಾರತ ತಂಡ ಮಾಡಿದ್ದು, ಕ್ರಿಕೆಟ್ ಜಗತ್ತಿನಲ್ಲಿ ತನ್ನ ಶಕ್ತಿ ಏನು ಎಂಬುದನ್ನ ಭಾರತ ಟೀಂನ ಆಟಗಾರರು ಮತ್ತೊಮ್ಮೆ ತೋರಿಸಿದ್ದಾರೆ.

Discover The Indian Cricket Team Records Against Netherlands Match In 2023 World Cup

400 ರನ್ ವಿಭಾಗದಲ್ಲೂ ಭಾರತದ ದಾಖಲೆ

ಒಂದು ಕಡೆ ಅರ್ಧಶತಕ ಗಳಿಸಿದ ವಿಚಾರದಲ್ಲೂ ಭಾರತ ದಾಖಲೆ ಬರೆದಿದೆ, ಇದರ ಜತೆಗೆ 400 ರನ್ ಗಳಿಕೆ ವಿಚಾರದಲ್ಲೂ ಭಾರತವು ಅಬ್ಬರಿಸಿದೆ. ಭಾರತ ಕ್ರಿಕೆಟ್ ತಂಡ ಈವರೆಗೂ ಒಟ್ಟು 7 ಬಾರಿ 400ಕ್ಕೂ ಹೆಚ್ಚು ರನ್ ಗಳಿಸಿದೆ. ಹೀಗೆ ಭಾರತ 400 ರನ್ ಗಳಿಸುವುದರಲ್ಲಿ ನಂ. 1 ಸ್ಥಾನ ಪಡೆಯಿತಾ? ಇಲ್ಲ, ಇಲ್ಲ ಭಾರತ ತಂಡಕ್ಕಿಂತಲೂ ದಕ್ಷಿಣ ಆಫ್ರಿಕಾ ತಂಡ ಈ ವಿಚಾರದಲ್ಲಿ ಮುಂದೆ ಇದೆ. ಆದರೆ ದಕ್ಷಿಣ ಆಫ್ರಿಕಾ ದಾಖಲೆಯನ್ನು ಸರಿಗಟ್ಟಲು ಈಗ ಭಾರತಕ್ಕೆ ಕೇವಲ ಒಂದೇ ಒಂದು ಹೆಜ್ಜೆ ಬಾಕಿ ಇದೆ.

ಹೌದು, ಭಾರತದ ಆಟಗಾರರು ಈವರೆಗೆ ಒಟ್ಟು 7 ಬಾರಿ 400ಕ್ಕೂ ಹೆಚ್ಚು ರನ್ ಗಳಿಸಿದ್ದರೆ ದಕ್ಷಿಣ ಆಫ್ರಿಕಾದ ತಂಡ 8 ಬಾರಿ 400ಕ್ಕೂ ಹೆಚ್ಚು ರನ್ ಗಳಿಸಿದೆ. ಇವರಿಬ್ಬರನ್ನು ಬಿಟ್ಟರೆ ಇಂಗ್ಲೆಂಡ್ ತಂಡ 5 ಬಾರಿ 400ಕ್ಕೂ ಹೆಚ್ಚು ರನ್ ಗಳಿಸಿದೆ ಮತ್ತು ಶ್ರೀಲಂಕಾ ತಂಡ ಒಟ್ಟು 2 ಬಾರಿ, ಆಸ್ಟ್ರೇಲಿಯಾ 2 ಬಾರಿ, ನ್ಯೂಜಿಲೆಂಡ್ ತಂಡ 2 ಬಾರಿ & ಜಿಂಬಾಬ್ವೆ ತಂಡ 1 ಬಾರಿ 400ಕ್ಕೂ ಹೆಚ್ಚು ರನ್ ಗಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+