Cricket World Cup: ಕನ್ನಡದ ಅಭಿಮಾನಿ ನ್ಯೂಜಿಲೆಂಡ್‌ನ ಈ ಆಟಗಾರ!

ಒಂದೇ ಒಂದು ಡಿಗ್ರಿ ಮುಗಿಸಿದರೆ ಸಾಕು, ಕೆಲವರಿಗೆ ಕನ್ನಡವೇ ಮರೆತು ಹೋಗುತ್ತೆ. ಹೀಗೆ ನಾಟಕ ಮಾಡುತ್ತಾ, ಇಂಗ್ಲಿಷ್ ಭಾಷಿಕರಂತೆ ಆಡ್ತಾರೆ. ಆದರೆ ಇಲ್ಲೊಬ್ಬ ಕನ್ನಡಿಗ ಹುಟ್ಟಿ ಬೆಳೆದದ್ದು ನ್ಯೂಜಿಲೆಂಡ್ ದೇಶದಲ್ಲೇ ಆಗಿದ್ರೂ, ಕನ್ನಡದ ಅಭಿಮಾನ ಮಾತ್ರ ಮರೆತಿಲ್ಲ. ಈ ಮೂಲಕ ಐಸಿಸಿ ಕ್ರಿಕೆಟ್ ವಿಶ್ವಕಪ್ ಸಮಯದಲ್ಲೇ ಗುಜರಾತ್‌ನ ಕ್ರಿಕೆಟ್ ಮೈದಾನದಲ್ಲಿ ಕನ್ನಡ ಕಹಳೆ ಮೊಳಗಿದೆ.

ಅಂದಹಾಗೆ ನಿನ್ನೆಯಿಂದ ಆರಂಭವಾಗಿರುವ ಐಸಿಸಿ ವರ್ಲ್ಡ್ ಕಪ್ ಇದೀಗ ಜಗತ್ತಿನ ಗಮನ ಸೆಳೆಯುತ್ತಿದೆ. ಅದ್ರಲ್ಲೂ ನಿನ್ನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ಪರವಾಗಿ ರಚಿನ್‌ ರವೀಂದ್ರ ಭರ್ಜರಿ ಶತಕ ಸಿಡಿಸಿ ಗಮನ ಸೆಳೆದರು. ಹೆಸರು ಕೇಳಿದರೆ ಸಾಕು ರಚಿನ್‌ ರವೀಂದ್ರ ಭಾರತ ಮೂಲದವರು ಅಂತಾ ಹೇಳಬಹುದು. ಆದರೆ ಇದನ್ನೂ ಮೀರಿ ರಚಿನ್‌ ರವೀಂದ್ರ ಕನ್ನಡ ನೆಲದ ಮೂಲದವರು ಅಂತಾ ನಿಮಗೆ ಗೊತ್ತಾ? ಹೀಗೆ ಕರ್ನಾಟಕ ಮೂಲದಿಂದ ರಚಿನ್‌ರ ಕುಟುಂಬ ನ್ಯೂಜಿಲೆಂಡ್‌ಗೆ ಹೋಗಿ ನೆಲೆಸಿದ್ದಾರೆ. ನಿನ್ನೆ ಮ್ಯಾಚ್ ಮುಗಿದ ಬಳಿಕ ಕನ್ನಡದ ಮೇಲೆ ತಮಗೆಷ್ಟು ಅಭಿಮಾನ ಅನ್ನೋದನ್ನೂ ರಚಿನ್‌ ರವೀಂದ್ರ ತೋರಿಸಿದ್ದಾರೆ.

Discover how this New Zealand player can understand Kannada

ಕನ್ನಡ ಅರ್ಥವಾಗುತ್ತೆ, ಮಾತನಾಡಲು...

ಹೌದು ನಿನ್ನೆ ರಚಿನ್‌ ರವೀಂದ್ರ ಇಂಗ್ಲೆಂಡ್ ವಿರುದ್ಧ ನ್ಯೂಜಲೆಂಡ್ ಪರವಾಗಿ ಶತಕ ಸಿಡಿಸಿ ಸಂಭ್ರಮಿಸಿದರು. ಪಂದ್ಯ ಮುಗಿದ ಬಳಿಕ ಸ್ಟಾರ್ ಸ್ಪೋರ್ಟ್ಸ್ ಕನ್ನಡ ನಿರೂಪಕರು ರಚಿನ್ ಅವರ ಬಳಿ ಕನ್ನಡದಲ್ಲಿ ಮಾತನಾಡಿದ್ದಾರೆ. ಆದ್ರೆ ನ್ಯೂಜಿಲೆಂಡ್ ನೆಲದಲ್ಲಿ ಹುಟ್ಟಿ ಬೆಳೆದ ಕಾರಣ ರಚಿನ್‌ ರವೀಂದ್ರಗೆ ಸ್ಪಷ್ಟವಾಗಿ ಕನ್ನಡ ಮಾತನಾಡಲು ಬರಲ್ಲ. ಹೀಗಿದ್ರೂ ರಚಿನ್ ಅವರಿಗೆ ಕನ್ನಡ ಸ್ಪಷ್ಟವಾಗಿ ಅರ್ಥವಾಗುತ್ತೆ. ಹೀಗೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯ ನಿರೂಪಕರು ಕನ್ನಡದಲ್ಲಿ ಮಾತನಾಡಿ ಪ್ರಶ್ನೆ ಕೇಳಿದಾಗ ಇಂಗ್ಲಿಷ್‌ನಲ್ಲಿ ಉತ್ತರ ಕೊಟ್ಟಿರುವ ರಚಿನ್, ತಮ್ಮ ಕನ್ನಡ ಪ್ರೀತಿ ಎಷ್ಟು ಎಂಬುದನ್ನ ತೋರಿಸಿದ್ದಾರೆ.

ಅಪ್ಪ ಬೆಂಗಳೂರು, ಮಗ ನ್ಯೂಜಿಲೆಂಡ್!

ಮೊದಲೇ ಹೇಳಿದಂತೆ ರಚಿನ್‌ ರವೀಂದ್ರ ಭಾರತ ಮೂಲದ ಆಟಗಾರ. ರವೀಂದ್ರ ಅವರ ತಂದೆ ರವಿ ಕೃಷ್ಣಮೂರ್ತಿ ಸಾಫ್ಟ್‌ವೇರ್ ಇಂಜಿನಿಯರ್. ಆದ್ರೆ ಕೆಲಸದ ಕಾರಣಕ್ಕಾಗಿ 90ರ ದಶಕದಲ್ಲಿ ಬೆಂಗಳೂರಿಂದ ನ್ಯೂಜಿಲೆಂಡ್‌ಗೆ ಹೋಗಿದ್ದರು ರಚಿನ್‌ ರವೀಂದ್ರ ತಂದೆ. ಹೀಗೆ ನ್ಯೂಜಿಲೆಂಡ್‌ಗೆ ಹೋಗಿ ಸೆಟಲ್ ಆಗಿದ್ದ ರವಿ ಕೃಷ್ಣಮೂರ್ತಿ ಅವರಿಗೆ ರಚಿನ್‌ ಜನಿಸಿದ್ದರು. 1999ರ ನವೆಂಬರ್ 18ರಂದು ರಚಿನ್‌ ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್ ನಗರದಲ್ಲಿ ಜನಿಸಿದ್ದರು. ಇನ್ನು ಹೀಗೆ ರಚಿನ್ ಅವರಿಗೆ ಈ ಹೆಸರು ಬರಲು ಕಾರಣ ಏನು ಗೊತ್ತಾ?

Discover how this New Zealand player can understand Kannada

ರಾಹುಲ್ ದ್ರಾವಿಡ್ + ಸಚಿನ್ = ರಚಿನ್!

ರಚಿನ್ ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರತಿಭೆ ಮೂಲಕವೇ ನ್ಯೂಜಿಲೆಂಡ್ ಅಂಡರ್ 19 ತಂಡ ಸೇರಿ ಮಿಂಚಿದ್ದರು. ನ್ಯೂಜಿಲೆಂಡ್‌ ದೇಸಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಅವರನ್ನು ರಾಷ್ಟ್ರೀಯ ತಂಡಕ್ಕೆ ಕೂಡ ಆಯ್ಕೆ ಮಾಡಲಾಗಿತ್ತು. ರಚಿನ್ ತಂದೆ ರವಿ ಕೃಷ್ಣಮೂರ್ತಿ ಅವ್ರು ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿ. ಇದೇ ಕಾರಣಕ್ಕೆ ರಚಿನ್ ಅವರಿಗೆ ಈ ಹೆಸರು ಇಟ್ಟಿದ್ದರಂತೆ.

ರಾಹುಲ್ ಅವರ ಆರ್‌ & ಸಚಿನ್ ಹೆಸರಿಂದ ಚಿನ್ ಸಂಯೋಜಿಸಿ ಮಗನಿಗೆ ಹೆಸರು ಇಟ್ಟಿದ್ದರಂತೆ. ಹೀಗಾಗಿ ರಚಿನ್ ಹೆಸರನ್ನು ಇಟ್ಟುಕೊಂಡಿದ್ದ ರಚಿನ್‌ ರವೀಂದ್ರ ಇಂಗ್ಲೆಂಡ್ ತಂಡದ ಬೌಲರ್‌ಗಳ ಬೆವರು ಇಳಿಸಿ ಮೆರೆದಿದ್ದರು. ನಿನ್ನೆ ಪಂದ್ಯದಲ್ಲಿ ಒಟ್ಟು 96 ಬಾಲ್‌ಗಳಲ್ಲಿ 123 ರನ್ ಗಳಿಸಿದ ರಚಿನ್‌ ರವೀಂದ್ರ ಇಡೀ ವಿಶ್ವದ ಗಮನ ಸೆಳೆದರು. ರಚಿನ್ ಅವರ 123 ರನ್‌ಗಳಲ್ಲಿ 5 ಸಿಕ್ಸರ್ & 11 ಬೌಂಡರಿ ಕೂಡ ಸೇರಿತ್ತು. ರಚಿನ್ ರವೀಂದ್ರ ನ್ಯೂಜಿಲೆಂಡ್ ಪರ ಇಲ್ಲಿಯ ತನಕ 3 ಟೆಸ್ಟ್, 12 ಏಕದಿನ ಹಾಗೂ 18 ಟಿ20 ಪಂದ್ಯಗಳನ್ನು ಆಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+