IPL 2023: ಈ ಐವರು ಆಟಗಾರರು ಮುಂದಿನ ಐಪಿಎಲ್ ಆಡುವುದು ಅನುಮಾನ

ಸದ್ಯ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿಯೇ ಅನೇಕ ಕ್ರಿಕೆಟ್ ಪ್ರೇಮಿಗಳು ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ನೆಚ್ಚಿನ ಆಟಗಾರ ಆಡ್ತಾರಾ ಇಲ್ವಾ ಎಂಬ ಅನುಮಾನಕ್ಕೊಳಗಾಗಿದ್ದಾರೆ.

ವಯಸ್ಸಾದ ಕಾರಣ ನಿವೃತ್ತಿ ತೆಗೆದುಕೊಂಡು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರಾಗಿದ್ದ ತಮ್ಮ ಫೇವರಿಟ್ ಕ್ರಿಕೆಟಿಗರ ಆಟವನ್ನು ಈ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೂಲಕ ಕಣ್ತುಂಬಿಕೊಳ್ಳುತ್ತಿದ್ದ ಹಲವಾರು ಅಭಿಮಾನಿಗಳಿಗೆ ಈ ಬೇಸರ ಕಾಡುತ್ತಿದೆ.

Dhoni to Dinesh Karthik: List of 5 players who may announce IPL retirement before IPL 2024

ಹೌದು, ಹಲವು ಆಟಗಾರರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಆಡಿ ಮುಗಿಸಿದ ಬಳಿಕ ಐಪಿಎಲ್‌ಗೂ ಸಹ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಹೀಗಾಗಿ ಇದೇ ತಮ್ಮ ನೆಚ್ಚಿನ ಆಟಗಾರರ ಕೊನೆಯ ಬಾರಿಯ ಐಪಿಎಲ್ ಆವೃತ್ತಿ ಎಂದು ಈ ಕೆಳಕಂಡ ಕ್ರಿಕೆಟಿಗರ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ.

5. ಅಂಬಾಟಿ ರಾಯುಡು

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಿಂಚಿದ ಬಳಿಕ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಆಟಗಾರರ ಪೈಕಿ ಅಂಬಾಟಿ ರಾಯುಡು ಸಹ ಒಬ್ಬರು. 2019ರ ಐಸಿಸಿ ವಿಶ್ವಕಪ್‌ಗೆ ಪ್ರಕಟವಾಗಿದ್ದ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದಾದ ಆಟಗಾರ ಎಂಬ ಭರವಸೆ ಮೂಡಿಸಿದ ಅಂಬಾಟಿ ರಾಯುಡು ಅದರಲ್ಲಿ ಸಫಲರಾಗಿರಲಿಲ್ಲ. ಐಪಿಎಲ್‌ನಲ್ಲಿ 179 ಇನ್ನಿಂಗ್ಸ್ ಆಡಿ 4250 ರನ್ ಬಾರಿಸಿರುವ ಅಂಬಾಟಿ ರಾಯುಡು ಒಂದು ಶತಕ ಹಾಗೂ 22 ಅರ್ಧಶತಕವನ್ನೂ ಸಹ ಬಾರಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂಬಾಟಿ ರಾಯುಡು ಅಂತಹ ಅಬ್ಬರದ ಆಟವನ್ನು ಆಡುವಲ್ಲಿ ಯಶಸ್ವಿಯಾಗಿಲ್ಲ. ಅಲ್ಲದೇ ಕಳೆದ ವರ್ಷ ಅಂಬಾಟಿ ರಾಯುಡು ನಿವೃತ್ತಿ ತೆಗೆದುಕೊಳ್ಳುತ್ತಿದ್ದೇನೆ ಎಂಬ ಟ್ವೀಟ್ ಸಹ ಮಾಡಿದ್ದರು. ಹೀಗಾಗಿ ನಿವೃತ್ತಿ ಚಿಂತನೆ ರಾಯುಡು ತಲೆಯಲ್ಲಿದ್ದು, ಈ ಬಾರಿಯ ಟೂರ್ನಿ ಮುಕ್ತಾಯವಾದ ಬಳಿಕ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ.

Dhoni to Dinesh Karthik: List of 5 players who may announce IPL retirement before IPL 2024

4. ಅಮಿತ್ ಮಿಶ್ರಾ

ಅಮಿತ್ ಮಿಶ್ರಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಸ್ಪಿನ್ನರ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತಹ ಆಟಗಾರ. ಒಟ್ಟು 156 ಪಂದ್ಯಗಳಲ್ಲಿ 169 ವಿಕೆಟ್‌ಗಳನ್ನು ಪಡೆದಿರುವ ಅಮಿತ್ ಮಿಶ್ರಾ ಸದ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡುತ್ತಿದ್ದಾರೆ. ಮಿಶ್ರಾ ವಯಸ್ಸು 40 ಮುಟ್ಟಿರುವ ಕಾರಣ ಮುಂದಿನ ಐಪಿಎಲ್ ಆರಂಭಕ್ಕೂ ಮುನ್ನ ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ.

3. ದಿನೇಶ್ ಕಾರ್ತಿಕ್

ಹಲವಾರು ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಬ್ಬರಿಸಿದ ಬಳಿಕ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಹೆಚ್ಚು ವಯಸ್ಸಾದ ಮೇಲೂ ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದು, ಅದರಲ್ಲಿಯೂ ಟಿ ಟ್ವೆಂಟಿ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು ದಿನೇಶ್ ಕಾರ್ತಿಕ್ ಮಾತ್ರ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮೇಲೆ ದಿನೇಶ್ ಕಾರ್ತಿಕ್ ಇಷ್ಟರ ಮಟ್ಟಿಗೆ ಮಿಂಚಿದ್ದು, ಇತ್ತೀಚೆಗಿನ ದಿನಗಳಲ್ಲಿ ಅಂತಹ ಪ್ರದರ್ಶನ ನೀಡಲಾಗುತ್ತಿಲ್ಲ. ಹೀಗಾಗಿ ದಿನೇಶ್ ಕಾರ್ತಿಕ್ ಸಹ ಮುಂದಿನ ಐಪಿಎಲ್ ಆಡುವುದು ಅನುಮಾನ ಎನ್ನಬಹುದು.

2. ಇಶಾಂತ್ ಶರ್ಮಾ

ಟೆಸ್ಟ್ ಕ್ರಿಕೆಟ್‌ನಲ್ಲಿ ಅಬ್ಬರದ ಪ್ರದರ್ಶನವನ್ನು ನೀಡಿರುವ ಇಶಾಂತ್ ಶರ್ಮಾ ಚುಟುಕು ಕ್ರಿಕೆಟ್‌ನಲ್ಲಿ ಹೆಚ್ಚೇನೂ ಯಶಸ್ಸು ಸಾಧಿಸಲಿಲ್ಲ. ಐಪಿಎಲ್‌ನಲ್ಲಿ 93 ಪಂದ್ಯಗಳಲ್ಲಿ 72 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚೇನೂ ಅವಕಾಶ ಪಡೆದುಕೊಳ್ಳದ ಇಶಾಂತ್ ಶರ್ಮಾ ಐಪಿಎಲ್‌ನಿಂದ ನಿವೃತ್ತಿ ಹೊಂದುವ ಸಾಧ್ಯತೆಗಳಿವೆ.

1. ಎಂಎಸ್ ಧೋನಿ

ವಿಶ್ವ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೇ ಇಂಡಿಯನ್ ಪ್ರೀಮಿಯರ್ ಲೀಗ್ ಕಂಡ ಅತ್ಯದ್ಭುತ ನಾಯಕ ಎನಿಸಿಕೊಂಡಿರುವ ಎಂ ಎಸ್ ಧೋನಿ ಬಗ್ಗೆ ನಿಮಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನು ಧೋನಿ ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡಿದ್ದು ಅಭಿಮಾನಿಗಳಿಗೋಸ್ಕರ ಇನ್ನೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಈಗಾಗಲೇ ಹಲವಾರು ಬಾರಿ ಎಂ ಎಸ್ ಧೋನಿ ಐಪಿಎಲ್‌ನಿಂದಲೂ ನಿವೃತ್ತಿ ಹೊಂದಲಿದ್ದಾರೆ ಎಂಬ ಸುದ್ದಿ ಹರಿದಾಡಿದ್ದು, ಈ ಬಾರಿ ಕೊನೆಯ ಆವೃತ್ತಿ ಎಂದು ಹೇಳಲಾಗ್ತಿದೆ. ಹೀಗಾಗಿ ಮುಂದಿನ ಐಪಿಎಲ್ ಆವೃತ್ತಿಯಿಂದ ಧೋನಿ ಹೊರಗುಳಿದು ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+