ಸ್ವಾತಂತ್ರ್ಯ ದಿನದಂದು ಟೀಮ್ ಇಂಡಿಯಾ ಪರ ಐತಿಹಾಸಿಕ ದಾಖಲೆ ಬರೆದ ಕನ್ನಡಿಗ ದೇವದತ್ ಪಡಿಕ್ಕಲ್‌.. ನಂಬರ್ 1

Devdutt Padikkal: ಶ್ರೀಲಂಕಾದ ಗಾಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕದ ದೇವದತ್ ಪಡಿಕ್ಕಲ್ ಅವರು ಶತಕ ಸಿಡಿಸಿ ಐತಿಹಾಸಿಕ ದಾಖಲೆ ಮಾಡಿದ್ದಾರೆ. ಈ ಅದ್ಭುತ ಇನಿಂಗ್ಸ್‌ನೊಂದಿಗೆ ಅವರು ವಿರಾಟ್ ಕೊಹ್ಲಿ ಅವರಂತಹ ದಿಗ್ಗಜ ಆಟಗಾರರ ವಿಶೇಷ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ದೇವದತ್ ಪಡಿಕ್ಕಲ್ ಅವರು ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಭಾರತದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು ವಿರಾಟ್ ಕೊಹ್ಲಿ 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ (ODI) ಪಂದ್ಯದಲ್ಲಿ ಆಗಸ್ಟ್ 15ರಂದು ಶತಕ (114*) ಸಿಡಿಸಿದ್ದರು. ಆದರೆ, ಸ್ವಾತಂತ್ರ್ಯ ದಿನದಂದು ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಮಹತ್ವದ ದಾಖಲೆಯನ್ನು ಕನ್ನಡಿಗ ದೇವ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

Devdutt Padikkal Creates New History Century on Independence Day Joins Virat Kohli in Elite List

ಶ್ರೀಲಂಕಾ ಬೌಲರ್‌ಗಳ ಮೇಲೆ ದಂಡಯಾತ್ರೆ

ಗಾಯದಿಂದಾಗಿ ಸಾಯಿ ಸುದರ್ಶನ್ ಈ ಪಂದ್ಯದಿಂದ ಹೊರಗುಳಿದಿದ್ದರು. ಇನ್ನೂ ತಮ್ಮ ಮೂರನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಪಡಿಕ್ಕಲ್ ಅವರಿಗೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ದೊರೆಯಿತು. ಈ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಿಸಿಕೊಂಡ ಅವರು ಶ್ರೀಲಂಕಾದ ಸ್ಪಿನ್ ಬೌಲರ್‌ಗಳ ಮೇಲೆ ದಂಡಯಾತ್ರೆ ಮಾಡಿ ಭರ್ಜರಿ ಶತಕ ಸಿಡಿಸಿ ಮಿಂಚಿದರು.

ದೇವದತ್ ಪಡಿಕ್ಕಲ್ ಅತ್ಯದ್ಭುತ ಸಾಧನೆ

ಸೆಪ್ಟೆಂಬರ್ 2024ರಲ್ಲಿ ಶುಬ್‌ಮನ್ ಗಿಲ್ ಬಾಂಗ್ಲಾದೇಶದ ವಿರುದ್ಧ 3ನೇ ಕ್ರಮಾಂಕದಲ್ಲಿ ಶತಕ ಸಿಡಿಸಿದ ನಂತರ, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಇದೇ ಕ್ರಮಾಂಕದ ಬ್ಯಾಟರ್ ಸಿಡಿಸಿದ ಮೊದಲ ಶತಕ ಇದಾಗಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಶತಕ ಬಾರಿಸಿದ ಭಾರತದ ಎರಡನೇ ಎಡಗೈ ಬ್ಯಾಟರ್ ಎಂಬ ಕೀರ್ತಿಗೆ ದೇವದತ್ ಪಡಿಕ್ಕಲ್ ಪಾತ್ರರಾಗಿದ್ದಾರೆ. 2002ರಲ್ಲಿ ಸೌರವ್ ಗಂಗೂಲಿ (ಜಿಂಬಾಬ್ವೆ ವಿರುದ್ಧ) ಈ ಸಾಧನೆ ಮಾಡಿದ್ದರು.

ಒಟ್ಟಿನಲ್ಲಿ ಹೇಳುವುದಾದರೆ ಟೆಸ್ಟ್‌ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿ ಶತಕ ಸಿಡಿಸಿದ 6ನೇ ಭಾರತೀಯ ಎಡಗೈ ಬ್ಯಾಟರ್‌ಗಳ ಸಾಲಿ ದೇವದತ್ ಪಡಿಕ್ಕಲ್ ಸೇರಿದ್ದಾರೆ. (ವಿನೋದ್ ಕಾಂಬ್ಳಿ, ಸೌರವ್ ಗಂಗೂಲಿ, ಸಲೀಮ್ ದುರಾನಿ, ಅಜಿತ್ ವಾಡೇಕರ್ ಮುಂತಾದವರ ಸಾಲಿಗೆ ಸೇರಿದ್ದಾರೆ).

ಅಜೇಯ 131 ರನ್ ಸಿಡಿಸಿದ ದೇವ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ಕೆ.ಎಲ್.ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಿದರು. ಬಳಿಕ ಕ್ರೀಸ್‌ಗೆ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ ದಿನದಾಟದ ಅಂತ್ಯಕ್ಕೆ ಅಜೇಯ 131 ರನ್ ಗಳಿಸಿ ಕ್ರೀಸ್‌ನಲ್ಲಿದ್ದು, ರಿಷಭ್ ಪಂತ್ ಜೊತೆಗೂಡಿ ಭಾರತಕ್ಕೆ ಆಸರೆಯಾಗಿದ್ದಾರೆ. ಟೀಮ್ ಇಂಡಿಯಾ ಮೊದಲ ದಿನದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 288 ರನ್ ಕಲೆಹಾಕಿದೆ.

ಸಂಜಯ್ ಮಂಜ್ರೇಕರ್ ಹೇಳಿದ್ದೇನು?

ದೇವದತ್ ಪಡಿಕ್ಕಲ್ ಈ ಸ್ಫೋಟಕ ಬ್ಯಾಟಿಂಗ್ ಬಗ್ಗೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಸಂಜಯ್ ಮಂಜ್ರೇಕರ್ ಅವರು ಹೊಗಳಿದ್ದಾರೆ. 'ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಪಡಿಕ್ಕಲ್ ಭಾರತ ತಂಡಕ್ಕೆ ಸಿಕ್ಕ ದೇವದೂತನಿದ್ದಂತೆ,' ಎಂದು ಸಾಮಾಜಿಕ ಜಾಲತಾಣ ಟ್ವಿಟ್‌ನಲ್ಲಿ ಬರೆದುಕೊಂಡಿದ್ದಾರೆ. 'ಭಾರತಕ್ಕೆ 3ನೇ ಕ್ರಮಾಂಕದಲ್ಲಿ ಸ್ಪಿನ್ನರ್‌ಗಳನ್ನು ದಂಡಿಸುವ ಇಂತಹ ಉತ್ತಮ ಎಡಗೈ ಬ್ಯಾಟರ್ ಅಗತ್ಯವಿತ್ತು. ಆದ್ದರಿಂದ ಮುಂದಿನ ಪಂದ್ಯಗಳಲ್ಲೂ ಇವರನ್ನು ಇದೇ ಕ್ರಮಾಂಕದಲ್ಲಿ ಕಣಕ್ಕಿಳಿಸುವುದು ತಂಡಕ್ಕೆ ಲಾಭದಾಯಕ,' ಎಂದು ಅವರು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+