• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Breaking; ಐಪಿಎಲ್ ಬೆಟ್ಟಿಂಗ್: ದೆಹಲಿ ಪೊಲೀಸರಿಂದ 6 ಮಂದಿ ಬಂಧನ

|
Google Oneindia Kannada News

ನವದೆಹಲಿ, ಮೇ 22: ದೆಹಲಿ ಪೊಲೀಸರು ಐಪಿಎಲ್ ಬೆಟಿಂಗ್ ಜಾಲವೊಂದನ್ನು ಭೇದಿಸಿದ್ದಾರೆ. ಚಾಂದರ್ ವಿಹಾರ್ ಪ್ರದೇಶದಲ್ಲಿ ಭಾನುವಾರ ಪೊಲೀಸರು ದಾಳಿ ನಡೆಸಿ 6 ಮಂದಿಯನ್ನು ಬಂಧಿಸಿದ್ದಾರೆ.

"ಮೇ 15ರಂದು ಸಿಕ್ಕ ಮಾಹಿತಿ ಆಧರಿಸಿ ದೆಹಲಿ ಪೊಲೀಸರ ತಂಡವೊಂದನ್ನು ರಚಿಸಲಾಯಿತು. ಮಾಹಿತಿ ನೀಡಿದ ವ್ಯಕ್ತಿಯ ಜೊತೆ ಸೇರಿ ಪೊಲೀಸರ ತಂಡವು ಬೆಟ್ಟಿಂಗ್ ದಂಧೆ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿದೆ. ಲ್ಯಾಪ್‌ಟಾಪ್ ಮತ್ತಿತರ ಸಾಧನಗಳ ಮೂಲಕ ಐಪಿಎಲ್ ಪಂದ್ಯಗಳ ಮೇಲೆ ಆರೋಪಿಗಳು ಬೆಟ್ಟಿಂಗ್ ನಡೆಸುತ್ತಿದ್ದುದು ಕಂಡುಬಂದಿತು" ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

 6 ತಿಂಗಳ ನಂತರ ಯುವಕನ ಅಸ್ಥಿಪಂಜರ ಪತ್ತೆ: ಅದೊಂದು ದುರಂತ ಪ್ರೇಮ ಕಥೆ 6 ತಿಂಗಳ ನಂತರ ಯುವಕನ ಅಸ್ಥಿಪಂಜರ ಪತ್ತೆ: ಅದೊಂದು ದುರಂತ ಪ್ರೇಮ ಕಥೆ

ದಾಳಿ ಮಾಡಿದ ಸ್ಥಳದಲ್ಲಿ ಪೊಲೀಸರು 10 ಮೊಬೈಲ್ ಫೋನ್, 2 ಲ್ಯಾಪ್‌ಟಾಪ್, 3 ಇಂಟರ್ನೆಟ್ ರೂಟರ್ಸ್, 2 ಎಲ್‌ಇಡಿ ಟಿವಿ, ವಾಯ್ಸ್ ರೆಕಾರ್ಡರ್, ಕಾಲ್ ಮರ್ಜರ್ ಮೈಕ್ರೋಫೋನ್, 2 ನೋಟುಪುಸ್ತಕಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸ್ಥಳದಲ್ಲಿ 74,740 ರೂ ನಗದು ಹಣ ಜಪ್ತಿಯಾಗಿದೆ. ಐದು ಮೊಬೈಲ್ ಫೋನ್‌ಗಳಿಗೆ ಜೋಡಿತವಾದ ಬೆಟ್ಟಿಂಗ್ ಸಾಧನ ಇರುವ ಒಂದು ಸೂಟ್‌ಕೇಸ್ ಕೂಡ ಸ್ಥಳದಲ್ಲಿ ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಟ್ಟಿಂಗ್ ನಡೆಸುತ್ತಿದ್ದರೆನ್ನಲಾದ ಎಲ್ಲಾ ಆರು ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಜೂಜಾಟ ಕಾಯ್ದೆಯ 3, 4, 9, 55 ಸೆಕ್ಷನ್ ಅಡಿಯಲ್ಲಿ ದೆಹಲಿಯ ನಿಹಾಲ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಪ್ರಕರಣದಲ್ಲಿ ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದ್ದು, ಪೊಲೀಸ್ ಕಸ್ಟಡಿಗೆ ಕೇಳಲಿದ್ಧಾರೆ.

ಕೈಯಲ್ಲಿ ಝಣ ಝಣ ಕಾಂಚಾಣ.. ಉಪತಹಸೀಲ್ದಾರ್ ಎಸಿಬಿ ಬಲೆಗೆ..ಕೈಯಲ್ಲಿ ಝಣ ಝಣ ಕಾಂಚಾಣ.. ಉಪತಹಸೀಲ್ದಾರ್ ಎಸಿಬಿ ಬಲೆಗೆ..

Delhi Police Busts IPL Betting Racket, Arrests 6 Persons

ಇಂಗ್ಲೆಂಡ್ ಮೊದಲಾದ ಕಡೆ ಕ್ರಿಕೆಟ್ ಬೆಟ್ಟಿಂಗ್ ಕಾನೂನುಬದ್ಧವಿದೆ. ಆದರೆ, ಭಾರತದಲ್ಲಿ ಬೆಟ್ಟಿಂಗ್ ಸೇರಿದಂತೆ ಯಾವುದೇ ರೀತಿಯ ಜೂಜಾಟವನ್ನು ನಿಷೇಧಿಸಲಾಗಿದೆ. ಆದರೂ ಅನೇಕ ಕಡೆ ಕ್ರಿಕೆಟ್ ಬೆಟ್ಟಿಂಗ್ ಕದ್ದುಮುಚ್ಚಿ ನಡೆಯುತ್ತಿರುವುದು ಆಗಾಗ ಕಂಡುಬರುತ್ತಲೇ ಇದೆ. ಇದೇ ಬೆಟ್ಟಿಂಗ್ ದಂಧೆ ಕಾರಣಕ್ಕೆ ಕ್ರಿಕೆಟ್ ಪಂದ್ಯಗಳು ಫಿಕ್ಸ್ ಆಗುವ ಅಪಾಯ ಇದೆ. ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದಲ್ಲಿ ಕೆಲ ಆಟಗಾರರು ಸಿಲುಕಿಕೊಂಡಿರುವುದೂ ಉಂಟು.

(ಒನ್ಇಂಡಿಯಾ ಸುದ್ದಿ)

English summary
Delhi Police team have raided a place and found betting racket active there. Six persons have been arrested by the police
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X