KL Rahul: ಡೆಲ್ಲಿ ಕ್ಯಾಪಿಟಲ್ಸ್‌ಗೆ ಹೊಸ ಸಂಕಷ್ಟ: ಕೆಎಲ್ ರಾಹುಲ್ ಆಡೋದು ಅನುಮಾನ!

ಐಪಿಎಲ್ 2025ರ ಆವೃತ್ತಿಗಾಗಿ ಹೊಸ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸಜ್ಜಾಗುತ್ತಿದೆ. ಅಕ್ಷರ್ ಪಟೇಲ್ ಈ ಬಾರಿ ನಾಯಕರಾಗಿ ನೇಮಕವಾಗಿದ್ದು ಮೊದಲ ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿದೆ. ವಿಶಾಖಪಟ್ಟಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎರಡು ಪಂದ್ಯಗಳನ್ನು ಆಡಲಿದ್ದು ಇದನ್ನು ಎರಡನೇ ತವರಿನ ಅಂಗಳ ಮಾಡಿಕೊಂಡಿದೆ.

ಮಾರ್ಚ್ 24ರ ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಆಡಲಿದ್ದಾರೆ. ವಿಶಾಖಪಟ್ಟಣದ ಡಾ. ವೈ. ಎಸ್‌ ರಾಜಶೇಖರ್ ರೆಡ್ಡಿ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಮೊದಲ ಪಂದ್ಯಕ್ಕೆ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೊಸ ತಲೆನೋವು ಶುರುವಾಗಿದೆ.

Delhi capitals worry over kl rahuls availability ipl 2025

ತಂಡದ ಪ್ರಮುಖ ಬ್ಯಾಟರ್, ಕನ್ನಡಿಗ ಕೆಎಲ್ ರಾಹುಲ್ ಮೊದಲ ಎರಡು ಪಂದ್ಯಗಳಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಕೆಎಲ್ ರಾಹುಲ್‌ರನ್ನು ಡೆಲ್ಲಿ ಕ್ಯಾಪಿಟಲ್ಸ್ ಮೆಗಾ ಹರಾಜಿನಲ್ಲಿ 14 ಕೋಟಿ ರೂಪಾಯಿ ಕೊಟ್ಟು ಪಡೆದುಕೊಂಡಿದೆ.

ಮಿಚೆಲ್ ಸ್ಟಾರ್ಕ್ ಪತ್ನಿ ಅಲಿಸಾ ಹೀಲಿ ಮಾಹಿತಿ

ಮೊದಲ ಎರಡು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಆಡುವುದು ಅನುಮಾನ ಎಂದು ಆಸ್ಟ್ರೇಲಿಯಾ ಮಹಿಳಾ ನಾಯಕಿ ಅಲಿಸಾ ಹೀಲಿ ಹೇಳಿದ್ದಾರೆ. ಅಲಿಸಾ ಹೀಲಿ ಆಸ್ಟ್ರೇಲಿಯಾ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರ ಪತ್ನಿಯಾಗಿದ್ದಾರೆ. ಕೆಎಲ್ ರಾಹುಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಮೊದಲ ಎರಡು ಪಂದ್ಯಗಳನ್ನು ಕಳೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಹ್ಯಾರಿ ಬ್ರೂಕ್ ಐಪಿಎಲ್‌ನಿಂದ ಹಿಂದೆ ಸರಿದ ಬಳಿಕ ಕೆಎಲ್ ರಾಹುಲ್ ಕೂಡ ಎರಡು ಪಂದ್ಯಗಳಲ್ಲಿ ಆಡದೇ ಇರುವುದು ತಂಡದ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಲಿದೆ. ಈ ಬಗ್ಗೆ ಮಾತನಾಡಿರುವ ಅಲಿಸಾ ಹೀಲಿ "ಹ್ಯಾರಿ ಬ್ರೂಕ್ ಅವರಿಗೆ ಬದಲಿ ಆಟಗಾರ ಯಾರಾಗುತ್ತಾರೆ ಎಂದು ನೋಡುವುದು ಆಸಕ್ತಿದಾಯಕವಾಗಿರುತ್ತದೆ. ಕೆಎಲ್ ರಾಹುಲ್ ಇದ್ದಾರೆ, ಆದರೆ ಮೊದಲ ಎರಡು ಪಂದ್ಯಗಳಲ್ಲಿ ಅವರು ಆಡುವುದು ಅನುಮಾನ, ಅವರು ತಮ್ಮ ಮಗುವಿಗಾಗಿ ಕಾಯುತ್ತಿದ್ದಾರೆ" ಎಂದು ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಯುವ ಆಟಗಾರರು ಇದ್ದು ಟಿ20 ಇನ್ನಿಂಗ್ಸ್ ಆಡಬಲ್ಲ ಕೆಎಲ್ ರಾಹುಲ್ ಕೂಡ ಇದ್ದು, ತಂಡದ ಮೊದಲ ಪಂದ್ಯಕ್ಕಾಗಿ ಕಾಯುತ್ತಿದ್ದೇನೆ ಎಂದು ಹೀಲಿ ಯೂಟ್ಯೂಬ್ ಚಾನೆಲ್ ಲಿಸ್ಟ್‌ಎನ್‌ಆರ್ ಸ್ಪೋರ್ಟ್‌ನಲ್ಲಿ ಹೇಳಿದ್ದಾರೆ. ಕೆಎಲ್ ರಾಹುಲ್ ಆಡದೇ ಇದ್ದರೆ ಕರುಣ್ ನಾಯರ್ ಅಥವಾ ಅಶುತೋಷ್ ಶರ್ಮಾ ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಬಹುದು.

2025ರ ಐಪಿಎಲ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ

ಅಕ್ಷರ್ ಪಟೇಲ್ (ನಾಯಕ), ಕುಲದೀಪ್ ಯಾದವ್, ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಮಿಚೆಲ್ ಸ್ಟಾರ್ಕ್, ಕೆಎಲ್ ರಾಹುಲ್, ದಸುನ್ ಶನಕ, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಟಿ. ನಟರಾಜನ್, ಕರುಣ್ ನಾಯರ್, ಸಮೀರ್ ರಿಜ್ವಿ, ಫಾಫ್ ಡುಪ್ಲೆಸಿಸ್, ಅಶುತೋಷ್ ಶರ್ಮಾ, ಮುಖೇಶ್ ಕುಮಾರ್, ಮೋಹಿತ್ ಶರ್ಮಾ, ದರ್ಶನ್ ನಲ್ಕಂಡೆ, ವಿಪ್ರಜ್ ನಿಗಮ್, ದುಷ್ಮಂತ ಚಮೀರಾ, ಡೊನೊವನ್ ಫೆರೇರಾ, ಅಜಯ್ ಮಂಡಲ್, ಮನ್ವಂತ್ ಕುಮಾರ್, ತ್ರಿಪುರಾಣ ವಿಜಯ್, ಮಾಧವ್ ತಿವಾರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+