ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಎಲ್ಲಾ ಮಾದರಿ ಕ್ರಿಕೆಟ್‌ನಿಂದ ದನುಷ್ಕಾ ಗುಣತಿಲಕ ಅಮಾನತು

|
Google Oneindia Kannada News

ಕೊಲಂಬೋ, ನವೆಂಬರ್ 6; ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸನ್ ದನುಷ್ಕಾ ಗುಣತಿಲಕರನ್ನು ಎಲ್ಲಾ ಮಾದರಿ ಕ್ರಿಕೆಟ್‌ನಿಂದ ಅಮಾನತುಗೊಳಿಸಲಾಗಿದೆ. ಸಿಡ್ನಿಯಲ್ಲಿ ಭಾನುವಾರ ದನುಷ್ಕಾ ಗುಣತಿಲಕರನ್ನು ಪೊಲೀಸರು ಬಂಧಿಸಿದ್ದರು.

ಶ್ರೀಲಂಕಾದ ಕ್ರಿಕೆಟ್ ಬೋರ್ಡ್‌ ದನುಷ್ಕಾ ಗುಣತಿಲಕರನ್ನು ಎಲ್ಲಾ ಮಾದರಿ ಕ್ರಿಕೆಟ್‌ನಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ.

ಕ್ರಿಕೆಟ್ ಆಟಗಾರನನ್ನು ಹುಡುಕಲು ಇಂಟರ್‌ಪೋಲ್‌ ಸಹಾಯ ಕೋರಿದ ನೇಪಾಳಕ್ರಿಕೆಟ್ ಆಟಗಾರನನ್ನು ಹುಡುಕಲು ಇಂಟರ್‌ಪೋಲ್‌ ಸಹಾಯ ಕೋರಿದ ನೇಪಾಳ

Danushka Gunathilaka Suspend From All Forms Of Cricket

ಟಿ-20 ವಿಶ್ವಕಪ್ ಆಡಲು ಆಸ್ಟ್ರೇಲಿಯಾಕ್ಕೆ ದನುಷ್ಕಾ ಗುಣತಿಲಕ ತೆರಳಿದ್ದರು. ಲೈಂಗಿಕ ದೌರ್ಜನ್ಯ ಆರೋಪ ಮೇಲೆ ಭಾನುವಾರ ಸಿಡ್ನಿಯ ಹೋಟೆಲ್‌ನಲ್ಲಿ ಆಸ್ಟ್ರೇಲಿಯಾದ ಪೊಲೀಸರು ದನುಷ್ಕಾ ಗುಣತಿಲಕ ಬಂಧಿಸಿದ್ದರು.

ಐಸಿಸಿ ಆಯ್ಕೆ ಮಾಡಿದ ವಿರಾಟ್ ಕೊಹ್ಲಿಯ ಟಿ20 ಟಾಪ್‌ 5 ಅತ್ಯುತ್ತಮ ಇನ್ನಿಂಗ್ಸ್‌ಐಸಿಸಿ ಆಯ್ಕೆ ಮಾಡಿದ ವಿರಾಟ್ ಕೊಹ್ಲಿಯ ಟಿ20 ಟಾಪ್‌ 5 ಅತ್ಯುತ್ತಮ ಇನ್ನಿಂಗ್ಸ್‌

ದನುಷ್ಕಾ ಗುಣತಿಲಕರನ್ನು ಮುಂದಿನ ಯಾವುದೇ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುವುದಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೇಳಿದೆ. ಈ ಕುರಿತು ಬ್ಯಾಟರ್‌ಗೆ ಸಹ ಮಾಹಿತಿ ನೀಡಲಾಗಿದೆ.

Breaking: ಪಾಕಿಸ್ತಾನ ಸೋಲಿಸಿ, ಏಷ್ಯಾಕಪ್ ಎತ್ತಿ ಹಿಡಿದ ಶ್ರೀಲಂಕಾBreaking: ಪಾಕಿಸ್ತಾನ ಸೋಲಿಸಿ, ಏಷ್ಯಾಕಪ್ ಎತ್ತಿ ಹಿಡಿದ ಶ್ರೀಲಂಕಾ

ಆಸ್ಟ್ರೇಲಿಯಾದ ಕೋರ್ಟ್‌ನಲ್ಲಿ ದನುಷ್ಕಾ ಗುಣತಿಲಕ ವಿಚಾರಣೆ ಪೂರ್ಣಗೊಂಡ ಬಳಿಕ ಶ್ರೀಲಂಕಾದ ಕ್ರಿಕೆಟ್ ಬೋರ್ಡ್‌ ಸಹ ಅವರ ವಿರುದ್ಧದ ಆರೋಪದ ಕುರಿತು ವಿಚಾರಣೆ ನಡೆಸಲಿದೆ ಎಂದು ಹೇಳಿದೆ.

ಭಾನುವಾರ ಸಿಡ್ನಿಯ ಹೋಟೆಲ್‌ನಲ್ಲಿ ಆಸ್ಟ್ರೇಲಿಯಾದ ಪೊಲೀಸರು ದನುಷ್ಕಾ ಗುಣತಿಲಕ ಬಂಧಿಸಿದ್ದರು. ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಕೋರ್ಟ್‌ ಮುಂದೆ ಹಾಜರಾಗಿದ್ದರು. ಆಗ ಅವರ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದರು.

ಕೋರ್ಟ್‌ ಕಲಾಪದ ವೇಳೆ ಮ್ಯಾಜಿಸ್ಟೇಟ್‌ ದನುಷ್ಕಾ ಗುಣತಿಲಕ ಗುರುತನ್ನು ಖಚಿತಪಡಿಸಿಕೊಂಡರು. ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿದರು.

ಈ ಪ್ರಕರಣದಲ್ಲಿ ಜಾಮೀನು ದೊರೆಯದಿದ್ದರೆ ದನುಷ್ಕಾ ಗುಣತಿಲಕ ಭಾರೀ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆಸ್ಟ್ರೇಲಿಯಾದ ಕಾನೂನಿನ ಪ್ರಕಾರ ಅತ್ಯಾಚಾರ ಪ್ರಕರಣಕ್ಕೆ ಜೀವಾವಧಿ ತನಕ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ಟಿ-20 ವಿಶ್ವಕಪ್‌ ಪಂದ್ಯದಲ್ಲಿ ಸೋಲು ಅನುಭವಿಸಿರುವ ಶ್ರೀಲಂಕಾ ತಂಡದ ಆಟಗಾರರು ಭಾನುವಾರದಿಂದಲೇ ದೇಶಕ್ಕೆ ವಾಪಸ್ ಆಗುತ್ತಿದ್ದಾರೆ. ಆದರೆ ದನುಷ್ಕಾ ಗುಣತಿಲಕ ಜೈಲು ಸೇರಿದ್ದಾರೆ.

English summary
Sri Lanka cricket board suspend national player Danushka Gunathilaka from all forms of cricket with immediate effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X