RCB: ನಿಮ್ಮ ನಾಯಕತ್ವದಲ್ಲಿ ಕಪ್ & "ವಿರಾಟ್ ಕೊಹ್ಲಿ" ಪ್ರಶ್ನೆಗೆ: ರಜತ್ ಪಾಟಿದಾರ್ ಮುತ್ತಿನಂತಹ ರಿಪ್ಲೈ!
ಸುದೀರ್ಘ 17 ವರ್ಷಗಳ ನಂತರ ಬೆಂಗಳೂರು ರಾಯಲ್ ಚಾಲೆಂಜರ್ಸ್ ಐಪಿಎಲ್ ಕಪ್ ಗೆದ್ದಿದೆ. ಬರೋಬ್ಬರಿ 17 ವರ್ಷಗಳಿಂದ ನಿರಂತರವಾಗಿ ಆರ್‌ಸಿಬಿ ತಂಡವನ್ನು ಅಭಿಮಾನಿಗಳು ಇಷ್ಟು ವರ್ಷಗಳ ಕಾಲ ಬೆಂಬಲಿಸಿಕೊಂಡು ಬಂದಿದ್ದಾರೆ. ಇಷ್ಟು ವರ್ಷಗಳ ಕನಸು ಇದೀಗ ಈಡೇರಿದೆ. ಇನ್ನು ಆರ್‌ಸಿಬಿ ಕಪ್ ಅನ್ನು ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಗೆಲ್ಲಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿತ್ತು. ಯಾಕೆಂದರೆ ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಅವರು ಇಷ್ಟು ವರ್ಷಗಳಿಂದ ಲಾಯಲ್ - ನಿಷ್ಠೆ ಹಾಗೂ ನಿಯತ್ತಿನಿಂದ ಇದ್ದಾರೆ. ಅವರು ಇದಕ್ಕಿಂತ ದೊಡ್ಡ ದೊಡ್ಡ ಅವಕಾಶಗಳು ಸಿಕ್ಕರೂ ಬೇರೆ ಫ್ರಾಂಚೈಸಿಗೆ ಹೋಗಿರಲಿಲ್ಲ. ಇದೀಗ ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರು ವಿರಾಟ್ ಕೊಹ್ಲಿಯ ಬಗ್ಗೆ ಮುತ್ತಿನಂತಹ ಮಾತನಾಡಿದ್ದಾರೆ.
ಆರ್‌ಸಿಬಿಯ ಈ ಸುದೀರ್ಘ ಪಯಣದಲ್ಲಿ ವಿರಾಟ್ ಒಂದು ಸುಂದರ ನೆನಪು. ಎಬಿಡಿ & ಕ್ರಿಸ್ ಗೇಲ್ ಸೇರಿ ಹಲವು ಘಟಾನುಘಟಿ ನಾಯಕರು ಆರ್‌ಸಿಬಿಗೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಆದರೆ ಪ್ರಾರಂಭದಿಂದ ಕಪ್ ಗೆಲ್ಲುವ ವರೆಗೆ ಉಳಿದಿರುವುದು ವಿರಾಟ್. ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ತಂಡಕ್ಕಾಗಿ ನಾವು ಕಪ್ ಗೆಲ್ಲಲಿದ್ದೇವೆ. ವಿರಾಟ್ ಹಾಗೂ ಆರ್‌ಸಿಬಿ ಅಭಿಮಾನಿಗಳಿಗಾಗಿ ಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ತಂಡದ ನಾಯಕರೂ ಸೇರಿದಂತೆ ಹಲವರು ಹೇಳಿದ್ದರು. ಇದೀಗ ವಿರಾಟ್ ಕೊಹ್ಲಿ ಅವರನ್ನು ಕೆಣಕುವಂತೆ ಮ್ಯಾಚ್ ವಿನ್ನಿಂಗ್‌ನ ನಂತರ ನಿರೂಪಕ ರಜತ್ ಪಾಟಿದಾರ್ ಅವರಿಗೆ ಪ್ರಶ್ನೆ ಮಾಡಿದ್ದು. ಇದಕ್ಕೆ ರಜತ್ ಪಾಟಿದಾರ್ ಅವರು ಮುತ್ತಿನಂತಹ ರಿಪ್ಲೈ ಕೊಟ್ಟಿದ್ದಾರೆ. ಇದು ಆರ್‌ಸಿಬಿ ಅಭಿಮಾನಿಗಳು ಹಾಗೂ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ.

ನಿಮ್ಮ ನಾಯಕತ್ವದಲ್ಲಿ ಹಾಗೂ ನಿಮ್ಮ ಮೊದಲ ಬಾರಿಯ ನಾಯಕತ್ವದಲ್ಲಿಯೇ ಆರ್‌ಸಿಬಿಗೆ ಕಪ್ ಬಂದಿದೆ. ವಿರಾಟ್ ಕೊಹ್ಲಿಗಾಗಿ ಈ ಕಪ್ ಗೆಲ್ಲಲೇ ಬೇಕು ಎನ್ನುವ ಕನಸಿತ್ತು. ನಿಮ್ಮ ನೇತೃತ್ವದಲ್ಲಿ ಈ ಕನಸು ನನಸಾಗಿದೆ ಇದಕ್ಕೆ ನಿಮ್ಮ ಅಭಿಪ್ರಾಯವೇನು ಅಂತ ಕೇಳಲಾಗಿದ್ದು ಅವರು ಇದಕ್ಕೆ ಅತ್ಯಂತ ಮುದ್ದಾದ ಉತ್ತರವನ್ನೇ ನೀಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಈ ಕನಸಿನ ಬಗ್ಗೆ ಮಾತನಾಡಿರುವ ಜತ್ ಪಾಟಿದಾರ್ ಅವರು, ಹಲವು ವರ್ಷಗಳಿಂದ ಆರ್‌ಸಿಬಿ ತಂಡವನ್ನು ಬೆಂಬಲಿಸಿದವರೆಲ್ಲರೂ ಈ ಗೆಲುವಿಗೆ ಅರ್ಹರು. ಇದು ನನಗೆ ಒಂದು ಉತ್ತಮ ಅವಕಾಶ ಮತ್ತು ಕ್ಯಾಪ್ಟನ್ ಕೊಹ್ಲಿಯಿಂದ ನನಗೆ ಕಲಿಯುವುದಕ್ಕೆ ಸಾಕಷ್ಟು ಅವಕಾಶ ಸಿಕ್ಕಿತ್ತು. ಇದೊಂದು ಸುಂದರ ಅನುಭವ. ಇನ್ನು ನೀವು ವಿರಾಟ್ ಕೊಹ್ಲಿಯ ಬಗ್ಗೆ ಕೇಳಿದ್ರಲ್ಲ. ಈ ಕಪ್ ಹಾಗೂ ಗೆಲುವಿಗೆ ಅವರು ಬೇರೆಯವರಿಗಿಂತ ಹೆಚ್ಚು ಅರ್ಹರು ಅಂತ ಹೇಳಿದ್ದಾರೆ.
ಮ್ಯಾಚ್ ವಿನ್ನಿಂಗ್‌ನ ನಂತರ ರಜತ್ ಪಾಟಿದಾರ್ ಅವರ ಈ ಮಾತುಗಳಲ್ಲಿ ನನ್ನ ಎನ್ನುವುದು ಎಲ್ಲಿಯೂ ಕಾಣಿಸಿಲ್ಲ. ಅಲ್ಲದೇ ಕೊನೆಯಲ್ಲಿ ಆರ್‌ಸಿಬಿ ಅಭಿಮಾನಿಗಳೇ ಈ ಸಲ ಕಪ್ ನಮ್ದು ಅಂತ ಹೇಳುವುದನ್ನು ಅವರು ಮರೆತಿಲ್ಲ.












Click it and Unblock the Notifications