RCB vs CSK: ಆರ್‌ಸಿಬಿ ಮಾರಕ ಬೌಲರ್ ವಾಪಸ್; ಸಿಎಸ್‌ಕೆ ತಂಡಕ್ಕೆ ಆಘಾತ!

ಐಪಿಎಲ್ 2025ರ ಬಹುನಿರೀಕ್ಷಿತ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು (ಮಾರ್ಚ್ 28, ಶುಕ್ರವಾರ) ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸಜ್ಜಾಗಿದೆ. ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮುಖಾಮುಖಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದು ಹೈ ವೋಲ್ಟೇಜ್ ಪಂದ್ಯವಾಗಿದ್ದು, ದಿಗ್ಗಜರ ಹೋರಾಟಕ್ಕೆ ಸಾಕ್ಷಿಯಾಗಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆರ್ ಸಿಬಿ ವಿರುದ್ಧ ಸಿಎಸ್‌ಕೆ ತವರಿನಲ್ಲಿ ಅಮೋಘ ಪ್ರದರ್ಶನ ನೀಡಿದೆ. ಕಳೆದ 17 ವರ್ಷಗಳಿಂದ ಆರ್ ಸಿಬಿ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಗೆಲುವು ಸಾಧಿಸಿಲ್ಲ. ಆರಂಭದ ಆವೃತ್ತಿಯಲ್ಲಿ ಮಾತ್ರ ಆರ್ ಸಿಬಿ ಸಿಎಸ್‌ಕೆ ವಿರುದ್ಧ ಗೆಲುವು ಸಾಧಿಸಿತ್ತು.

csk vs rcb ipl 2025 matheesha pathirana not available bhuvaneshwar back

ಆರ್ ಸಿಬಿ ಸಿಎಸ್‌ಕೆ ನಡುವೆ ಚೆನ್ನೈನಲ್ಲಿ 9 ಪಂದ್ಯಗಳು ನಡೆದಿದ್ದು ಇದರಲ್ಲಿ ಒಂದು ಪಂದ್ಯ ಆರ್ ಸಿಬಿ ಗೆದ್ದಿದ್ದರೆ, 8 ಪಂದ್ಯಗಳು ಸಿಎಸ್‌ಕೆ ಗೆಲುವು ಸಾಧಿಸಿದೆ. ಚೆನ್ನೈ ತವರಿನಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಬಾರಿ ಸೋಲಿನ ಸರಪಳಿಯನ್ನು ಮುರಿದು ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ ಆರ್ ಸಿಬಿ.

ಆರ್ ಸಿಬಿ ತಂಡಕ್ಕೆ ಭುವಿ ವಾಪಸ್‌

ಕೆಕೆಆರ್ ವಿರುದ್ಧದ ಮೊದಲ ಪಂದ್ಯದಲ್ಲಿ ಗಾಯದ ಕಾರಣದಿಂದ ಆಡಿರಲಿಲ್ಲ, ಆದರೆ ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ಮುನ್ನ ಅವರು ಫಿಟ್ ಆಗಿದ್ದು ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಭುವನೇಶ್ವರ್ ಕುಮಾರ್ ಸಿಎಸ್‌ಕೆ ವಿರುದ್ಧ ಆಡುವುದು ಬಹುತೇಕ ಖಚಿತವಾಗಿದೆ.

Take a Poll

ಸಿಎಸ್‌ಕೆ ತಂಡಕ್ಕೆ ಪ್ರಮುಖ ವೇಗಿ ಅಲಭ್ಯ

ಸಿಎಸ್‌ಕೆ ತಂಡದ ಪ್ರಮುಖ ವೇಗಿ ಮತೀಶ ಪತಿರಾನ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೂಡ ಅವರು ಆಡಿರಲಿಲ್ಲ, ಇದೀಗ ಆರ್ ಸಿಬಿ ವಿರುದ್ಧ ಕೂಡ ಅವರು ಆಡುವುದಿಲ್ಲ ಎಂದು ವರದಿಯಾಗಿದೆ. ಇದು ತಂಡದ ವೇಗದ ಬೌಲಿಂಗ್ ವಿಭಾಗವನ್ನು ದುರ್ಬಲವಾಗಿಸಿದೆ. ಆದರೂ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ನೂರ್ ಅಹ್ಮದ್ ಉತ್ತಮ ಸ್ಪಿನ್ನರ್ ಗಳಾಗಿದ್ದು ಆರ್ ಸಿಬಿ ತಂಡಕ್ಕೆ ತಲೆನೋವಾಗುವ ಸಾಧ್ಯತೆ ಇದೆ, ರಚಿನ್ ರವೀಂದ್ರ ಕೂಡ ಸ್ಪಿನ್ ಬೌಲಿಂಗ್ ಮಾಡಲಿದ್ದು, ಅವರನ್ನು ನಾಯಕ ಬಳಸಿಕೊಳ್ಳಬಹುದು.

ಉಭಯ ತಂಡಗಳ ಸಂಭಾವ್ಯ ಆಡುವ ಬಳಗ

ಆರ್‌ಸಿಬಿ: ವಿರಾಟ್ ಕೊಹ್ಲಿ, ಫಿಲ್‌ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.

ಇಂಪ್ಯಾಕ್ಟ್ ಆಟಗಾರ: ಸ್ವಪ್ನಿಲ್ ಸಿಂಗ್‌, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ಮನೋಜ್ ಭಾಂಡಗೆ.

ಸಿಎಸ್‌ಕೆ: ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ದೀಪಕ್ ಹೂಡಾ, ಶಿವಂ ದುಬೆ, ರವೀಂದ್ರ ಜಡೇಜಾ, ಸ್ಯಾಮ್ ಕರನ್, ಎಂಎಸ್ ಧೋನಿ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ನಾಥನ್ ಎಲ್ಲಿಸ್, ಖಲೀಲ್ ಅಹ್ಮದ್.

ಇಂಪ್ಯಾಕ್ಟ್ ಆಟಗಾರರು: ರಾಹುಲ್ ತ್ರಿಪಾಠಿ, ವಿಜಯ್ ಶಂಕರ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+