ರಾಬಿನ್ ಉತ್ತಪ್ಪ ಕುಟುಂಬಕ್ಕೆ ಹೊಸ ಅತಿಥಿ ಆಗಮನ

ಬೆಂಗಳೂರು,ಜುಲೈ 14 : ಭಾರತ ಕ್ರಿಕೆಟ್ ತಂಡದ ಕ್ರಿಕೆಟಿಗ, ಕನ್ನಡಿಗ ರಾಬಿನ್ ಉತ್ತಪ್ಪರ ಪತ್ನಿ ಶೀತಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗುವಿಗೆ 'ಟ್ರಿನಿಟಿ ಥಿಯಾ ಉತ್ತಪ್ಪ' ಎಂದು ನಾಮಕರಣ ಮಾಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಆಡುತ್ತಿರುವ ಸ್ಟಾರ್ ಬ್ಯಾಟರ್‌ ರಾಬಿನ್ ಉತ್ತಪ್ಪ ತಮ್ಮ ಮನೆಗೆ ಹೆಣ್ಣು ಮಗು ಆಗಮಿಸುತ್ತಿರುವ ಸಂಭ್ರಮವನ್ನು ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮೂಲಕ ರಾಬಿನ್ ಉತ್ತಪ್ಪ ಹಂಚಿಕೊಂಡಿದ್ದಾರೆ.

ಪತ್ನಿ ಶೀತಲ್, ಮಗ ಹಾಗೂ ಮುದ್ದಾದ ಮಗುವಿನ ಎತ್ತಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ " ನಾವಿಂದು ನಮ್ಮ ಕುಟುಂಬದ ಹೊಸ ದೇವತೆಯನ್ನು ಪರಿಚಯಿಸಲು ನನ್ನ ಹೃದಯ ತುಂಬಿ ಬರುತ್ತಿದೆ. ಹೊಸ ಮಗುವಿಗೆ ಟ್ರಿನಿಟಿ ಥಿಯಾ ಉತ್ತಪ್ಪ" ಎಂದು ನಾಮಕರಣ ಮಾಡಿರುವುದಾಗಿ ತಿಳಿಸಿರುವ ಉತ್ತಪ್ಪ ತಮ್ಮ ಮಗುವಿಗೆ" ನೀನು ಜಗತ್ತಿಗೆ ಬರಲು ನಮ್ಮನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನಾವು ಕೃತಜ್ಞರಾಗಿದ್ದೇವೆ" ಎಂದು ಧನ್ಯವಾದ ತಿಳಿಸಿದ್ದಾರೆ.

Cricketer Robin Uthappa and his wife Sheethal Blessed baby girl

ಇನ್ನು ಉತ್ತಪ್ಪರ ಈ ಪೋಸ್ಟ್‌ಗೆ ಭಾರತ ತಂಡದ ಉಪನಾಯಕ ಹಾಗೂ ಕನ್ನಡಿಗ ಕೆ. ಎಲ್. ರಾಹುಲ್, ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ , ಪಯೂಷ್ ಚಾವ್ಲಾ ಸೇರಿದಂತೆ ಹಲವು ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಅಭಿನಂದನೆ ಸಲ್ಲಿಸಿದ್ದಾರೆ.

2006ರಲ್ಲಿ ಇಂಗ್ಲೆಂಡ್ ಎದುರು ಏಕದಿನ ಪಂದ್ಯದಲ್ಲಿ ಭಾರತದ ಪರ ಪಾದಾರ್ಪಣೆ ಮಾಡಿದ ರಾಬಿನ್‌ ಉತ್ತಪ್ಪ, 2007ರಲ್ಲಿ ಎಂಎಸ್‌ ಧೋನಿ ನೇತೃತ್ವದಲ್ಲಿ ಗೆದ್ದ ಐಸಿಸಿ ಟಿ20 ವಿಶ್ವಕಪ್ ತಂಡ ಭಾಗವಾಗಿದ್ದರು. ಅವರು ಭಾರತದ ಪರ 46 ಏಕದಿನ ಹಾಗೂ 13 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 934 ಹಾಗೂ 249 ರನ್ ಬಾರಿಸಿದ್ದಾರೆ.

Cricketer Robin Uthappa and his wife Sheethal Blessed baby girl

ಐಪಿಎಲ್‌ನಲ್ಲಿ ಹಲವು ತಂಡಗಳ ಪರ ಆಡಿರುವ ಉತ್ತಪ್ಪ 205 ಐಪಿಎಲ್ ಪಂದ್ಯಗಳನ್ನಾಡಿ 4,952 ರನ್‌ ಗಳಿಸಿದ್ದಾರೆ. 2021ರಲ್ಲಿ ಮತ್ತೆ ಎಂ ಎಸ್ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪರ ಆಡಿದ್ದ ಉತ್ತಪ್ಪ ತಂಡ ಚಾಂಪಿಯನ್‌ಪಟ್ಟಕ್ಕೇರಲು ನಿರ್ಣಾಯಕ ಪಾತ್ರವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+