CSK vs RR: ರಾಜಸ್ಥಾನ್ ರಾಯಲ್ಸ್‌ಗೆ ಗೆಲ್ಲುವ ಉದ್ದೇಶವೇ ಇರಲಿಲ್ಲ! ಟ್ರೆಂಡ್ ಆಯ್ತು 'ಫಿಕ್ಸರ್ಸ್' ಹ್ಯಾಷ್‌ಟ್ಯಾಗ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಪಂದ್ಯಾವಳಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯದತ್ತ ಸಾಗುತ್ತಿದ್ದು, ಪ್ಲೇ ಆಫ್‌ ತಲುಪಲು ಸಿಕ್ಕಾಪಟ್ಟೆ ಸ್ಪರ್ಧೆ ನಡೆಯುತ್ತಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪ್ಲೇಆಫ್ ತಲುಪಿದ ಮೊದಲ ತಂಡವಾಗಿದ್ದು, ಇನ್ನೂ ಮೂರು ಸ್ಥಾನಗಳು ಖಾಲಿ ಇವೆ.

ರಾಜಸ್ಥಾನ್ ರಾಯಲ್ಸ್ (RR) ಸಿಎಸ್‌ಕೆ ವಿರುದ್ಧ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸೋಲುವ ಮೂಲಕ ಕ್ವಾಲಿಫೈ ಆಗುವ ಅವಕಾಶ ಕಳೆದುಕೊಂಡಿದೆ, ಆದರೂ ಮುಂದಿನ ಪಂದ್ಯ ಗೆದ್ದು ಪ್ಲೇ ಆಫ್ ತಲುಪುವ ಅವಕಾಶ ರಾಜಸ್ಥಾನಕ್ಕೆ ಇದೆ.

Controversy Arises Over RR s Intent Against CSK in IPL 2024 Amid Match Fixing Speculations

ಸಿಎಸ್‌ಕೆ ವಿರುದ್ಧದ ಪಂದ್ಯದ ವೇಳೆ ಕ್ರಿಕೆಟ್ ಅಭಿಮಾನಿಗಳು ಕೋಪಗೊಂಡಿದ್ದು, ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿ ಫಿಕ್ಸರ್ಸ್ ಎನ್ನುವ ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗಿದೆ.

ಅಭಿಮಾನಿಗಳಿಗೆ ಕೋಪ ಯಾಕೆ?

ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ 20 ಓವರ್ ಗಳಲ್ಲಿ ರಾಜಸ್ಥಾನ 5 ವಿಕೆಟ್ ಕಳೆದುಕೊಂಡು 141 ರನ್‌ಗಳನ್ನು ಮಾತ್ರ ಕಲೆಹಾಕಿತು. ರಿಯಾನ್ ಪರಾಗ್ (ಔಟಾಗದೆ 47 ರನ್) ಮತ್ತು ಧ್ರುವ್ ಜುರೆಲ್ (18 ಎಸೆತಗಳಲ್ಲಿ 28 ರನ್) ಮಾತ್ರ ತಕ್ಕ ಮಟ್ಟಿಗೆ ಬ್ಯಾಟಿಂಗ್ ಪ್ರದರ್ಶನ ಕೊಟ್ಟರು.

ಯಶಸ್ವಿ ಜೈಸ್ವಾಲ್ (21 ಎಸೆತಗಳಲ್ಲಿ 24 ರನ), ಜೋಸ್ ಬಟ್ಲರ್ (25 ಎಸೆತಗಳಲ್ಲಿ 21 ರನ್) ಮತ್ತು ನಾಯಕ ಸಂಜು ಸ್ಯಾಮ್ಸನ್ (19 ಎಸೆತಗಳಲ್ಲಿ 15 ರನ್) ಗಳಿಸಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಈ ಮೂವರು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರೆ ರಾಜಸ್ಥಾನ ರಾಯಲ್ಸ್‌ಗೆ ಗೆಲ್ಲುವ ಅವಕಾಶ ಹೆಚ್ಚಾಗಿತ್ತು.

ಇದನ್ನು ಕಂಡ ನೆಟ್ಟಿಗರು ಎಕ್ಸ್‌ನಲ್ಲಿ ಮ್ಯಾಚ್-ಫಿಕ್ಸಿಂಗ್ ವಿವಾದವನ್ನು ಹುಟ್ಟುಹಾಕಿದರು, ಈ ಮೊದಲು ಎರಡೂ ತಂಡಗಳು ಬ್ಯಾನ್ ಆಗಿದ್ದನ್ನು ಕೂಡ ನೆನಪಿಸಿದ್ದಾರೆ.

ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ 2013 ರ ಋತುವಿನಲ್ಲಿ ಬೆಟ್ಟಿಂಗ್ ಚಟುವಟಿಕೆಗಳಲ್ಲಿ ತಮ್ಮ ಪ್ರಮುಖ ಅಧಿಕಾರಿಗಳು ತೊಡಗಿಸಿಕೊಂಡಿದ್ದಕ್ಕಾಗಿ ಐಪಿಎಲ್‌ನಿಂದ ಎರಡು ವರ್ಷಗಳ ಕಾಲ ನಿಷೇಧಿಸಲಾಗಿತ್ತು. 2016 ಮತ್ತು 2017 ರಲ್ಲಿ ಎರಡೂ ತಂಡಗಳು ಐಪಿಎಲ್‌ನಿಂದ ನಿಷೇಧಕ್ಕೊಳಗಾಗಿದ್ದವು.

ನಿಧಾನಗತಿಯ ಬ್ಯಾಟಿಂಗ್ ನೋಡಿದ ಅಭಿಮಾನಿಗಳು ರಾಜಸ್ಥಾನ ರಾಯಲ್ಸ್‌ಗೆ ಪಂದ್ಯ ಗೆಲ್ಲುವ ಉದ್ದೇಶವೇ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಆದರೆ ಸಿಎಸ್‌ಕೆ ಕೂಡ ಬ್ಯಾಟಿಂಗ್ ಮಾಡಲು ಕಷ್ಟಪಟ್ಟಿದ್ದನ್ನು ನೋಡಬಹುದು. ಕೊನೆಗೂ ಸಿಎಸ್‌ಕೆ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+