ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ ಎತ್ತರ ಜಿಗತದಲ್ಲಿ ಭಾರತಕ್ಕೆ ಮೊದಲ ಪದಕ

|
Google Oneindia Kannada News

ನವದೆಹಲಿ, ಆಗಸ್ಟ್ 4: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ. ಇದೇ ಮೊದಲ ಬಾರಿಗೆ ಭಾರತವು ಪುರುಷರ ವಿಭಾಗದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಬಾಚಿಕೊಂಡಿದೆ.

ಪುರುಷರ ಹೈಜಂಪ್‌ ಸ್ಪರ್ಧೆಯಲ್ಲಿ ಭಾರತದ ತೇಜಸ್ವಿನ್‌ ಶಂಕರ್‌ ಕಂಚಿನ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಆ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಹೊಂದಿರುವ ಶಂಕರ್, ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಹೈಜಂಪ್ ಸ್ಪರ್ಧೆಯಲ್ಲಿ ರಾಷ್ಟ್ರಕ್ಕಾಗಿ ಪದಕ ಗೆದ್ದ ಮೊದಲ ಭಾರತೀಯ ಎನಿಸಿದ್ದಾರೆ.

ಕಾಮನ್ ವೆಲ್ತ್ ಗೇಮ್ಸ್ : ಕಂಚು ಗೆದ್ದಉಡುಪಿಯ ಗುರುರಾಜ ಮನೆಯಲ್ಲಿ ಸಂಭ್ರಮಕಾಮನ್ ವೆಲ್ತ್ ಗೇಮ್ಸ್ : ಕಂಚು ಗೆದ್ದಉಡುಪಿಯ ಗುರುರಾಜ ಮನೆಯಲ್ಲಿ ಸಂಭ್ರಮ

ತೇಜಸ್ವಿನ್‌ ಶಂಕರ್ 2.22 ಮೀ ಎತ್ತರ ಜಿಗಿದಿರುವುದು ಕೌಂಟ್‌ಬ್ಯಾಕ್‌ನಲ್ಲಿ ಮೂರನೇ ಸ್ಥಾನವನ್ನು ಗಳಿಸಲು ಸಹಾಯ ಮಾಡಿತು, ಹೀಗಾಗಿ ಕ್ರೀಡಾಕೂಟದಲ್ಲಿ ಭಾರತಕ್ಕೆ ಐತಿಹಾಸಿಕ ಕಂಚಿನ ಪದಕ ಪಕ್ಕಾ ಆಯಿತು. ವಿಶೇಷ ಎಂದರೆ ಈಗ ದಾಖಲೆ ಬರೆದಿರುವ ಶಂಕರ್, ಅಥ್ಲೆಟಿಕ್ಸ್‌ಗಾಗಿ ಭಾರತದ ತಂಡಕ್ಕೆ ಕೊನೆಯ ಕ್ಷಣದಲ್ಲಿ ಆಯ್ಕೆ ಆಗಿದ್ದರು.

Commonwealth Games 2022: Indian Tejaswin Shankar wins bronze medal in first-ever mens high-jump

ಕಂಚಿನ ಪದಕಕ್ಕೆ ಹೇಗಿತ್ತು ಪೈಪೋಟಿ: ಶಂಕರ್ ಪ್ರತಿಸ್ಪರ್ಧಿಗಳಾದ ಡೊನಾಲ್ಡ್ ಥಾಮಸ್ ಮತ್ತು ಜೋಯಲ್ ಕ್ಲಾರ್ಕ್-ಖಾನ್ ಕೂಡ 2.22 ಮೀ ಎತ್ತರ ಜಿಗಿತವನ್ನು ಪೂರ್ಣಗೊಳಿಸಿದ್ದರು. ಆದರೆ ಈ ಎತ್ತರ ಜಿಗಿತದ ಸಾಧನೆೆಗೆ ಅವರು ಒಂದಕ್ಕಿಂತ ಹೆಚ್ಚು ಬಾರಿ ಪ್ರಯತ್ನಿಸಿದ್ದು, ಭಾರತೀಯ ಕ್ರೀಡಾಪಟುವಿಗೆ ಅಗ್ರಸ್ಥಾನ ಸಿಕ್ಕಿದೆ.

ಬೆಳ್ಳಿ ಪದಕ ಬೇಟೆಯ ಪ್ರಯತ್ನ ವಿಫಲ: 23 ವರ್ಷದ ತೇಜಸ್ವಿನ್‌ ಶಂಕರ್, 2.25 ಮೀ ಎತ್ತರದ ಜಿಗಿತವನ್ನು ಗಳಿಸುವುದಕ್ಕೆ ಸಾಧ್ಯವಾಗಲಿಲ್ಲ. ಇವರು ಬೆಳ್ಳಿ ಪದಕ ಪಡೆದುಕೊಳ್ಳಲು 2.28 ಮೀ ಎತ್ತರ ಜಿಗಿತವನ್ನು ದಾಖಲಿಸಬೇಕಿತ್ತು. ಆದರೆ ಎರಡೂ ಪ್ರಯತ್ನದಲ್ಲಿ ಅವರು ವಿಫಲರಾದರು. ಇದಕ್ಕೂ ಮೊದಲು, 1970ರಲ್ಲಿ ಎಡಿನ್‌ಬರ್ಗ್‌ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 2.06 ಮೀಟರ್ ಅತ್ಯುತ್ತಮ ಪ್ರಯತ್ನವನ್ನು ತೆರವುಗೊಳಿಸಿದ ಭೀಮ್ ಸಿಂಗ್, ಹೈಜಂಪ್‌ನಲ್ಲಿ ಪದಕದ ಸನ್ನಿಹಿತಕ್ಕೆ ಹೋಗಿದ್ದರು.

ಕಂಚಿದ ಪದಕ ಗೆೆಲುವಿಗೆ ಶಂಕರ್ ಹರ್ಷ: ಕಳೆದ ಜನವರಿ ತಿಂಗಳಿನಲ್ಲೇ ಜಿಗಿತದ ಅಭ್ಯಾಸವನ್ನು ಪ್ರಾರಂಭಿಸಿದ ನಾನು ಸುದೀರ್ಘ ಅವಧಿಯವರೆಗೂ ಪ್ರಯತ್ನ ಮಾಡಿದ್ದೇನೆ. ಆದರೆ ಇಲ್ಲಿ ಪದಕವನ್ನು ಗೆದ್ದುಕೊಳ್ಳಬೇಕೆಂಬ ಕನಸನ್ನು ನನಸಾಗಿಸಿಕೊಂಡಿದ್ದೇನೆ. ನನ್ನೊಂದಿಗೆ ಕಂಚಿನ ಪದಕವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿರುವುದು ಸಂತೋಷ ತರುತ್ತದೆ," ಎಂದು ತೇಜಸ್ವಿನ್‌ ಶಂಕರ್ ತಿಳಿಸಿದ್ದಾರೆ. ಈ ಹಿಂದೆ 2018 ರ ಗೋಲ್ಡ್ ಕೋಸ್ಟ್ ಆವೃತ್ತಿಯಲ್ಲಿ 2.24 ಮೀ ಅತ್ಯುತ್ತಮ ಜಿಗಿತದೊಂದಿಗೆ ಆರನೇ ಸ್ಥಾನ ಗಳಿಸಿಕೊಂಡಿದ್ದರು.

Recommended Video

ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಸಂಜು ಸ್ಯಾಮ್ಸನ್ ಗೆ ಮಾಡಿದ್ದು ಸರೀನಾ? *Cricket | OneIndia Kannada

English summary
Commonwealth Games 2022: Indian Tejaswin Shankar wins bronze medal in first-ever men's high-jump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X