ನಕಲಿ ದಾಖಲೆ ಸಲ್ಲಿಸಿ ಸರ್ಕಾರಿ ಕೆಲಸ ಪಡೆದ ರಣಜಿ ಕ್ರಿಕೆಟಿಗನ ವಿರುದ್ಧ ವಂಚನೆ ಪಕ್ರರಣ ದಾಖಲು
ನವದೆಹಲಿ, ಮೇ 12: ಛತ್ತೀಸ್‌ಗಢದ ರಣಜಿ ತಂಡದ ನಾಯಕ ಹರ್‌ಪ್ರೀತ್ ಸಿಂಗ್ ಭಾಟಿಯಾ ವಿರುದ್ಧ ರಾಯ್‌ಪುರದ ಪ್ರಧಾನ ಅಕೌಂಟೆಂಟ್ ಜನರಲ್ ಆಡಿಟ್ ಕಚೇರಿಯಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಕೆಲಸ ಪಡೆದ ಆರೋಪದ ಮೇಲೆ ವಂಚನೆ ಪ್ರಕರಣ ದಾಖಲಿಸಲಾಗಿದೆ.
ನಕಲಿ ಅಂಕಪಟ್ಟಿ ಸಲ್ಲಿಸಿ ಭಾರತೀಯ ಲೆಕ್ಕಪರಿಶೋಧಕ ಖಾತೆಗಳ ಇಲಾಖೆ ಕಚೇರಿಯಲ್ಲಿ ಲೆಕ್ಕಪರಿಶೋಧಕ ಹುದ್ದೆಯನ್ನು ಪಡೆದ ಆರೋಪದ ಮೇಲೆ ಬಲೋದ್ ಜಿಲ್ಲೆಯ ನಿವಾಸಿಯಾದ ಹರ್‌ಪ್ರೀತ್ ಸಿಂಗ್ ವಿರುದ್ಧ ವಿಧಾನಸಭಾ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ. 2014 ರಲ್ಲಿ, ಇಲಾಖೆಯು ಕ್ರಿಕೆಟ್ ಕೇಡರ್‌ನಿಂದ ಲೆಕ್ಕಪರಿಶೋಧಕರ ಹುದ್ದೆಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿತ್ತು ಎಂದು ಸಂಬಂಧ ಪಟ್ಟಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹರ್‌ಪ್ರೀತ್ ಸಿಂಗ್ ಸಲ್ಲಿಸಿದ ದಾಖಲೆಗಳ ಪ್ರಾಥಮಿಕ ಪರಿಶೀಲನೆಯ ನಂತರ, ಅವರನ್ನು ಫೀಲ್ಡ್ ಟ್ರಯಲ್ಸ್ ಕರೆಸಲಾಗಿತ್ತು ಮತ್ತು ಅವರ ಪ್ರದರ್ಶನದ ಆಧಾರದ ಮೇಲೆ, ಭಾಟಿಯಾ ಅವರನ್ನು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಭಾಟಿಯಾ, ಝಾನ್ಸಿಯ ಬುಂದೇಲ್‌ಖಂಡ ವಿಶ್ವವಿದ್ಯಾಲಯದ ಬಿಕಾಂ ಪದವಿಯ ಪ್ರಮಾಣಪತ್ರವನ್ನು ಸಲ್ಲಿಸಿದ್ದರು. ಈ ಪದವಿ ಪ್ರಮಾಣ ಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಇಲಾಖೆಯು ವಿಶ್ವವಿದ್ಯಾನಿಲಯವನ್ನು ಸಂಪರ್ಕಿಸಿತ್ತು. ಆದರೆ ವಿಶ್ವವಿದ್ಯಾಲಯ ಅಂತಹ ಯಾವುದೇ ಅಂಕಪಟ್ಟಿ ಅಥವಾ ಪದವಿ ನೀಡಿಲ್ಲ ಎಂದು ತಿಳಿಸಿದ ನಂತರ ವಿಧಾನಸಭಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಮತೆ ಹರ್‌ಪ್ರೀತ್ ಅವರ ಸೆಕ್ಷನ್ 420(ವಂಚನೆ), 467 (ಫೋರ್ಜರಿ) ಹಾಗೂ ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಭಾಟಿಯಾ 2010 ಅಂಡರ್ 19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ತಂಡದ ಭಾಗವಾಗಿದ್ದರು. 2011ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪುಣೆ ವಾರಿಯರ್ಸ್ ಖರೀದಿಸಿತ್ತು. ನಂತರ 2017ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿತ್ತು.












Click it and Unblock the Notifications