• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿರಾಟ್ ಕೊಹ್ಲಿಗೆ ರೋಹಿತ್‌ ಶರ್ಮಾ ಮಾಡಿದ ಈ ಮೂರು ದಾಖಲೆಗಳನ್ನು ಮುರಿಯಲು ಆಗಲ್ವಾ?

|
Google Oneindia Kannada News

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾರತೀಯ ಆಧುನಿಕ ಕ್ರಿಕೆಟ್‌ ಜಗತ್ತಿನ ಅತ್ಯುತ್ತಮ ಆಟಗಾರರು. ಇಬ್ಬರೂ ಒಟ್ಟಿಗೆ ಕ್ರಿಕೆಟ್ ಮೈದಾನದಲ್ಲಿರುವಾಗ ಒಬ್ಬರಿಗೊಬ್ಬರು ಅತ್ಯುತ್ತಮವಾದ ಬಾಂಧವ್ಯ ಹೊಂದಿದ್ದಾರೆ. ಇಬ್ಬರ ವಿರುದ್ಧ ಹಲವು ಟೀಕೆಗಳು ಬಂದಾಗಲೂ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದಾರೆ. ಯಾರು ಏನೇ ಹೇಳಿದರು ಇಬ್ಬರ ನಡುವಿನ ಸ್ನೇಹಕ್ಕೆ ಮಾತ್ರ ಯಾವ ಕೊರತೆಯೂ ಆಗಿಲ್ಲ.

ಐಪಿಎಲ್‌ ಎಂದು ಬಂದಾಗ ಇಬ್ಬರೂ ಕ್ರಿಕೆಟಿಗರ ನಡುವೆ ಆಟದಲ್ಲಿ ಪೈಪೋಟಿ ಏರ್ಪಡುತ್ತದೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದು, ವಿರಾಟ್ ಕೊಹ್ಲಿ ಐದು ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದಾರೆ. ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ತ್ಯಜಿಸಿರುವ ವಿರಾಟ್ ಕೊಹ್ಲಿ ತಂಡದಲ್ಲಿ ಪ್ರಮುಖ ಬ್ಯಾಟರ್ ಆಗಿ ಮುಂದುವರೆದಿದ್ದಾರೆ.

ಜಿಂಬಾಬ್ವೆ ಪ್ರವಾಸ: ನಾಯಕನಾಗಿ ಭಾರತ ತಂಡಕ್ಕೆ ಮರಳಿದ ಕನ್ನಡಿಗ ಕೆಎಲ್ ರಾಹುಲ್ಜಿಂಬಾಬ್ವೆ ಪ್ರವಾಸ: ನಾಯಕನಾಗಿ ಭಾರತ ತಂಡಕ್ಕೆ ಮರಳಿದ ಕನ್ನಡಿಗ ಕೆಎಲ್ ರಾಹುಲ್

ಆದರೆ, ಸ್ಪರ್ಧೆ ಎಂದು ಬಂದಾಗ, ಇಬ್ಬರೂ ಕೂಡ ಸವಾಲಿನಿಂದ ಹಿಂದೆ ಸರಿಯುವುದಿಲ್ಲ. ಇಬ್ಬರೂ ಆಟಗಾರರು ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನು ಬರೆದುಕೊಂಡಿದ್ದಾರೆ. ಇಬ್ಬರ ಸಾಮರ್ಥ್ಯದ ನಡುವೆ ಅಭಿಮಾನಿಗಳು ಹೋಲಿಕೆ ಮಾಡುವುದು, ಪರಸ್ಪರ ಕಾಲೆಳೆದುಕೊಳ್ಳುವುದು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಲೇ ಇರುತ್ತದೆ. ಕಿಂಗ್ ಕೊಹ್ಲಿ ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನು ಬರೆದುಕೊಂಡಿದ್ದರೂ, ರೋಹಿತ್ ಶರ್ಮಾ ಮಾಡಿರುವ ಈ ಮೂರು ದಾಖಲೆಗಳನ್ನು ಮುರಿಯುವುದು ಕಷ್ಟ ಎಂದೇ ಹೇಳಲಾಗುತ್ತದೆ. ಅವುಗಳನ್ನು ನೋಡುವುದಾದರೆ.

 ಏಕದಿನ ಪಂದ್ಯದಲ್ಲಿ 250ಕ್ಕಿಂತ ಹೆಚ್ಚು ಸಿಕ್ಸ್ ಬಾರಿಸಿರುವ ರೋಹಿತ್

ಏಕದಿನ ಪಂದ್ಯದಲ್ಲಿ 250ಕ್ಕಿಂತ ಹೆಚ್ಚು ಸಿಕ್ಸ್ ಬಾರಿಸಿರುವ ರೋಹಿತ್

ಸಿಕ್ಸರ್ ವಿಚಾರಕ್ಕೆ ಬಂದರೆ ಏಕದಿನ ಪಂದ್ಯಗಳಲ್ಲಿ ಭಾರತೀಯ ಕ್ರಿಕೆಟಿಗರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. 233 ಏಕದಿನ ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ 250 ಸಿಕ್ಸರ್ ಸಿಡಿಸಿದ್ದಾರೆ.

ಶಾಹಿದ್ ಅಫ್ರಿದಿ 351 ಸಿಕ್ಸರ್ ಸಿಡಿಸುವ ಮೂಲಕ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ (331 ಸಿಕ್ಸರ್) ಇದ್ದರೆ, ಮೂರನೇ ಸ್ಥಾನದಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ (270 ಸಿಕ್ಸರ್) ಇದ್ದಾರೆ, ನಾಲ್ಕನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದು, ಐದನೇ ಸ್ಥಾನದಲ್ಲಿ ಎಂ. ಎಸ್‌. ಧೋನಿ (229 ಸಿಕ್ಸರ್) ಇದ್ದಾರೆ.

ವಿರಾಟ್ ಕೊಹ್ಲಿ 262 ಏಕದಿನ ಪಂದ್ಯಗಳನ್ನಾಡಿದ್ದು, ಇದುವರೆಗೆ 125 ಸಿಕ್ಸರ್‌ಗಳನ್ನು ದಾಖಲಿಸಿದ್ದಾರೆ. ಹೀಗಾಗಿ ರೋಹಿತ್ ದಾಖಲೆ ಮುರಿಯುವುದು ಅನುಮಾನ ಎಂದು ಹೇಳಲಾಗುತ್ತದೆ..

 ಭಾರತೀಯ ಕ್ರಿಕೆಟಿಗರಿಗೆ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಅನುಮತಿ ಯಾಕಿಲ್ಲ ಗೊತ್ತಾ? ಭಾರತೀಯ ಕ್ರಿಕೆಟಿಗರಿಗೆ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಅನುಮತಿ ಯಾಕಿಲ್ಲ ಗೊತ್ತಾ?

 5 ಬಾರಿ ಐಪಿಎಲ್‌ ಟ್ರೋಫಿ ಜಯ

5 ಬಾರಿ ಐಪಿಎಲ್‌ ಟ್ರೋಫಿ ಜಯ

ಐಪಿಎಲ್ ಟೂರ್ನಿಯಲ್ಲಿ ಐದುಬಾರಿ ಟ್ರೋಫಿ ಗೆಲ್ಲುವ ಮೂಲಕ ರೋಹಿತ್ ಶರ್ಮಾ ಐಪಿಎಲ್‌ನ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಆದರೆ ಕೊಹ್ಲಿ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೂ ಒಮ್ಮೆಯೂ ಐಪಿಎಲ್ ಕಪ್ ಗೆಲ್ಲಲೂ ಕೂಡ ಸಾಧ್ಯವಾಗಿಲ್ಲ.

ವಿರಾಟ್ ಕೊಹ್ಲಿ ಆರ್ ಸಿಬಿಯ ನಾಯಕತ್ವವನ್ನು ತ್ಯಜಿಸಿದ್ದಾರೆ, ಹೀಗಾಗಿ ಅವರು ನಾಯಕನಾಗಿ ಈ ಸಾಧನೆ ಮಾಡಲು ಸಾಧ್ಯವಾಗಲ್ಲ. ಐಪಿಎಲ್‌ನಲ್ಲಿ ಬ್ಯಾಟರ್ ಆಗಿ ಅಮೋಘ ಯಶಸ್ಸು ಕಂಡಿದ್ದರೂ, ಟ್ರೋಫಿ ಗೆಲ್ಲಲು ಹಾತೊರೆಯುತ್ತಿದ್ದಾರೆ. ಇನ್ನೂ ಕೆಲವು ವರ್ಷಗಳು ಅವರ ವೃತ್ತಿಜೀವನದಲ್ಲಿ ಉಳಿದಿದ್ದು, ಎಷ್ಟು ಬಾರಿ ಕಪ್ ಗೆಲ್ಲುತ್ತಾರೆ ನೋಡಬೇಕಿದೆ.

 ರೋಹಿತ್ ಶರ್ಮಾ ದಾಖಲೆಯ 264 ರನ್

ರೋಹಿತ್ ಶರ್ಮಾ ದಾಖಲೆಯ 264 ರನ್

'ಹಿಟ್‌ಮ್ಯಾನ್' ಎಂದೇ ಜನಪ್ರಿಯವಾಗಿರುವ ರೋಹಿತ್ ಶರ್ಮಾ 2014ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ 264 ರನ್ ಬಾರಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಇದು ಆಟಗಾರನೊಬ್ಬ ಗಳಿಸಿರುವ ಗರಿಷ್ಠ ವೈಯಕ್ತಿಕ ರನ್ ಎನಿಸಿಕೊಂಡಿದೆ. ಇದುವರೆಗೂ ಯಾರಿಗೂ ಈ ದಾಖಲೆ ಮುರಿಯಲು ಸಾಧ್ಯವಾಗಿಲ್ಲ.

173 ಎಸೆತಗಳಲ್ಲಿ 33 ಬೌಂಡರಿ, 9 ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ರೋಹಿತ್ ಶರ್ಮಾ ಈ ಐತಿಹಾಸಿಕ ಸಾಧನೆ ಮಾಡಿದರು. ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಮಾತ್ರ ಈ ಹಿಂದೆ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಇತರೆ ಭಾರತೀಯ ಆಟಗಾರರಾಗಿದ್ದಾರೆ.

ಏಕದಿನದಲ್ಲಿ ವಿರಾಟ್ ಕೊಹ್ಲಿ ಅವರ ಅತ್ಯಧಿಕ ಸ್ಕೋರ್ 183. ಅವರು 2012 ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಅದ್ಭುತ ಆಡವಾಡುವ ಮೂಲಕ ಏಕದಿನ ಪಂದ್ಯದಲ್ಲಿ ತಮ್ಮ ಅತ್ಯಧಿಕ ವೈಯಕ್ತಿಕ ರನ್ ದಾಖಲಿಸಿದ್ದರು. ನಂತರ ವಿರಾಟ್‌ ಕೊಹ್ಲಿಗೆ ಅದಕ್ಕಿಂತ ಹೆಚ್ಚಿನ ರನ್ ಬಾರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ರೋಹಿತ್ ಶರ್ಮಾ ದಾಖಲೆ ಮುರಿಯುವುದು ಕಷ್ಟ ಎನ್ನಲಾಗುತ್ತದೆ.

 ವಿರಾಟ್ ಕೊಹ್ಲಿ ಮಾಡಿರುವ ದಾಖಲೆಗಳನ್ನೂ ನೋಡಿ

ವಿರಾಟ್ ಕೊಹ್ಲಿ ಮಾಡಿರುವ ದಾಖಲೆಗಳನ್ನೂ ನೋಡಿ

ಟ್ರೋಫಿಗಳು ಆಟಗಾರನ ಸಾಮರ್ಥ್ಯವನ್ನು ಅಳೆಯಲಾರವು. ನಿಸ್ಸಂದೇಹವಾಗಿ ವಿರಾಟ್ ಕೊಹ್ಲಿ ವಿಶ್ವ ಕಂಡ ಶ್ರೇಷ್ಠ ಬ್ಯಾಟರ್. ಅವರು ಮಾಡಿರುವ ದಾಖಲೆಗಳನ್ನು ಕೂಡ ಸುಲಭವಾಗಿ ಅಳಿಸಲಾಗದು.

ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ 890 ರೇಟಿಂಗ್ ಪಾಯಿಂಟ್‌ಗಳನ್ನು ಪಡೆದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ. ಈ ಹಿಂದೆ ಸಚಿನ್ ತೆಂಡೂಲ್ಕರ್ 1998 ರಲ್ಲಿ 887 ರ ಅತ್ಯುತ್ತಮ ರೇಟಿಂಗ್ ಪಡೆದಿದ್ದರು.

ಟೆಸ್ಟ್ ಬ್ಯಾಟ್ಸ್‌ಮನ್‌ಗಳಿಗಾಗಿ ಐಸಿಸಿ ಆಟಗಾರರ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ಐಸಿಸಿ ಅತಿ ಹೆಚ್ಚು ರೇಟಿಂಗ್ ಅಂಕಗಳನ್ನು (922) ಪಡೆದ ದಾಖಲೆ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ಪಂದ್ಯಗಳಲ್ಲಿ ನಾಯಕನಾಗಿ ಆರು ದ್ವಿಶತಕ ಗಳಿಸಿದ್ದಾರೆ. ಟೆಸ್ಟ್ ನಾಯಕರಾಗಿ ಐದು ದ್ವಿಶತಕ ಗಳಿಸಿದ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದ್ದಾರೆ.

ವಿರಾಟ್ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಏಕದಿನ ತಂಡದ ನಾಯಕ. ನಾಯಕನಾಗಿ ಕೊಹ್ಲಿಯ ಯಶಸ್ಸಿನ ಪ್ರಮಾಣವು ಶೇಕಡ 75.89 ರಷ್ಟಿದೆ. ಇದು ಎಂ.ಎಸ್‌.ಧೋನಿಗಿಂತ ಹೆಚ್ಚು. ವಿರಾಟ್ ಕೊಹ್ಲಿ 10,000 ಟಿ20 ರನ್ ದಾಟಿದ ಮೊದಲ ಭಾರತೀಯ ಕ್ರಿಕೆಟಿಗ.

 ಸಚಿನ್, ಸೆಹ್ವಾಗ್ ಹಿಂದಿಕ್ಕಿದ ಕೊಹ್ಲಿ

ಸಚಿನ್, ಸೆಹ್ವಾಗ್ ಹಿಂದಿಕ್ಕಿದ ಕೊಹ್ಲಿ

ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಾಗ ಭಾರತ 7ನೇ ರ್‍ಯಾಂಕ್‌ನಲ್ಲಿತ್ತು ಭಾರತ ನಂ.1 ಸ್ಥಾನಕ್ಕೆ ಬಂದಾಗ ಅವರು ನಾಯಕತ್ವದಿಂದ ಕೆಳಗಿಳಿದರು. 2019ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 7 ದ್ವಿಶತಕಗಳನ್ನು ಸಿಡಿಸುವ ಮೂಲಕ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರನ್ನು ಕೊಹ್ಲಿ ಹಿಂದಿಕ್ಕಿದರು. ಸಚಿನ್ ಮತ್ತು ಸೆಹ್ವಾಗ್ ತಲಾ ಆರು ದ್ವಿಶತಕಗಳನ್ನು ಸಿಡಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಒಂಬತ್ತನೇ ಆವೃತ್ತಿಯಲ್ಲಿ ಕೊಹ್ಲಿ 973 ರನ್ ಗಳಿಸಿ ತಮ್ಮ ತಂಡವನ್ನು ಪಂದ್ಯಾವಳಿಯ ಫೈನಲ್‌ಗೆ ತಲುಪಿಸಿದರು. ಒಂದೇ ಋತುವಿನಲ್ಲಿ ವಿರಾಟ್ ಕೊಹ್ಲಿ ನಾಲ್ಕು ಶತಕಗಳನ್ನು ಗಳಿಸಿದರು.

50 ಕ್ಕಿಂತ ಹೆಚ್ಚಿನ ಸರಾಸರಿಯೊಂದಿಗೆ 490 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕೊಹ್ಲಿ 23000 ರನ್ ಗಳಿಸಿದ್ದಾರೆ. 50 ಕ್ಕಿಂತ ಹೆಚ್ಚಿನ ಸರಾಸರಿಯೊಂದಿಗೆ 20000 ಕ್ಕಿಂತ ಹೆಚ್ಚಿನ ರನ್ ಗಳಿಸಿದ ಏಕೈಕ ಆಟಗಾರ ವಿರಾಟ್ ಕೊಹ್ಲಿ.

ಇಬ್ಬರೂ ಆಟಗಾರರು ತಮ್ಮ ಸಾಮರ್ಥ್ಯದ ಮೂಲಕ ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ್ದಾರೆ. ಭಾರತ ತಂಡವಾಗಿ ಅದ್ಭುತ ಪ್ರದರ್ಶನ ನೀಡುವಲ್ಲಿ ಇಬ್ಬರೂ ಆಟಗಾರರ ಕೊಡುಗೆಯೂ ಅಪಾರವಾಗಿದೆ ಎನ್ನುವುದನ್ನು ಮರೆಯಬಾರದು.

English summary
Rohit Sharma and Virat Kohli are undoubtedly Great players in modern cricket. They Support each other against all the odds. Both cricketers share a good rivalry also when it comes to the IPL. Despite having quite a few unbelievable records to his name, these are the three Rohit Sharma records that can be not possible even for Virat Kohli to break.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X