BMTC: ಕತಾರ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್‌ಗೆ ಬಿಎಂಟಿಸಿ ಕಂಡಕ್ಟರ್‌ಗಳ ಆಯ್ಕೆ
BMTC: ಬೆಂಗಳೂರು ಜೀವನಾಡಿ ಸಾರಿಗೆಗಳಲ್ಲಿ ಬಿಎಂಟಿಸಿ ಕೂಡ ಒಂದಾಗಿದೆ. ಇನ್ನು ಇದೀಗ ಕತಾರ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್ 2025 ಪಂದ್ಯದಲ್ಲಿ ಇದೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಇಬ್ಬರು ಬಸ್ ಕಂಡಕ್ಟರ್‌ಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಹಾಗಾದ್ರೆ ಪಂದ್ಯ ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಾರ್ಚ್ 13ರಿಂದ 17ರ ವರೆಗೆ ಕತಾರ್‌ನಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್ 2025 ನಡೆಯಲಿದೆ. ಈ ಪಂದ್ಯದಲ್ಲಿ ಬೆಂಗಳೂರು ಜೀವನಾಡಿ ಸಾರಿಗೆಯಾಗಿರುವ ಬಿಎಂಟಿಸಿಯ ಇಬ್ಬರು ಕಂಡಕ್ಟರ್‌ಗಳನ್ನು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದು ಬೆಂಗಳೂರಿನ ಕೀರ್ತಿಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ. ಇವರಿಬ್ಬರಿಗೆ ಇದೀಗ ಇಡೀ ರಾಜ್ಯ ಅಲ್ಲದೆ, ದೇಶಗಳಿಂದಲೂ ಕೂಡ ಶುಭಹಾರೈಕೆಗಳ ಸುರಿಮಳೆಯೇ ಹರಿದುಬರುತ್ತಿದೆ.

ಈಗಾಗಲೇ ರಾಜ್ಯದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್ ಅವರು ಕಂಡಕ್ಟರ್‌ಗಳಾದ ವಿನಯ್ ಕುಮಾರ್ ವಿ ಮತ್ತು ವೈಡಿ ಶಶಿಧರ್ ಅವರನ್ನು ಅಭಿನಂದಿಸಿ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಾಮಾನ್ಯವಾಗಿ ಪ್ರತಿನಿತ್ಯ ಕ್ರೀಡೆಯಲ್ಲಿ ನಿರತರಾಗಿರುವವರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಇದೀಗ ಬಿಎಂಟಿಸಿ ಬಸ್‌ಗಳ ಇಬ್ಬರು ಕಂಡಕ್ಟರ್‌ಗಳು ಅಂತಾರಾಷ್ಟ್ರೀಯ ಕಬ್ಬಡಿ ತಂಡಕ್ಕೆ ಆಯ್ಕೆ ಆಗಿರುವುದು ತುಂಬಾ ವಿಶೇಷವಾಗಿದೆ. ಇವರಿಗೆ ಇದೀಗ ಶುಭಹಾರೈಕೆಗಳ ಸರಮಾಲೆಯೇ ಹರಿದುಬರುತ್ತಿದೆ.
ಪ್ರತಿದಿನ ಬೆಂಗಳೂರಿನಲ್ಲಿ ಜನರನ್ನು ಒಂದೆಡೆಯಿಂದ ಮತ್ತೊಂದೆಡೆ ಕೊಂಡೊಯ್ಯುವ ಜೀವನಾಡಿ ಸಾರಿಗೆ ಬಿಎಂಟಿಸಿ ಆಗಿದೆ. ಬೆಳಗ್ಗೆಯಿಂದ ಸಂಜೆವರೆಗೂ ಪ್ರಯಾಣಿಕರ ನಡುವೆ ಸಂವಹನ ನಡೆಸುತ್ತಾ, ಕೆಲ ವೇಳೆ ಕೆಲ ಪ್ರಯಾಣಿಕರ ಬಳಿ ವಾದವನ್ನೂ ಮಾಡುವ ಮೂಲಕ ಕಂಡಕ್ಟರ್‌ಗಳು ಬೇಸತ್ತು ಹೋಗಿರುತ್ತಾರೆ. ಈ ನಡುವೆಯೇ ಇಂತಹ ಕ್ರೀಡೆಗಳನ್ನು ಆಡುವ ಅವಕಾಶ ಸಿಕ್ಕರೆ ಕಂಡಕ್ಟರ್ ಮನಸಿಗೆ ನೆಮ್ಮಸಿ ದೊರೆದಂತಾಗುತ್ತದೆ.
ಬೆಳಗ್ಗೆ ಆಯಿಂತೆಂದರೆ ಸಾಕು ಒಮ್ಮೆ ಬಸ್ ಹತ್ತಿದ್ದರೆ, ಮತ್ತೆ ಸಂಜೆವರೆಗೂ ಪ್ರಯಾಣಿಕರ ಜೊತೆ ಕಾಲ ಕಳೆಯಬೇಕಾಗುತ್ತದೆ. ಕೆಲವರು ಸರಿಯಾಗಿ ಸ್ಪಂದಿಸಿದ್ರೆ, ಇನ್ನೂ ಕೆಲವರು ಬೇಕು ಅಂತಲೇ ಟಿಕೆಟ್ ವಿಚಾರಕ್ಕೆ ಕಂಡಕ್ಟರ್‌ಗಳ ಮೇಲೆ ಹಲ್ಲೆ ಕಿರುಚಾಡುತ್ತಾರೆ. ಇಂತಹವರ ನಡುವೆಯೂ ಸಂಜೆವರೆಗೂ ಬಸ್‌ನಲ್ಲೇ ಟಿಕೆಟ್ ಕಲೆಕ್ಟ್ ಮಾಡುವ ಕೆಲಸ ಕಂಡಕ್ಟರ್‌ಗಳದ್ದಾಗಿರುತ್ತದೆ.
ಇದರ ನಡುವೆಯೇ ಇದೀಗ ಬಿಎಂಟಿಸಿ ಬಸ್‌ನ ಇಬ್ಬರು ಕಂಡಕ್ಟರ್‌ಗಳು ಬೇರೆ ದೇಶದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕಬ್ಬಡಿ ಕ್ರೀಡೆಗೆ ಆಯ್ಕೆಯಾಗಿರುವುದು ಬರಿ ಬೆಂಗಳೂರು, ರಾಜ್ಯ ಅಲ್ಲದೆ, ಇಡೀ ದೇಶವೇ ಖುಷಿ ಪಡುವ ವಿಚಾರವಾಗಿದೆ.












Click it and Unblock the Notifications