RCB vs CSK: ಅತ್ತಿಗುಪ್ಪೆ to ಅಮೆರಿಕ; ಮುಗಿಲು ಮುಟ್ಟಿದ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ

ಶನಿವಾರ ಅರ್ಧರಾತ್ರಿ ಶುರುವಾದ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಇನ್ನೂ ನಿಂತಿಲ್ಲ, ಕಪ್ ಗೆದ್ದಿಲ್ಲಾ ಅಂದ್ರೂ ಪರ್ವಾಗಿಲ್ಲ, ಸಿಎಸ್‌ಕೆ ಸೋಲಿಸಿದ್ವಲ್ಲ ಅಷ್ಟು ಸಾಕು ಅನ್ನೋವಷ್ಟು ಖುಷಿ ಅಭಿಮಾನಿಗಳದ್ದು, ಬೆಂಗಳೂರು ಮಾತ್ರವಲ್ಲ ದೇಶ ವಿದೇಶಗಳಲ್ಲೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಸಿಎಸ್‌ಕೆ ವಿರುದ್ಧ ಆರ್‌ಸಿಬಿ ರೋಚಕ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳು ಖುಷಿಗೆ ಪಾರವೇ ಇರಲಿಲ್ಲ, ಬೀದಿಗಿಳಿದ ಲಾಯಲ್ ಫ್ಯಾನ್ಸ್ ಕುಣಿದು ಕುಪ್ಪಳಿಸಿದರು. ಬೆಂಗಳೂರಿನ ಹಲವು ಕಡೆಗಳಲ್ಲಿ ರಸ್ತೆಗಳನ್ನೇ ಬಂದ್ ಮಾಡಿ ಪಟಾಕಿ ಸಿಡಿಸಿ ಹಬ್ಬ ಮಾಡಿದ್ದಾರೆ.

Blocked Roads blasting Crackers and Dancing on Car Roofs RCB Fans Celebrated Win Against CSK

ಬರೀ ಪ್ಲೇಆಫ್‌ಗೆ ಹೋಗಿದ್ದಕ್ಕೆ ಇಷ್ಟೊಂದು ಸಂಭ್ರಮವಾ ಎಂದು ಬೇರೆ ತಂಡದ ಅಭಿಮಾನಿಗಳೇ ದಂಗಾಗುವಂತಿತ್ತು ಅಭಿಮಾನಿಗಳ ಖುಷಿ. ಬೆಂಗಳೂರು ಮಾತ್ರವಲ್ಲ ಹೈದರಾಬಾದ್, ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಕೂಡ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ.

ಇಲ್ಲಿ ಮಾತ್ರವೇ ಅಲ್ಲ ಉತ್ತರ ಅಮೆರಿಕದಲ್ಲಿ ಕೂಡ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಎಸ್‌ಕೆ ವಿರುದ್ಧದ ಗೆಲುವನ್ನು ಆಚರಿಸಿದರು.

ಸೋಷಿಯಲ್ ಮೀಡಿಯಾದಲ್ಲಿ ಕೂಡ ಆರ್ ಸಿಬಿ ಟ್ರೆಂಡಿಂಗ್ ಆಗಿದೆ. ಎಕ್ಸ್‌ನಲ್ಲಿ ಆರ್ ಸಿಬಿ ಸಿಎಸ್‌ಕೆ ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿದ್ದು, ಫ್ಯಾನ್ಸ್ ಖುಷಿ ಹಂಚಿಕೊಳ್ಳುತ್ತಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಇದು ಅದ್ಭುತ ಕಮ್‌ಬ್ಯಾಕ್‌ ಎಂದು ಕೊಂಡಾಡುತ್ತಿದ್ದಾರೆ.

ಹದಿನಾರು ವರ್ಷ ಅಲ್ಲ ಇನ್ನೂ ಅರವತ್ತು ವರ್ಷ ಕಪ್ ಗೆದ್ದಿಲ್ಲಾ ಅಂದ್ರು ನಾವು ಆರ್ ಸಿಬಿ ಫ್ಯಾನ್ಸ್, ಇದೊಂದು ಗೆಲುವು ಸಾಕು ನಮಗೆ ಕಪ್ ಗೆದ್ದಷ್ಟೇ ಖುಷಿಯಾಗಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+