ಮಯಾಂಕ್ ಯಾದವ್ ಫಿಟ್ನೆಸ್ ಬಗ್ಗೆ ಬಿಗ್ ಅಪ್‌ಡೇಟ್: LSG ಸಿಇಓ ಹೇಳಿದ್ದೇನು?
ಪ್ರಸಕ್ತ ಐಪಿಎಲ್‌ನಲ್ಲಿ ತನ್ನ ಬಿಗುವಿನ ಹಾಗೂ ವೇಗದ ದಾಳಿಯಿಂದಲೇ ಸುದ್ದಿಯಲ್ಲಿರುವ ಎಲ್‌ಎಸ್‌ಜಿ ತಂಡದ ಮಯಾಂಕ್ ಯಾದವ್ ಈಗ ಗಾಯದ ಕಾರಣ ಸುದ್ದಿಯಲ್ಲಿದ್ದಾರೆ. ಇವರ ಫಿಟ್ನೆಸ್ ಬಗ್ಗೆ ಲಕ್ನೋ ಸೂಪರ್ ಜೈಂಟ್ಸ್ ಸಿಇಒ ವಿನೋದ್ ಬಿಶ್ತ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಯಾದವ್ ಗಾಯಗೊಂಡಿದ್ದರು. ಈ ಪಂದ್ಯದಲ್ಲಿ ಲಕ್ನೋ ಮೊದಲು ಬ್ಯಾಟಿಂಗ್ ಮಾಡಿ 163 ರನ್ ಗಳಿಸಿತ್ತು ಮತ್ತು ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಮಯಾಂಕ್ ಯಾದವ್ ಪಂದ್ಯದ ಮೊದಲ ಓವರ್ ಬೌಲ್ ಮಾಡಲು ಚೆಂಡನ್ನು ಪಡೆದರು. ಆ ಓವರ್‌ನಲ್ಲಿ ಅವರು 13 ರನ್ ನೀಡಿದರು. ನಂತರ ಮಯಾಂಕ್ ಮೈದಾನದಿಂದ ಹೊರ ನಡೆಯಬೇಕಾಯಿತು. ಗುಜರಾತ್ ವಿರುದ್ಧ ಉಳಿದ 3 ಓವರ್‌ಗಳನ್ನು ಬೌಲ್ ಮಾಡಲು ಸಾಧ್ಯವಾಗಲಿಲ್ಲ. ವಿನೋದ್ ಬಿಶ್ತ್ ಹೇಳಿಕೆಗೆ ಮುನ್ನ, ಮಯಾಂಕ್ ಫಿಟ್ ಆಗಿದ್ದಾರೆ ಎಂದು ವರದಿಯೊಂದು ತಿಳಿಸಿತ್ತು.

ಎಲ್‌ಎಸ್‌ಜಿ ಸಿಇಓ ಹೇಳಿದ್ದೇನು?
ಮಯಾಂಕ್ ಯಾದವ್ ಅವರ ಫಿಟ್ನೆಸ್ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈ ಋತುವಿನಲ್ಲಿ ಗಂಟೆಗೆ 156.7 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿರುವ ಮಯಾಂಕ್ ಅವರ ಫಿಟ್ನೆಸ್ ಚಿಂತೆಯ ವಿಷಯವಾಗಿಯೇ ಉಳಿದಿದೆ. ಎಲ್‌ಎಸ್‌ಜಿ ಸಿಇಒ ವಿನೋದ್ ಬಿಶ್ತ್ ಅವರು, "ಮಯಾಂಕ್ ಯಾದವ್‌ಗೆ ಹೊಟ್ಟೆಯ ಕೆಳಭಾಗದಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಮಯಾಂಕ್ ಮುಂದಿನ ಒಂದು ವಾರದಲ್ಲಿ ಅವರ ಕೆಲಸದ ಹೊರೆ ಕಡಿಮೆ ಆಗಲಿದೆ. ಇದರಿಂದ ಅವರ ಸಮಸ್ಯೆ ಕಡಿಮೆ ಆಗಲಿದೆ. ಮಯಾಂಕ್ ಶೀಘ್ರದಲ್ಲೇ ಮೈದಾನಕ್ಕೆ ಮರಳುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.
ಮಯಾಂಕ್ ಯಾದವ್ ಇದುವರೆಗೆ 3 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ ಮತ್ತು ಅವರ ವೇಗದ ಬೌಲಿಂಗ್ ನಿಂದಾಗಿ, ಅವರು ಪರ್ಪಲ್ ಕ್ಯಾಪ್ ಗೆಲ್ಲುವ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

ಕೆಎಲ್ ರಾಹುಲ್ ನಾಯಕತ್ವದಲ್ಲಿ, ಎಲ್‌ಎಸ್‌ಜಿ ಸತತ ಮೂರನೇ ಸೀಸನ್‌ಗೆ ಪ್ಲೇಆಫ್‌ಗೆ ಹೋಗುವ ಕನಸನ್ನು ಕಾಣುತ್ತಿದೆ. ಮತ್ತು ಮುಂದಿನ ಪಂದ್ಯದಲ್ಲಿ ಡೆಲ್ಲಿಗೆ ಸತತ ಮೂರನೇ ಸೋಲಿನ ರುಚಿಯನ್ನು ನೀಡಲು ಪ್ಲ್ಯಾನ್ ಮಾಡಿಕೊಂಡಿದೆ.
ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಇದುವರೆಗೆ 4 ಪಂದ್ಯಗಳನ್ನು ಆಡಿದೆ. ಮೊದಲ ಪಂದ್ಯದಲ್ಲಿ ಸೋತಿದ್ದರೂ ಆ ಬಳಿಕ ಈ ತಂಡ ಹ್ಯಾಟ್ರಿಕ್ ಜಯ ಸಾಧಿಸಿದೆ. ಎಲ್‌ಎಸ್‌ಜಿಯ ಮುಂದಿನ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶುಕ್ರವಾರ, ಏಪ್ರಿಲ್ 12 ರಂದು ಏಕನಾ ಕ್ರೀಡಾಂಗಣದಲ್ಲಿ ನಡೆಯಲಿದೆ.












Click it and Unblock the Notifications