ಕನ್ನಡಿಗ ಕೆ.ಎಲ್. ರಾಹುಲ್‌ಗೆ ಘೋರ ಅನ್ಯಾಯ ಮಾಡಿದ ಬಿಸಿಸಿಐ?
ಕನ್ನಡಿಗ ಕೆ.ಎಲ್. ರಾಹುಲ್‌ಗೆ ಘೋರ ಅನ್ಯಾಯ ಆಗಿದೆ ಅಂತಾ ಅಭಿಮಾನಿಗಳು ಇದೀಗ ರೊಚ್ಚಿಗೆದ್ದಿದ್ದಾರೆ. ಯಾಕಂದ್ರೆ 2024ರ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಈಗ ಆಯ್ಕೆ ಮಾಡಲಾಗಿದ್ದು, ಕೆ.ಎಲ್. ರಾಹುಲ್ ಅವರನ್ನು ಕೈಬಿಡಲಾಗಿದೆ. ಈ ವಿಚಾರ ಕನ್ನಡಿಗರನ್ನ ಕೆರಳಿಸಿದ್ದು, ಕನ್ನಡ ನಾಡಿನ ಕ್ರಿಕೆಟ್ ಅಭಿಮಾನಿಗಳು ಭಾರಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಕೆ.ಎಲ್. ರಾಹುಲ್ ಬ್ಯಾಟ್ ಹಿಡಿದು ನಿಂತರೆ ದಾಖಲೆಗಳು ಧೂಳ್ ಧೂಳ್ ಆಗುತ್ತವೆ. ಈ ರೀತಿ ಕೆ.ಎಲ್. ರಾಹುಲ್ ಅಬ್ಬರಿಸುತ್ತಿದ್ದರೆ, ಬೌಲರ್ಸ್ ಎದೆಯಲ್ಲಿ ನಡುಕ ಶುರುವಾಗುತ್ತೆ. ಕನ್ನಡಿಗ ರಾಹುಲ್ ಹೀಗೆ ಜಗತ್ತಿನಾದ್ಯಂತ ಹವಾ ಇಟ್ಟಿದ್ದಾರೆ. ಹೀಗಿದ್ದರೂ, 2024ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಕೆ.ಎಲ್. ರಾಹುಲ್ ಅವರಿಗೆ ಸ್ಥಾನ ನೀಡಿಲ್ಲ. ಈ ವಿಚಾರ ಈಗ ದೊಡ್ಡ ಚರ್ಚೆಗೆ ಕಾರಣವಾಗುವ ಜೊತೆಗೆ, ರಾಹುಲ್ ಯಾಕೆ ಆಯ್ಕೆ ಆಗಿಲ್ಲ? ಎಂಬ ಕುರಿತು ಕೆಲ ಅಂಶಗಳು ಹರಿದಾಡುತ್ತಿವೆ. ಹಾಗಾದ್ರೆ ಯಾವ ಕಾರಣಕ್ಕೆ ಕೆ.ಎಲ್. ರಾಹುಲ್ ಅವರನ್ನು ಬಿಸಿಸಿಐ ಕೈಬಿಟ್ಟಿರಬಹುದು? ಬನ್ನಿ ಮುಖ್ಯವಾದ ಮಾಹಿತಿ ತಿಳಿಯೋಣ.

ಕೆ.ಎಲ್. ರಾಹುಲ್ ಕೈಬಿಡಲು ಕಾರಣ
ಈಗ ಓಡಾಡುತ್ತಿರುವ ಮಾಹಿತಿಗಳ ಪ್ರಕಾರ, ಭಾರತ ತಂಡಕ್ಕೆ ಟಿ20 ವಿಶ್ವಕಪ್ ಆಡೋದಕ್ಕೆ ಅತ್ಯುತ್ತಮವಾದ ಫಿನಿಶರ್ಸ್ ಅಗತ್ಯವಿದ್ದಾರೆ. ಈ ಕಾರಣಕ್ಕೆ ಫಿನಿಶರ್ ಪಾತ್ರಕ್ಕೆ ಬೇರೆ ಆಟಗಾರನ ಆಯ್ಕೆ ಮಾಡಿಕೊಳ್ಳಲಾಗಿದೆ, ಇದು ಕೂಡ ಕೆ.ಎಲ್. ರಾಹುಲ್ ಅವರಿಗೆ ಅವಕಾಶ ಕೈತಪ್ಪಿ ಹೋಗಲು ಒಂದು ಕಾರಣವಾಗಿದೆ. ಹಾಗೇ ಕೆ.ಎಲ್. ರಾಹುಲ್ ಕೇವಲ ಬ್ಯಾಟಿಂಗ್ ಕಡೆಗೆ ಮಾತ್ರ ಗಮನ ಹರಿಸುತ್ತಾರೆ, ಇದು ಕೂಡ ಒಂದು ಸಮಸ್ಯೆ ಆಗಿತ್ತು. ಯಾಕಂದ್ರೆ ಟಿ20 ಆಡಲು ಆಲ್‌ರೌಂಡರ್ ಅಗತ್ಯತೆ ತುಂಬಾ ಇರುತ್ತದೆ. ಬ್ಯಾಟಿಂಗ್ ಜೊತೆ ಬೌಲಿಂಗ್ ಮಾಡುವ ಪ್ರತಿ ಆಟಗಾರನಿಗೆ ಅವಕಾಶ ಹೆಚ್ಚಾಗಿ ಸಿಗುತ್ತದೆ.
ಬ್ಯಾಟಿಂಗ್ ಮಾತ್ರ ಮಾಡೋದೆ ಸಮಸ್ಯೆ?
ಮತ್ತೊಂದು ಕಡೆ ವಿಕೆಟ್ ಕೀಪರ್ & ಬ್ಯಾಟ್ಸ್‌ಮನ್ ಆಗಿ ಇಬ್ಬರು ಆಟಗಾರರು ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಇದು ಕೂಡ ಕೆ.ಎಲ್. ರಾಹುಲ್ ಅವರಿಗೆ ಹಿನ್ನಡೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೇ ಕೆ.ಎಲ್. ರಾಹುಲ್ ಅವರು ಐಪಿಎಲ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡದೇ ಇರುವುದು ಕೂಡ ಒಂದು ದೊಡ್ಡ ಸಮಸ್ಯೆ ಆಗಿತ್ತು. ಗಾಯದಿಂದ ಬಳಲುತ್ತಿರುವುದು ಕೂಡ ಕೆ.ಎಲ್. ರಾಹುಲ್ ಆಯ್ಕೆಗೆ ಅಡ್ಡಿ ಉಂಟುಮಾಡಿದೆ ಎನ್ನಲಾಗಿದ್ದು ಮತ್ತೊಂದು ಕಡೆ ಈಗ ಶಿವಂ ದುಬೇಗೆ ಅವಕಾಶ ಕೊಟ್ಟರೆ ಒಂದೆರಡು ಓವರ್ ಬೌಲಿಂಗ್ ಕೂಡ ಮಾಡಿಸಬಹುದು, ಆದ್ರೆ ಕೆ.ಎಲ್. ರಾಹುಲ್ ಬೌಲಿಂಗ್ ಮಾಡಲ್ಲ ಎಂಬುದು ಕೂಡ ಮೈನಸ್ ಪಾಯಿಂಟ್ ಆಗಿತ್ತು.
ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಯುಜುವೇಂದ್ರ ಚಹಾಲ್, ಅರ್ಷದೀಪ್ ಸಿಂಗ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್. ಹಾಗೂ ಇದರ ಜೊತೆಗೆ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ, ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್ ಇದ್ದಾರೆ.












Click it and Unblock the Notifications