ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್‌ ಕ್ರಿಕೆಟ್- ಫಿಫಾ ವಿಶ್ವಕಪ್‌ ಟಿಕೆಟ್ ದರಗಳ ನಡುವಿನ ವ್ಯತ್ಯಾಸ ಎಷ್ಟು?

|
Google Oneindia Kannada News

ಕತಾರ್‌, ನವೆಂಬರ್ 16: ಗಲ್ಫ್ ರಾಷ್ಟ್ರಗಳಲ್ಲಿ ಮೊದಲ ಬಾರಿಗೆ ಕತಾರ್ ಆತಿಥ್ಯ ವಹಿಸಲಿರುವ ಫಿಫಾ ವಿಶ್ವಕಪ್-2022 ನವೆಂಬರ್ 20ರಂದು ಪ್ರಾರಂಭವಾಗಲಿದೆ. ಭಾರತ ಈ ಟೂರ್ನಿಯಲ್ಲಿ ಆಡುತ್ತಿಲ್ಲ. ಇದರ ಹೊರತಾಗಿಯೂ ಫಿಫಾ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸುವ ಲಕ್ಷಾಂತರ ಫುಟ್ಬಾಲ್ ಅಭಿಮಾನಿಗಳು ಭಾರತದಲ್ಲಿದ್ದಾರೆ. ಫಿಫಾ ವಿಶ್ವಕಪ್‌ಗೆ ಟಿಕೆಟ್‌ನ ಬೆಲೆ ದುಬಾರಿ ಇದ್ದರೂ, ಹೆಚ್ಚಿನ ಸಂಖ್ಯೆಯ ಜನರು ಟಿಕೆಟ್‌ಗಳನ್ನು ಬುಕ್ ಮಾಡುತ್ತಿದ್ದಾರೆ.

ಫುಟ್ಬಾಲ್ ವಿಶ್ವಕಪ್‌ ಗಲ್ಫ್ ರಾಷ್ಟ್ರಗಳಲ್ಲಿ ಮೊದಲ ಬಾರಿಗೆ ಆಡಲ್ಪಡುತ್ತಿದೆ. ಫಿಪಾ ವಿಶ್ವಕಪ್ 2022ರ ಆವೃತ್ತಿಯು ಕತಾರ್‌ನಲ್ಲಿ ಆತಿಥ್ಯ ವಹಿಸಲಿದ್ದು, ನವೆಂಬರ್ 20ರಂದು ಪ್ರಾರಂಭವಾಗಲಿದೆ ಡಿಸೆಂಬರ್ 18ರಂದು ಫೈನಲ್‌ನೊಂದಿಗೆ ಮುಕ್ತಾಯಗೊಳ್ಳಲಿದೆ. ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 32 ತಂಡಗಳು ಭಾಗವಹಿಸುತ್ತಿವೆ. ಈ ತಂಡಗಳಲ್ಲಿ 6 ತಂಡಗಳು ಏಷ್ಯಾದಿಂದ ಬಂದಿವೆ. ಅವುಗಳಲ್ಲಿ ಭಾರತ ಇಲ್ಲ ಈ ಸಲ ಆಡುತ್ತಿಲ್ಲ ಆದರೂ ಫಿಫಾ ವಿಶ್ವಕಪ್ ವೀಕ್ಷಿಸಲು ಭಾರತದಲ್ಲಿ ಲಕ್ಷಾಂತರ ಫುಟ್ಬಾಲ್ ಬೆಂಬಲಿಗರಿದ್ದಾರೆ.

ಐಪಿಎಲ್‌ ಕ್ರಿಕೆಟ್- ಫಿಫಾ ವಿಶ್ವಕಪ್‌ ಟಿಕೆಟ್ ದರಗಳ ನಡುವಿನ ವ್ಯತ್ಯಾಸ ಎಷ್ಟು? ಐಪಿಎಲ್‌ ಕ್ರಿಕೆಟ್- ಫಿಫಾ ವಿಶ್ವಕಪ್‌ ಟಿಕೆಟ್ ದರಗಳ ನಡುವಿನ ವ್ಯತ್ಯಾಸ ಎಷ್ಟು?

ಲೈವ್ ಆಗಿ ವೀಕ್ಷಿಸಲು ಟಿವಿ ಚಾನೆಲ್‌ಗಳು ಅಥವಾ ಲೈವ್ ಸ್ಟ್ರೀಮಿಂಗ್ ಮೂಲಕ ಫುಟ್‌ಬಾಲ್ ಅಭಿಮಾನಿಗಳು ತಮ್ಮ ಮನೆಯ ಸೌಕರ್ಯದಿಂದ ಪಂದ್ಯಗಳನ್ನು ಆನಂದಿಸಬಹುದು. ಇನ್ನೂ ಕ್ರೀಡಾಂಗಣದಲ್ಲಿ ನೇರ ಪಂದ್ಯಗಳನ್ನು ವೀಕ್ಷಿಸಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಐಪಿಎಲ್‌ ಫಿಫಾ ಎರಡಕ್ಕೂ ಟಿಕೆಟ್ ದರ ಭಾರಿ ವ್ಯತ್ಯಾಸ

ಐಪಿಎಲ್‌ ಫಿಫಾ ಎರಡಕ್ಕೂ ಟಿಕೆಟ್ ದರ ಭಾರಿ ವ್ಯತ್ಯಾಸ

ಕತಾರ್ ಫಿಫಾ ವಿಶ್ವಕಪ್ ಟಿಕೆಟ್‌ಗಳು ತುಂಬಾ ದುಬಾರಿಯಾಗಿದೆ ಎಂಬುದು ಭಾರತೀಯ ಫುಟ್‌ಬಾಲ್ ಅಭಿಮಾನಿಗಳಿಗೆ ಸ್ಪಷ್ಟವಾಗಲಿ. ನೀವು ಫಿಫಾ ವಿಶ್ವಕಪ್ ಮತ್ತು ಐಪಿಎಲ್‌ನ್ನು ಹೋಲಿಕೆ ಮಾಡಿದರೆ, ಎರಡಕ್ಕೂ ಟಿಕೆಟ್ ದರದಲ್ಲಿ ಭಾರಿ ವ್ಯತ್ಯಾಸವಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗರಿಷ್ಠ 35,000 ರೂಪಾಯಿ ಟಿಕೆಟ್ ದರದಲ್ಲಿ ಪಂದ್ಯಗಳನ್ನು ನೋಡಬಹುದು. ಇದೇ ವೇಳೆ ಕ್ರೀಡಾಂಗಣದಲ್ಲಿ ಫಿಫಾ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು 13 ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ.

ಫಿಫಾ ವಿಶ್ವಕಪ್-2022 ಟಿಕೆಟ್ ದರಗಳು ಹೀಗಿವೆ

ಫಿಫಾ ವಿಶ್ವಕಪ್-2022 ಟಿಕೆಟ್ ದರಗಳು ಹೀಗಿವೆ

ಗುಂಪು ಹಂತದಿಂದ ಫಿಫಾ ವಿಶ್ವಕಪ್ 2022ರ ಫೈನಲ್‌ವರೆಗೆ ಟಿಕೆಟ್ ದರಗಳು ವಿಭಿನ್ನವಾಗಿವೆ. ಗುಂಪು ಹಂತದ ಪಂದ್ಯಗಳ ಟಿಕೆಟ್ ದರ 53,000 ರೂ.ನಿಂದ 4.79 ಲಕ್ಷ ರೂ. ಇದೇ ರೀತಿ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದ ಟಿಕೆಟ್ ದರ 37 ಸಾವಿರದಿಂದ 8 ಲಕ್ಷ ರೂ., ಕ್ವಾರ್ಟರ್ ಫೈನಲ್‌ಗೆ 47 ಸಾವಿರದಿಂದ 3.40 ಲಕ್ಷ ರೂ., ಸೆಮಿಫೈನಲ್‌ಗೆ 77 ಸಾವಿರದಿಂದ 3.5 ಲಕ್ಷ ರೂ. ಅಂತಿಮ ಪಂದ್ಯದ ಟಿಕೆಟ್‌ನ ಬೆಲೆ 2.25 ಲಕ್ಷ ರೂ.ಯಿಂದ 13.39 ಲಕ್ಷ ರೂ. ಟಿಕೆಟ್‌ ಬೆಲೆ ಇರುತ್ತದೆ

ಐಪಿಎಲ್‌ ಟಿಕೆಟ್ ದರಗಳು ಹೀಗಿವೆ

ಐಪಿಎಲ್‌ ಟಿಕೆಟ್ ದರಗಳು ಹೀಗಿವೆ

ಇನ್ನೂ ಐಪಿಎಲ್ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, ಕಳೆದ ಐಪಿಎಲ್‌ನಲ್ಲಿ ಟಿಕೆಟ್‌ನ ಬೆಲೆ ಕನಿಷ್ಠ 400 ರೂ.ಯಿಂದ ಐಪಿಎಲ್ ಟಿಕೆಟ್‌ನ ಗರಿಷ್ಠ ಬೆಲೆ 35,000 ರೂ.ವರಿಗೆ ಇತ್ತು. ಅಷ್ಟಕ್ಕೂ ಇಷ್ಟು ವ್ಯತ್ಯಾಸ ಹೇಗೆ ಎಂದು ನೀವು ಈಗ ನೀವು ಯೋಚಿಸುತ್ತಿರಬೇಕು? ಆದರೆ, ಕ್ರೀಡಾಂಗಣಕ್ಕೆ ಅನುಗುಣವಾಗಿ ವಿವಿಧ ಬೆಲೆಗಳನ್ನು ನಿಗದಿಪಡಿಸಲಾಗುತ್ತದೆ. 2022ರ ಐಪಿಎಲ್‌ನಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ 400ರಿಂದ 14,000 ರೂ.ವರೆಗೆ ಕಡಿಮೆ ಬೆಲೆ ಇತ್ತು. ಇನ್ನು ಮುಂಬೈನ ವಾಂಖೆಡೆಯಲ್ಲಿ ಗರಿಷ್ಠ ಬೆಲೆ 800 ರಿಂದ 35,000 ರೂ. ವರಿಗೂ ಟಿಕೆಟ್‌ ಬೆಲೆಗಳು ಇದ್ದವು.

ಗುಂಪು ಹಂತದ ಟಿಕೆಟ್‌ಗಾಗಿಯೂ ಜಗಳ

ಗುಂಪು ಹಂತದ ಟಿಕೆಟ್‌ಗಾಗಿಯೂ ಜಗಳ

ಫಿಫಾದ ವೆಬ್‌ಸೈಟ್ ಪ್ರಕಾರ, ಗುಂಪು ಹಂತದ ಪಂದ್ಯಗಳ ಹೆಚ್ಚಿನ ಟಿಕೆಟ್‌ಗಳು ಮಾರಾಟವಾಗಿವೆ. ಈಗ ಕೆಲವೇ ಟಿಕೆಟ್‌ಗಳು ಉಳಿದಿವೆ. ಗುಂಪು ಹಂತದಿಂದ ಫೈನಲ್‌ವರೆಗಿನ ಟಿಕೆಟ್‌ಗಳು FIFA ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿದೆ. ಮೊದಲು ಬಂದವರಿಗೆ ಮೊದಲು ಸೇವೆ ಎಂಬ ನಿಯಮದ ಅಡಿಯಲ್ಲಿ ಆಫ್‌ಲೈನ್ ಟಿಕೆಟ್‌ಗಳ ಮಾರಾಟವೂ ನಡೆಯಲಿದೆ ಎಂದು ಹೇಳಲಾಗುತ್ತಿದೆ.

English summary
FIFA World Cup 2022 is going to be held in Qatar from 20 November to 18 December. In one of the world’s most popular tournaments, big names will spread their wings. There will be a battle to get the trophy among 32 teams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X