RCB: ತಮ್ಮ ಹಳೆಯ ತಂಡಕ್ಕೆ ವಾಪಸಾದ ಬಗ್ಗೆ ಭುವನೇಶ್ವರ್ ಕುಮಾರ್ ಹೇಳಿದ್ದೇನು?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಆರ್ ಸಿಬಿ ಬೌಲಿಂಗ್‌ಗೆ ಹೆಚ್ಚಿನ ಬಲ ಬಂದಿದೆ. ಭುವನೇಶ್ವರ್ ಕುಮಾರ್ ಜೊತೆ ಜೋಶ್ ಹೇಜಲ್‌ವುಡ್, ನುವಾನ್ ತುಷಾರ ಮತ್ತು ಯಶ್ ದಯಾಳ್‌ ತಂಡದ ಬೌಲಿಂಗ್‌ಗೆ ಬಲ ತುಂಬಲಿದ್ದಾರೆ.

ಭುವನೇಶ್ವರ್ ಕುಮಾರ್ ಆರ್ ಸಿಬಿ ತಂಡಕ್ಕೆ ಬಂದಿದ್ದು ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ತಂದಿದೆ. 2009 ಮತ್ತು 2010ರಲ್ಲಿ ಆರ್ ಸಿಬಿ ತಂಡದಲ್ಲಿದ್ದ ಭುವನೇಶ್ವರ್ ಕುಮಾರ್, 2011 ರಿಂದ 2013ರವರೆಗೆ ಪುಣೆ ವಾರಿಯರ್ಸ್ ತಂಡಕ್ಕೆ ಆಡಿದ್ದರು. 2014 ರಿಂದ 2024 ರವರೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕಾಗಿ ಆಡಿದ್ದರು. 2025ರಲ್ಲಿ ಅವರು ಆರ್ ಸಿಬಿ ತಂಡಕ್ಕಾಗಿ ಆಡಲಿದ್ದಾರೆ. ಐಪಿಎಲ್‌ನಲ್ಲಿ 176 ಪಂದ್ಯಗಳನ್ನಾಡಿರುವ ಭುವನೇಶ್ವರ್ ಕುಮಾರ್ 7.56 ಎಕಾನಮಿ ಹೊಂದಿದ್ದು 181 ವಿಕೆಟ್ ಪಡೆದಿದ್ದಾರೆ.

Bhuvneshwar Kumar Reaction After Picked by RCB in IPL 2025 mega Auction

ಭುವನೇಶ್ವರ್ ಕುಮಾರ್ ಹೇಳಿದ್ದೇನು?

ಜೆಡ್ಡಾದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಭುವನೇಶ್ವರ್ ಕುಮಾರ್ 10.75 ಕೋಟಿ ರೂಪಾಯಿಗೆ ಆರ್ ಸಿಬಿ ತಂಡದ ಪಾಲಾದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ ಪರಿಣಾಮಕಾರಿಯಾಗಿರಲಿದ್ದು, ಇದು ಉತ್ತಮ ಆಯ್ಕೆ ಎಂದು ಅನೇಕ ಮಾಜಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆರ್ ಸಿಬಿ ಸೇರಿದ ಬಗ್ಗೆ ಭುವನೇಶ್ವರ್ ಕುಮಾರ್ ಅಭಿಪ್ರಾಯ ಹೇಗಿತ್ತು ಎನ್ನುವುದನ್ನು ಆರ್ ಸಿಬಿ ಯನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ಮಾತನಾಡಿರುವ ಭುವನೇಶ್ವರ್ ಕುಮಾರ್, ಆರ್ ಸಿಬಿ ತನ್ನನ್ನು ಖರೀದಿ ಮಾಡಿದ್ದು ಅಚ್ಚರಿ ಮೂಡಿಸಿದೆ ಎಂದು ಹೇಳಿದ್ದಾರೆ.

"ಆರ್‌ಸಿಬಿ ನನ್ನನ್ನು ಬಿಡ್ ಮಾಡುತ್ತದೋ ಇಲ್ಲವೋ ಎಂದು ತಿಳಿದಿರಲಿಲ್ಲ, ಏಕೆಂದರೆ ಹರಾಜಿನಲ್ಲಿ ಏನು ಬೇಕಾದರೂ ಆಗಬಹುದು. ಆದರೆ ಆರ್ ಸಿಬಿ ನನ್ನನ್ನು ಬಿಡ್ ಮಾಡುತ್ತಿದ್ದಂತೆ, ತಂಡದ ನಿರ್ದೇಶಕ, ಕೋಚ್‌ ಮತ್ತು ಎಲ್ಲರಿಂದಲೂ ನನಗೆ ಸಂದೇಶ ಬಂದಿತ್ತು" ಎಂದು ಭುವನೇಶ್ವರ್ ಕುಮಾರ್ ಹೇಳಿದ್ದಾರೆ.

ಆರ್‌ಸಿಬಿಗೆ ಬಂದಿದ್ದು ಸಂತೋಷವಾಗಿದೆ

"ನಿಜ ಹೇಳಬೇಕು ಎಂದರೆ ಆರ್‌ಸಿಬಿಗೆ ವಾಪಸ್ ಬಂದಿದ್ದು ನನಗೆ ಸಂತೋಷವಾಗಿದೆ. ಈ ತಂಡ ನನಗೆ ಹೊಸದೇನು ಅಲ್ಲ, ಹೆಚ್ಚಿನ ಆಟಗಾರರು ನನಗೆ ಪರಿಚಯವಿದ್ದಾರೆ. ಹೊಸ ಹುಡುಗರು ಕೂಡ ಇದ್ದಾರೆ, ನಾನು ಅವರನ್ನು ಭೇಟಿಯಾಗುತ್ತೇನೆ. ಅವರ ಜೊತೆ ಮಾತನಾಡುತ್ತೇನೆ, ಮೂರು ತಿಂಗಳ ಕಾಲ ನಾವು ಜೊತೆಯಲ್ಲಿ ಆಡುತ್ತೇವೆ" ಎಂದು ಹೇಳಿದ್ದಾರೆ.

ಭುವನೇಶ್ವರ್ ಕುಮಾರ್ ಸದ್ಯ ನಡೆಯುತ್ತಿರುವ ಸೈಯಸ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಉತ್ತರ ಪ್ರದೇಶ ತಂಡದ ನಾಯಕತ್ವ ವಹಿಸಿಕೊಂಡಿದ್ದ ಅವರು ತಮ್ಮ ತಂಡವನ್ನು ಕ್ವಾರ್ಟರ್ ಫೈನಲ್‌ಗೆ ಮುನ್ನಡೆಸಿದರು. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಡೆಲ್ಲಿ ವಿರುದ್ದ ಸೋತು ಅಭಿಯಾನವನ್ನು ಮುಗಿಸಿದೆ. ಭುವನೇಶ್ವರ್ ಕುಮಾರ್ 6.03 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದು 11 ವಿಕೆಟ್ ಪಡೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+