ಬೆಂಗಳೂರು ಕಾಲ್ತುಳಿತ: ವಿರಾಟ್ ಕೊಹ್ಲಿ ಬಂಧನಕ್ಕೆ ಆಗ್ರಹಿಸಿ ಟ್ರೆಂಡ್ ಸೃಷ್ಟಿ... ಅಭಿಮಾನಿಗಳ ಆಕ್ರೋಶ!
ರಾಯಲ್ ಚಾಲೆಂಜರ್ಸ್ ಬೆಂಗಳೂರು / ಆರ್‌ಸಿಬಿ ತಂಡದ ಮಾಜಿ ನಾಯಕ ಹಾಗೂ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಅವರೇ ಬೆಂಗಳೂರಿನಲ್ಲಿ ನಡೆದ ದುರಂತಕ್ಕೆ ಪರೋಕ್ಷ ಕಾರಣ ಹೀಗಾಗಿ, ವಿರಾಟ್ ಕೊಹ್ಲಿ ಅವರನ್ನು ಬಂಧಿಸಬೇಕು ಎಂದು ಕೆಲವರು ಆಗ್ರಹಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದಲೂ ಸೋಷಿಯಲ್ ಮೀಡಿಯಾದಲ್ಲಿ #ArrestKohli ಎನ್ನುವ ಹ್ಯಾಷ್ ಟ್ಯಾಗ್ ಟ್ರೆಂಡ್ ಸೃಷ್ಟಿಯಾಗಿದೆ. ಇದಕ್ಕೆ ವಿರಾಟ್ ಕೊಹ್ಲಿ ಅಭಿಮಾನಿಗಳು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರೇ ನಾನು ಬೆಂಗಳೂರಿಗೆ ಬರಲಿದ್ದೇನೆ. ಬೆಂಗಳೂರಿನಲ್ಲಿ ಈ ಸಂಭ್ರಮಾಚರಣೆ ನೋಡುವುದಕ್ಕೆ ಕಾತುರನಾಗಿದ್ದೇನೆ ಎಂದು ಹೇಳಿದ್ದ ವಿಡಿಯೋ ಆರ್‌ಸಿಬಿ ತಂಡವು ಬೆಂಗಳೂರಿಗೆ ಬರುವ ಮುಂಚೆ ವೈರಲ್ ಆಗಿತ್ತು. ಆದರೆ, ಇದಕ್ಕೆಲ್ಲ ಯಾವ ಕೋನದಿಂದಲೂ ವಿರಾಟ್ ಕೊಹ್ಲಿ ಕಾರಣ ಅಲ್ಲ ಅಂತ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಈ ರೀತಿ ಟ್ರೆಂಡ್ ಮಾಡುತ್ತಿರುವವರ ಮೇಲೆ ಆಕ್ರೋಶ ಹೊರ ಹಾಕಿದೆ.
ಕಳೆದ 17 ವರ್ಷಗಳಿಂದಲೂ ಆರ್‌ಸಿಬಿ ಕಪ್ ಗೆದ್ದಿಲ್ಲ ಎಂದು ವಿರಾಟ್ ಕೊಹ್ಲಿ ಅವರನ್ನು ಟ್ರೋಲ್ ಮಾಡಿದವರು ಇದೀಗ ದುರಂತಕ್ಕೆಲ್ಲ ಕೊಹ್ಲಿ ಅವರೇ ಕಾರಣ ಅಂತ ಟ್ರೋಲ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಈ ದುಂರತಕ್ಕೆ ಹಾಗೂ 11 ಜನ ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪುವುದಕ್ಕೆ ವಿರಾಟ್ ಕೊಹ್ಲಿ ಅವರೇ ಕಾರಣ ಅವರನ್ನು ಕೂಡಲೇ ಬಂಧಿಸಿಬೇಕು ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದು. #ArrestKohli ಎನ್ನುವ ಹ್ಯಾಷ್ ಟ್ಯಾಗ್ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ರೆಂಡ್ ಸೃಷ್ಟಿ ಮಾಡಲಾಗಿದೆ. ಇದಕ್ಕೆ ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಅವರು ಲಂಡನ್‌ಗೆ ಹಾರಿದರು. 11 ಅಭಿಮಾನಿಗಳು ಸಾವನ್ನಪ್ಪಿದರು 💔. 50+ ಜನರು ಗಾಯಗೊಂಡರು
ಆದರೆ ಅವರು ಕೇವಲ ಟ್ರೋಫಿಗಾಗಿ ಅಳುತ್ತಿದ್ದರು 🏆😭😭
ಇದು ಭಾವುಕತೆ ಅಲ್ಲ - ಇದು ಒಳ್ಳೆಯದಲ್ಲ 💔 #ArrestKohli ಎಂದು ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಿಂದ ಪ್ರೇತ್‌ಮೀನಾ ಎನ್ನುವ ಖಾತೆಯಿಂದ ಟ್ವೀಟ್ ಮಾಡಲಾಗಿದೆ ಈ ರೀತಿ ಹಲವರು ಟ್ವೀಟ್ ಮಾಡಿದ್ದು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
He flew to London. 11 fan died 💔. 50+ were injured
— PretMeena (@PretMeena) June 5, 2025
But he cried only for a trophy 🏆😭😭
This isn’t passion —
This is not good 💔#ArrestKohli https://t.co/HOQTdLhz1D
* ವಿರಾಟ್ ಕೊಹ್ಲಿ ಕಡೆಯಿಂದ ಯಾವುದೇ ಪರಿಹಾರವಿಲ್ಲ
* ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿಲ್ಲ
* ಒಂದೇ ಟ್ವೀಟ್ ಪೋಸ್ಟ್ ಮಾಡಿ ಲಂಡನ್‌ಗೆ ಹೋಗಿದ್ದಾರೆ
* ವಿರಾಟ್ ಕೊಹ್ಲಿ ಇದುವರೆಗಿನ ಕೆಟ್ಟ ಕ್ರಿಕೆಟಿಗ ಎಂದು Gillfied⁷ ಎನ್ನುವ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.
ಅಮಿತ್ ಎನ್ನುವವರು, ಬೆಂಗಳೂರು ಪೊಲೀಸರು ಸಂಭ್ರಮಾಚರಣೆ ಅಥವಾ ಮೆರವಣಿಗೆ ಬೇಡ ಅಂತಲೇ ಹೇಳಿದ್ದರು. ಕಾಲಾವಕಾಶ ಕೇಳಿದ್ದರು. ಆದರೆ ಕರ್ನಾಟಕ ಸರ್ಕಾರವು ತಮ್ಮ ತಪ್ಪುಗಳನ್ನು ಮರೆಮಾಚಲು ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ಇತರ ಉನ್ನತ ಪೊಲೀಸರನ್ನು ಅಮಾನತುಗೊಳಿಸಿದೆ. ವಿರಾಟ್ ಅವರನ್ನು ಬಂಧಿಸಿ ಎಂದು ಟ್ಯಾಗ್ ಬಳಸಿದ್ದಾರೆ.
ಕೊಹ್ಲಿ ಅಭಿಮಾನಿಗಳಿಂದ ಆಕ್ರೋಶ: ಇನ್ನು ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಈ ಟ್ರೆಂಡ್‌ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಅವರು ಶತಕಗಳನ್ನು ಗಳಿಸಿದಾಗ ಅವರ ಹೆಸರನ್ನು ಜಪಿಸಿದರು. ಈಗ ಅವರನ್ನು ಜನಸಂದಣೆಯಿಂದ ಸೃಷ್ಟಿಯಾದ ದುರಂತಕ್ಕೆ ದೂಷಿಸಲಾಗುತ್ತಿದೆ. ನಿಜ ಹೇಳಬೇಕೆಂದರೆ ಕಾರ್ಯಕ್ರಮ ಮುಗಿದ ನಂತರ ವಿರಾಟ್ ಕೊಹ್ಲಿ ಹೊರಟು ಹೋದರು ಅಂತ ಪೋಸ್ಟ್ ಮಾಡಲಾಗಿದೆ.
ವಿರಾಟ್ ಕೊಹ್ಲಿಯನ್ನು ಕಂಡರೆ ಆಗದೆ ಇರುವವರು ಇವರನ್ನು ಬಂಧಿಸಿ ಎಂದು ಟ್ರೆಂಡ್ ಸೃಷ್ಟಿ ಮಾಡುತ್ತಿದ್ದಾರೆ. ಯಾರೋ ಮಾಡಿರುವ ತಪ್ಪಿಗೆ ಇವರನ್ನು ಯಾಕೆ ಮಧ್ಯ ತರುತ್ತಿದ್ದಾರೆ ಎಂದು ಆರ್‌ಸಿಬಿಯ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಅಭಿಮಾನಿಗಳ ಆಕ್ರೋಶ: ಇನ್ನು ವಿರಾಟ್ ಕೊಹ್ಲಿ ಬಂಧಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಟ್ರೆಂಡ್‌ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕ್ರಿಕೆಟ್ ಅಭಿಮಾನಿಗಳು ಹಾಗೂ ವಿರಾಟ್ ಕೊಹ್ಲಿ ಅಭಿಮಾನಿಗಳು ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಇದು ನಿಜಕ್ಕೂ ವಿಕೃತಿ & ವಿರಾಟ್ ಕೊಹ್ಲಿಯನ್ನು ಇಷ್ಟಪಡದವರು ಹಾಗೂ ಟ್ರೋಲ್ ಮಾಡುವುದಕ್ಕಾಗಿಯೇ ಕಾಯುತ್ತಿರುವವರು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.












Click it and Unblock the Notifications