Bengaluru Bulls: ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಬೆಂಗಳೂರು ಗೂಳಿಗಳ ಅಬ್ಬರ: ರೋಚಕ ಗೆಲುವು

ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಗೆಲುವಿನ ಲಯಕ್ಕೆ ಮರಳಿದೆ. ಮೊದಲ ನಾಲ್ಕು ಪಂದ್ಯಗಳನ್ನು ಸೋತ ಬಳಿಕ ಯುಪಿ ಯೋಧಾಸ್ ವಿರುದ್ಧದ ಗೆದ್ದ ಬುಲ್ಸ್ ಬುಧವಾರ ನಡೆದ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್ ವಿರುದ್ಧ ಕೂಡ ಗೆದ್ದು ಬೀಗಿದರು.

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ರೋಚಕ ಹಣಾಹಣಿ ನಡೆಸಿದವು. ಎರಡೂ ತಂಡಗಳು ಕೊನೆಯ 2-3 ನಿಮಿಷ ಇದೆ ಎನ್ನುವವರೆಗೂ ಸಮ ಅಂಕಗಳನ್ನು ಗಳಿಸಿದ್ದವು, ಯಾವ ತಂಡ ಬೇಕಾದರೂ ಗೆಲ್ಲಬಹುದಿತ್ತು, ಆದರೆ ಗೂಳಿಗಳು ಕೊನೆಯ ಕ್ಷಣದಲ್ಲಿ ಅಬ್ಬರಿಸಿದ ಕಾರಣ ಜೈಪುರ ಮಂಕಾಯಿತು.

Bengaluru Bulls Triumph in Last-Minute Thriller Against Jaipur Pink Panthers In PKL

ಆರಂಭದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಮೇಲುಗೈ ಸಾಧಿಸಿತ್ತು. ಆದರೂ ಹೋರಾಟ ಕೊಟ್ಟ ಬೆಂಗಳೂರು ಪಿಂಕ್ ಪ್ಯಾಂಥರ್ಸ್‌ಗೆ ಹೆಚ್ಚಿನ ಅಂಕಗಳ ಮುನ್ನಡೆ ಕೊಡಲಿಲ್ಲ. ಮೊದಲಾರ್ಧದಲ್ಲಿ ಕೂಡ ಜೈಪುರ ಪಿಂಕ್ ಪ್ಯಾಂಥರ್ಸ್ 17-14 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿತ್ತು.

ಭರತ್, ಖಂಡೋಲಾ ಆಪದ್ಭಾಂಧವರು

ದ್ವಿತೀಯಾರ್ಧದಲ್ಲಿ ಬೆಂಗಳೂರು ಗೂಳಿಗಳು ಅಬ್ಬರಿಸುವ ಮೂಲಕ ಅಂಕಗಳನ್ನು ಸಮನಾಗಿಸಿಕೊಂಡರು. ಭರತ್ ಮತ್ತು ವಿಕಾಶ್ ಖಂಡೋಲಾ ರೈಡಿಂಗ್‌ನಲ್ಲಿ ಪಾಯಿಂಟ್ ತಂದರೆ, ಸೌರಬ್ ನಂದನ್ ಮತ್ತು ಅಮನ್ ರಕ್ಷಣಾ ಕೋಟೆ ಕಟ್ಟಿದರು.

ವಿಕಾಶ್ ಖಂಡೋಲಾ 5 ರೈಡ್‌ ಪಾಯಿಂಟ್ ಜೊತೆ 3 ಬೋನಸ್ ಅಂಕಗಳ ಸಹಿತ ಒಟ್ಟು 8 ಪಾಯಿಂಟ್ಸ್ ತಂದುಕೊಟ್ಟರೆ. ಭರತ್ ಒಟ್ಟು 9 ಅಂಕಗಳನ್ನು ತಂದುಕೊಟ್ಟರು. ಸೌರಭ್ ನಂದಾಲ್, ಮೋನು, ಅಮನ್, ಸರ್ಜೀತ್ ಸಿಂಗ್ ಡಿಫೆಂಡರ್ ಗಳಾಗಿ ಉತ್ತಮ ಪ್ರದರ್ಶನ ನೀಡಿದರು.

ಜೈಪುರ ಪರವಾಗಿ ವಿ. ಅಜಿತ್ ಕುಮಾರ್ 9 ರೈಡಿಂಗ್ ಪಾಯಿಂಟ್ ಪಡೆದು ಗೂಳಿ ಪಡೆ ವಿರುದ್ಧ ಹೋರಾಟ ನೀಡಿದರು. ಅರ್ಜುನ್ ದೇಶ್ವಾಲ್ ಕೇವಲ 4 ರೈಡಿಂಗ್ ಮಾತ್ರ ಪಡೆಯಲು ಸಾಧ್ಯವಾಯಿತು. ಬುಲ್ಸ್ ಕೋಟೆ ಮೇಲೆ ಪ್ಯಾಂಥರ್ಸ್ ಪತಾಕೆ ಹಾರಿಸುವ ಕನಸು ಈಡೇರಲಿಲ್ಲ.

ಕೊನೆಯ ಎರಡು ಮೂರು ನಿಮಿಷಗಳವರೆಗೆ ಉಭಯ ತಂಡಗಳ ಸ್ಕೋರ್ ಸಮನಾಗಿತ್ತು, ಎರಡೂ ತಂಡಗಳು ಒಂದೊಂದೆ ಅಂಕದಲ್ಲಿ ಮೇಲುಗೈ ಸಾಧಿಸುತ್ತಿದ್ದವು. ಆದರೆ ಕೊನೆಯ ಒಂದೂವರೆ ನಿಮಿಷದಲ್ಲಿ ಬೆಂಗಳೂರಿನ ಗೂಳಿಗಳು ಅಬ್ಬರಿಸಿದವು.

ಡಿಫೆಂಡ್ ಮತ್ತು ರೈಡಿಂಗ್ ಎರಡೂ ವಿಭಾಗದಲ್ಲಿ ಮಿಂಚಿದ ಬೆಂಗಳೂರು ಬುಲ್ಸ್ 32-30 ಪಾಯಿಂಟ್‌ಗಳಲ್ಲಿ ಪಂದ್ಯ ಗೆದ್ದು ಬೀಗಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+