Virat Kohli: ಭಾರತ ತಂಡದಲ್ಲಿ ಜಾಗ ಇಲ್ಲ! ವಿರಾಟ್ ಕೊಹ್ಲಿಗೆ ಬಿಸಿಸಿಐ ಶಾಕ್‌

ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸೋಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ನಿದ್ದೆಗೆಡಿಸಿದೆ. ಗೆಲ್ಲುತ್ತಿದ್ದಾಗ ಬಿಸಿಸಿಐ ಆಟಗಾರರಿಗೆ ಸ್ವಾತಂತ್ರ ನೀಡಿತ್ತು, ಸತತ ಸೋಲಿನ ಬಳಿಕ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಡ್ರೆಸ್ಸಿಂಗ್‌ ರೂಂನಲ್ಲಿ ಅಶಿಸ್ತು ಇದೆ ಎಂದು ಕೋಚ್ ಗೌತಮ್ ಗಂಭೀರ್ ಹೇಳಿದ ಬೆನ್ನಲ್ಲೇ ಹಲವು ನಿಯಮಗಳನ್ನು ಜಾರಿ ಮಾಡಲು ನಿರ್ಧರಿಸಿದೆ.

ಸ್ಟಾರ್ ಆಟಗಾರರ ವಿಚಾರದಲ್ಲಿ ಕೂಡ ಬಿಸಿಸಿಐ ಕಠಿಣ ನಿರ್ಧಾರ ತೆಗೆದುಕೊಂಡಿದ್ದು ಖಡಕ್ ಸೂಚನೆ ರವಾನಿಸಿದೆ. ಇನ್ನು ಮುಂದೆ ಸ್ಟಾರ್ ಆಟಗಾರರು ಕಾರಣಗಳನ್ನು ನೀಡಿ ದೇಶೀಯ ಟೂರ್ನಿಯಿಂದ ತಪ್ಪಿಸಿಕೊಳ್ಳಲು ಅವಕಾಶ ಇರುವುದಿಲ್ಲ, ಎಲ್ಲಾ ಆಟಗಾರರು ದೇಶೀಯ ಟೂರ್ನಿಯಲ್ಲಿ ಆಡುವುದು ಕಡ್ಡಾಯವಾಗಿದೆ.

bcci warns virat kohli play ranji trophy no chance in team india

ಸ್ಟಾರ್ ಬ್ಯಾಟರ್ ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಬ್ ಪಂತ್‌ ಅವರಂತಹ ಸ್ಟಾರ್ ಆಟಗಾರರು ಇದರಿಂದ ಹೊರತಾಗಿಲ್ಲ. ಎಲ್ಲರಿಗೂ ಈ ನಿಯಮ ಅನ್ವಯವಾಗುತ್ತದೆ ಎಂದು ಬಿಸಿಸಿಐ ಸೂಚನೆ ಕೊಟ್ಟಿದೆ. ರೋಹಿತ್ ಶರ್ಮಾ ಈಗಾಗಲೇ ಮುಂಬೈ ತಂಡದ ಜೊತೆ ಅಭ್ಯಾಸ ಮಾಡುತ್ತಿದ್ದು, ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಡೆಲ್ಲಿ ಪರವಾಗಿ ಆಡಲಿದ್ದಾರೆ.

ವಿರಾಟ್ ಕೊಹ್ಲಿಗೆ ಬಿಸಿಸಿಐ ಸೂಚನೆ

ಭಾರತ ತಂಡದ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. 2020ರ ಬಳಿಕ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. 2011 ರಿಂದ 2019ರ ವರೆಗೆ 141 ಇನ್ನಿಂಗ್ಸ್‌ಗಳಲ್ಲಿ 54.8 ಸರಾಸರಿಯಲ್ಲಿ 7183 ರನ್ ಗಳಿಸಿದ್ದರು, ಇದರಲ್ಲಿ 27 ಶತಕ ಮತ್ತು 22 ಅರ್ಧಶತಕ ಸೇರಿದ್ದವು. ಆದರೆ 2020ರಿಂದ ಈವರೆಗೆ 69 ಇನ್ನಿಂಗ್ಸ್‌ಗಳಲ್ಲಿ 35.7 ಸರಾಸರಿಯಲ್ಲಿ 2028 ರನ್ ಗಳಿಸಿದ್ದಾರೆ, ಇದರಲ್ಲಿ 3 ಶತಕ ಮತ್ತು 9 ಅರ್ಧಶತಕ ಸೇರಿವೆ. 2020ರ ಬಳಿಕ ಕೊಹ್ಲಿ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಅಂಕಿ ಅಂಶಗಳೇ ಹೇಳಿವೆ.

ಒಂದು ಕಾಲದಲ್ಲಿ ಅಗ್ರ ಕ್ರಮಾಂಕದ ಟೆಸ್ಟ್ ಬ್ಯಾಟರ್ ಆಗಿದ್ದ ವಿರಾಟ್ ಕೊಹ್ಲಿ ಈಗ ಟಾಪ್ 10ನಲ್ಲೂ ಇಲ್ಲದಂತಾಗಿದ್ದಾರೆ. ಹಲವು ಯುವ ಆಟಗಾರರು ಭಾರತ ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದು, ರೋಹಿತ್, ಕೊಹ್ಲಿ ನಿವೃತ್ತಿ ಪಡೆಯಲಿ ಎನ್ನುವ ಒತ್ತಾಯ ಕೂಡ ಜೋರಾಗಿದೆ.

ದೇಶೀಯ ಕ್ರಿಕೆಟ್ ಆಡಲಿ ಎಂದ ಗಂಭೀರ್

ಭಾರತ ತಂಡದ ಕಳಪೆ ಪ್ರದರ್ಶನದ ಬಳಿಕ ಗೌತಮ್ ಗಂಭೀರ್, ಭಾರತ ತಂಡಕ್ಕಾಗಿ ಆಡುವ ಎಲ್ಲಾ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕು ಎಂದು ಬಿಸಿಸಿಐ ಪರಿಶೀಲನಾ ಸಭೆಯಲ್ಲಿ ಹೇಳಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಇದಕ್ಕೆ ಹೊರತಾಗಿರಬೇಕಿಲ್ಲ ಎಂದು ಈಗಾಗಲೇ ತಿಳಿದಿದೆ.

ದುಲೀಪ್ ಟ್ರೋಫಿಯಲ್ಲಿ ಆಡಲು ವಿರಾಟ್ ಕೊಹ್ಲಿ ನಿರಾಕರಿಸಿದ್ದರು, ಜೂನ್ 30 ರಿಂದ ಸೆಪ್ಟಂಬರ್ 18ರವರೆಗೆ ಕೊಹ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಡಿದ್ದರು. ದುಲೀಪ್ ಟ್ರೋಫಿಯಲ್ಲಿ ಆಡುವಂತೆ ರೋಹಿತ್ ಶರ್ಮಾ ಮತ್ತು ಕೊಹ್ಲಿಗೆ ಬಿಸಿಸಿಐ ಒತ್ತಾಯ ಮಾಡಿದ್ದರೂ ಇಬ್ಬರು ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದರಿಂದ ಪಂದ್ಯಾವಳಿಯಲ್ಲಿ ಆಡಲಿಲ್ಲ.

ವಿರಾಟ್ ಕೊಹ್ಲಿಗೆ ಬಿಸಿಸಿಐ ಸೂಚನೆ ಕೊಟ್ಟಿದ್ದು ರಣಜಿ ಟ್ರೋಫಿಯಲ್ಲಿ ಆಡದೇ ಇದ್ದರೆ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದಲ್ಲಿ ಅವಕಾಶ ಇಲ್ಲ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+