LSG vs MI: 30 ಲಕ್ಷ ರೂಪಾಯಿಗೆ ಹರಾಜಾಗಿ ಎರಡೇ ಪಂದ್ಯದಲ್ಲಿ ಲಕ್ಷ ಲಕ್ಷ ದಂಡ ಕಟ್ಟಿದ ಎಲ್‌ಎಸ್‌ಜಿ ಬೌಲರ್

ಶುಕ್ರವಾರ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್‌ಗಳ ಗೆಲುವು ಸಾಧಿಸಿತ್ತು. ಪಂಜಾಬ್ ಕಿಂಗ್ಸ್ ವಿರುದ್ಧ ಸೋಲಿನಿಂದ ಕಂಗೆಟ್ಟಿದ್ದ ಎಲ್‌ಎಸ್‌ಜಿ ಮತ್ತೆ ಗೆಲುವಿನ ಹಳಿಗೆ ಮರಳಿದೆ. ಆದರೆ ಗೆಲುವಿನ ಖುಷಿಯಲ್ಲಿದ್ದ ಎಲ್‌ಎಸ್‌ಜಿಗೆ ಡಬಲ್ ಶಾಕ್ ಸಿಕ್ಕಿದೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ವಿಕೆಟ್ ಪಡೆದ ಬಳಿಕ ಸೈನ್ ಆಫ್ ಮಾಡುವ ಅತಿರೇಕದ ಸಂಭ್ರಮಾಚರಣೆ ಮಾಡಿದ್ದ ಎಲ್‌ಎಸ್‌ಜಿ ಬೌಲರ್ ದಿಗ್ವೇಶ್ ರಾಠಿಗೆ ದಂಡ ವಿಧಿಸಲಾಗಿತ್ತು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ನಮನ್ ಧಿರ್ ವಿಕೆಟ್ ಪಡೆದ ಬಳಿಕ ಮತ್ತೊಮ್ಮೆ ಸೈನ್ ಆಫ್ ಮಾಡುವಂತೆ ಸಂಭ್ರಮಿಸಿದರು.

Bcci imposes heavy fine on lsgs digvesh rathi

ಲಕ್ನೋಗೆ ಡಬಲ್ ಶಾಕ್

ಲಖನೌ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಮತ್ತು ಸ್ಪಿನ್ನರ್ ದಿಗ್ವೇಶ್ ಸಿಂಗ್ ರಥಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ತಪ್ಪಿತಸ್ಥರೆಂದು ಕಂಡುಬಂದಿದ್ದು, ಇದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತ್ಯೇಕ ಶಿಕ್ಷೆಯನ್ನು ಘೋಷಣೆ ಮಾಡಿದೆ.

Take a Poll

ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ಪಂತ್‌ಗೆ ₹12 ಲಕ್ಷ ದಂಡ ವಿಧಿಸಲಾಗಿದೆ. ಮತ್ತೊಂದೆಡೆ, ದಿಗ್ವೇಶ್ ತನ್ನ ಹಿಂದಿನ ತಪ್ಪುಗಳಿಂದ ಬುದ್ದಿ ಕಲಿಯದಿದ್ದಕ್ಕಾಗಿ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಲಾಗಿದೆ. ಇದು ಐಪಿಎಲ್‌ನ 18 ನೇ ಸೀಸನ್‌ನಲ್ಲಿ ಇದುವರೆಗಿನ ಅತಿ ದೊಡ್ಡ ದಂಡವಾಗಿದೆ.

"ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ 16 ನೇ ಪಂದ್ಯದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ, ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದ ರಿಷಭ್ ಪಂತ್ ಅವರಿಗೆ ಈ ಋತುವಿನ ಮೊದಲ ಅಪರಾಧ ಇದಾಗಿರುವುದರಿಂದ, ರಿಷಭ್ ಪಂತ್ ಅವರಿಗೆ12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ" ಎಂದು ಬಿಸಿಸಿಐ ತಿಳಿಸಿದೆ.

ಲೆಗ್ ಸ್ಪಿನ್ನರ್ ದಿಗ್ವೇಶ್ ಸಿಂಗ್ ಅವರ ನೋಟ್‌ಬುಕ್-ಆಫ್‌ಗಾಗಿ ಬಿಸಿಸಿಐ ಕಠಿಣ ಶಿಕ್ಷೆ ವಿಧಿಸಲು ನಿರ್ಧರಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲ ಅಪರಾಧಕ್ಕಾಗಿ ಅವರ ಪಂದ್ಯ ಶುಲ್ಕದ 25% ದಂಡ ವಿಧಿಸಲಾಯಿತು, ಅದನ್ನು ಲೆವೆಲ್ 1 ಉಲ್ಲಂಘನೆ ಎಂದು ಪರಿಗಣಿಸಲಾಗಿತ್ತು. ಆದರೂ ದಿಗ್ವೇಶ್ ಪಾಠ ಕಲಿಯಲಿಲ್ಲ. ಶುಕ್ರವಾರ ನಮನ್ ಧೀರ್ ಅವರನ್ನು ಔಟ್ ಮಾಡಿದ ಬಳಿಕ ಇದನ್ನೇ ಮುಂದುವರೆಸಿದರು.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್ ದಿಗ್ವೇಶ್ ಸಿಂಗ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 50 ರಷ್ಟು ದಂಡ ವಿಧಿಸಲಾಗಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+