ಏಷ್ಯಾಕಪ್, ಟಿ20 ವಿಶ್ವಕಪ್‌ಗೆ ಬಾಂಗ್ಲಾದೇಶದ ಮುಖ್ಯ ಕೋಚ್ ಆಗಿ ಶ್ರೀಧರನ್ ಶ್ರೀರಾಮ್ ನೇಮಕ

ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿದ್ದ ಭಾರತದ ಶ್ರೀಧರನ್ ಶ್ರೀರಾಮ್ ಅವರನ್ನು ಮುಂಬರುವ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಲು ಬಾಂಗ್ಲಾದೇಶದ ಮುಖ್ಯ ಕೋಚ್‌ ಆಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನೇಮಕ ಮಾಡಿದೆ ಎಂದು ವರದಿಯಾಗಿದೆ.

ಆಸ್ಟ್ರೇಲಿಯ ತಂಡದ ಸಹಾಯಕ ಕೋಚ್ ಆಗಿ ದೀರ್ಘಾವಧಿ ಕೆಲಸ ನಿರ್ವಹಿಸಿದ್ದ ಶ್ರೀಧರನ್ ಶ್ರೀರಾಮ್ ಇತ್ತೀಚಿಗೆ ಭಾರತದಲ್ಲಿ ತಮ್ಮ ಕೋಚಿಂಗ್ ವೃತ್ತಿಜೀವನದ ಮೇಲೆ ಗಮನ ಹರಿಸಲು ಆಸ್ಟ್ರೇಲಿಯಾ ತಂಡವನ್ನು ತೊರೆದು ಹೊರಬಂದಿದ್ದರು.

ಆಗಸ್ಟ್ 27ರಿಂದ ಯುಎಇನಲ್ಲಿ ಆರಂಭವಾಗುವ ಏಷ್ಯಾಕಪ್ ಮತ್ತು ಇದೇ ವರ್ಷ ಅಕ್ಟೋಬರ್ ನಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

BCB Has Appointed Indias Sreedharan Sriram As The Head Coach For Bangla T20 Team

ಚೆನ್ನೈ ಮೂಲದ ಶ್ರೀರಾಮ್ ಪ್ರಧಾನವಾಗಿ ಸ್ಪಿನ್ ತರಬೇತುದಾರರಾಗಿ ಆರು ವರ್ಷಗಳ ಕಾಲ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿದ್ದರು, ಅದೇ ಸಮಯದಲ್ಲಿ ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಅನೇಕ ವಿಭಾಗಗಳಲ್ಲಿ ತರಬೇತಿ ನೀಡಲು ಪ್ರಮುಖ ಪಾತ್ರ ವಹಿಸಿದ್ದರು.

"ನಾವು ವಿಶ್ವಕಪ್‌ವರೆಗೆ ಶ್ರೀರಾಮ್ ಅವರನ್ನು ಆಯ್ಕೆ ಮಾಡಿದ್ದೇವೆ" ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿಯ ನಿರ್ದೇಶಕರು ದಿ ಡೈಲಿ ಸ್ಟಾರ್‌ಗೆ ತಿಳಿಸಿದ್ದಾರೆ.

ಟಿ20 ವಿಶ್ವಕಪ್ ಗೆಲ್ಲುವುದು ನಮ್ಮ ಗುರಿ
ನಾವು ಹೊಸ ಮನಸ್ಥಿತಿಯೊಂದಿಗೆ ಮುಂದೆ ನಡೆಯುತ್ತಿರುವಾಗ, ನಮ್ಮ ಗುರಿ ಟಿ20 ವಿಶ್ವಕಪ್ ಗೆಲ್ಲುವುದಾಗಿರುವದರಿಂದ, ಹೊಸ ಕೋಚ್ ತಂಡಕ್ಕೆ ಹೊಂದಿಕೊಳ್ಳಲು ಸಮಯ ಸಿಗುವುದಿಲ್ಲ. ಆದ್ದರಿಂದ ಏಷ್ಯಾಕಪ್‌ನಿಂದಲೇ ಹೊಸ ಕೋಚ್‌ ಕೆಲಸ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

BCB Has Appointed Indias Sreedharan Sriram As The Head Coach For Bangla T20 Team

ಏಷ್ಯಾ ಕಪ್‌ಗೆ ಹೆಚ್ಚು ಸಮಯ ಉಳಿದಿಲ್ಲ ಎಂದು ಹಲವರು ಹೇಳಬಹುದು. ಆದರೆ, ನಮ್ಮ ಮುಖ್ಯ ಗಮನವು ಟಿ 20 ವಿಶ್ವಕಪ್ ಗೆಲ್ಲುವುದಾಗಿದೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ ಅಧಿಕಾರಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಜಿಂಬಾಬ್ವೆ ವಿರುದ್ಧ ಸರಣಿ ಸೋತಿದ್ದ ಬಾಂಗ್ಲಾ
ಎರಡು ಮೆಗಾ-ಈವೆಂಟ್‌ಗಳಲ್ಲಿ ಬಾಂಗ್ಲಾದೇಶದ ಕಾರ್ಯಕ್ಷಮತೆಯನ್ನು ಸುಧಾರಿಸಲು ತೀವ್ರ ಬದಲಾವಣೆಗಳನ್ನು ಮಾಡುವ ಬಗ್ಗೆ ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಪಾಪೋನ್ ಗುರುವಾರ ಸುಳಿವು ನೀಡಿದ್ದರು.

ವರದಿಯ ನಂತರದ ಬೆಳವಣಿಗೆಯ ಪ್ರಕಾರ, ಢಾಕಾಗೆ ಆಗಮಿಸಿರುವ ದಕ್ಷಿಣ ಆಫ್ರಿಕಾದ ಹೊಸ ಕೋಚ್ ರಸೆಲ್ ಡೊಮಿಂಗೊ ​​ಬಾಂಗ್ಲಾ ಟೆಸ್ಟ್ ತಂಡಕ್ಕೆ ಕೋಚ್ ಆಗಿ ಕೆಲಸ ಮಾಡಲಿದ್ದಾರೆ.

ಇತ್ತೀಚೆಗೆ ಜಿಂಬಾಬ್ವೆ ಪ್ರವಾಸ ಮಾಡಿದ್ದ ಬಾಂಗ್ಲಾ ತಂಡ ಏಕದಿನ ಮತ್ತು ಟಿ 20 ಸರಣಿಯಲ್ಲಿ ಹೀನಾಯವಾಗಿ ಸೋಲನುಭವಿಸಿತ್ತು. ಬಾಂಗ್ಲಾ ಕ್ರಿಕೆಟ್ ಮಂಡಳಿ ತಂಡದ ಪ್ರದರ್ಶನದ ಬಗ್ಗೆ ಕಿಡಿಕಾರಿತ್ತು. ಅದಾದ ಕೆಲವೇ ದಿನಗಳಲ್ಲಿ ಈ ನಿರ್ಧಾರ ಹೊರಬಿದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+