ಐಸಿಸಿ ವಿಶ್ವಕಪ್: ದಕ್ಷಿಣ ಆಫ್ರಿಕಾ ತಂಡದ ‘ಚೋಕರ್ಸ್’ ಹಣೆಪಟ್ಟಿ ಕಿತ್ತು ಬಿಸಾಡಲು ಆಗಲ್ಲ!
ದಕ್ಷಿಣ ಆಫ್ರಿಕಾ ಎಡವಟ್ಟುಗಳ ಸರಪಳಿ ಮುಂದುವರಿಸಿದೆ, ಪ್ರತಿ ವಿಶ್ವಕಪ್ ಟೂರ್ನಿಯಲ್ಲಿ ಮೊದಲು ಅಬ್ಬರಿಸುವ ಹರಿಣಗಳ ಪಡೆ. ನಂತರ ಹಾದಿ ತಪ್ಪುತ್ತಾ ಬರುತ್ತದೆ, ಅದರಲ್ಲೂ ಸೆಮಿಫೈನಲ್ ಅಖಾಡದಲ್ಲಿ ಸೋಲುವುದು ದಕ್ಷಿಣ ಆಫ್ರಿಕಾಗೆ ಮಾಮೂಲಾಗಿದೆ. ಇಂದೂ ಅದೇ ರೀತಿ ಎಡವಟ್ಟು ಮಾಡಿಕೊಂಡಿದೆ ದಕ್ಷಿಣ ಆಫ್ರಿಕಾ. ಅದರಲ್ಲೂ ಮಳೆರಾಯ ಕೂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಕಾಟ ಕೊಡಲು ಶುರು ಮಾಡಿದ್ದಾನೆ.
ಆಸ್ಟ್ರೇಲಿಯಾ ತಂಡದ ವಿರುದ್ಧ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟ್ ಬೀಸುವ ಆಯ್ಕೆ ಮಾಡಿಕೊಂಡಿತು. ಈ ಮೂಲಕ ಆಸ್ಟ್ರೇಲಿಯಾಗೆ ಬೃಹತ್ ಮೊತ್ತದ ಗುರಿ ನೀಡುವ ಟಾರ್ಗೆಟ್ ಇಟ್ಟುಕೊಂಡಿತ್ತು. ಆದರೂ ಮ್ಯಾಚ್ ಶುರುವಾಗಿ ಇನ್ನೂ 25 ಓವರ್ ಕಳೆದಿಲ್ಲ, ಈಗಾಗಲೇ ತನ್ನ 4 ವಿಕೆಟ್ ಕಳೆದುಕೊಂಡಿದೆ. ಹಾಗೇ ರನ್‌ರೇಟ್ ಕೂಡ ಪಾತಾಳ ತಲುಪಿ ಸೌತ್ ಆಫ್ರಿಕಾ ತಂಡ ಇಂದು ಆಸ್ಟ್ರೇಲಿಯ ವಿರುದ್ಧ ಸೋಲಿನ ಸರಪಳಿ ಮುಂದುವರಿಸುವ ಮುನ್ಸೂಚನೆ ನೀಡಿದೆ. ಹಾಗಾದರೆ ದಕ್ಷಿಣ ಆಫ್ರಿಕಾ ಬಗ್ಗೆ ಇತಿಹಾಸ ಹೇಳುವುದೇನು?

ಚರಿತ್ರೆಯಲ್ಲೇ ಬೆರೆತಿದೆ ಹೀನಾಯ ಸೋಲು
ದ.ಆಫ್ರಿಕಾಗೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೆ ಹೆಚ್ಚಾಗಿ ಸಿಕ್ಕಿರುವುದು, ಬರೀ ಸೋಲು ಸೋಲು. ಅದರಲ್ಲೂ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಬರೀ ಸೋಲು ಕಂಡು ತತ್ತರಿಸಿ ಹೋಗಿದೆ ದಕ್ಷಿಣ ಆಫ್ರಿಕಾ. ಇದೇ ಕಾರಣಕ್ಕೆ 'ಚೋಕರ್ಸ್' ಹಣೆಪಟ್ಟಿಯು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಸುತ್ತಿಕೊಂಡಿದೆ. ಇದೀಗ ಆಸ್ಟ್ರೇಲಿಯಾ ವಿರುದ್ಧವು ಹೀಗೆ ಸೋಲಿನ ಮೆರವಣಿಗೆ ಮುಂದವರಿಯುವ ಸೂಚನೆ ಸಿಕ್ಕಿದೆ. ಹಾಗಾದರೆ ಐಸಿಸಿ ವಿಶ್ವಕಪ್‌ನ ಚರಿತ್ರೆಯಲ್ಲಿ 'ಚೋಕರ್ಸ್' ದಕ್ಷಿಣ ಆಫ್ರಿಕಾ ಹೇಗೆಲ್ಲಾ ಸೋತಿದೆ?
ದಕ್ಷಿಣ ಆಫ್ರಿಕಾಗೆ ಮಳೆ ಕಂಟಕ!
1) 1992- ಅಂದಹಾಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ 1992ರಲ್ಲಿ ಕೂಡ ವಿಶ್ವಕಪ್ ಸೆಮಿ ಫೈನಲ್ ಅಖಾಡ ಪ್ರವೇಶ ಮಾಡಿತ್ತು. ಆದರೆ ಇಂಗ್ಲೆಂಡ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಮಳೆ ಕಾರಣ ಸಿಡ್ನಿ ಕ್ರೀಡಾಂಗಣದಲ್ಲಿ 19 ರನ್‌ಗಳ ಹೀನಾಯ ಸೋಲು ಕಂಡಿತ್ತು.

2) 2003- ದಕ್ಷಿಣ ಆಫ್ರಿಕಾ ತಂಡದ ಹಣೆಬರಹವೇ ಸರಿ ಇಲ್ಲ ಅಂತಾ ಕಾಣುತ್ತೆ. ಯಾಕೆ ಅಂದ್ರೆ 2003ರಲ್ಲಿ, ಶ್ರೀಲಂಕಾ ನೀಡಿದ್ದ 269 ರನ್‌ಗಳ ಸುಲಭದ ಗುರಿ ಬೆನ್ನುಹತ್ತುತ್ತಿದ್ದಾಗ ಮಳೆ ಬಂದಿತ್ತು. ಈ ವೇಳೆ ಡಕ್ವರ್ತ್-ಲೂಯಿಸ್ ನಿಯಮ ಅನುಸರಿಸುವಾಗ ಆದ ದೊಡ್ಡ ಎಡವಟ್ಟಿನ ಪರಿಣಾಮ ದಕ್ಷಿಣ ಆಫ್ರಿಕಾ ಸೋತು ಸೂಪರ್-6 ತಲುಪುವ ಅವಕಾಶ ಕೂಡ ಮಿಸ್ ಆಗಿತ್ತು.
3) 2015- ಆಸ್ಟ್ರೇಲಿಯಾ & ನ್ಯೂಜಿಲೆಂಡ್ ದೇಶಗಳ ಆತಿಥ್ಯದಲ್ಲಿ ನಡೆದ, 2015ರ ಐಸಿಸಿ ಏಕದಿನ ವಿಶ್ವಕಪ್ ಅಖಾಡದಲ್ಲೂ ಇದೇ ರೀತಿ ಸೋಲು ಕಂಡಿತ್ತು ದಕ್ಷಿಣ ಆಫ್ರಿಕಾ. ಆದ್ರೆ ಆ ಪಂದ್ಯದಲ್ಲೂ ಮಳೆರಾಯ ಅಡ್ಡಿ ಮಾಡಿದ್ದ ಅನ್ನೋದು ಕಾಕತಾಳೀಯವೇ ಸರಿ.
4) 2023- ಈಗ ನೋಡಿದರೆ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ಸ್ ಸೋಲುವ ಹಂತಕ್ಕೆ ಬಂದಿದೆ. ಆರಂಭದಲ್ಲೇ ದೊಡ್ಡ ಎಡವಟ್ಟು ಮಾಡಿಕೊಂಡಿದ್ದು, 44 ರನ್‌ಗೆ 4 ವಿಕೆಟ್ ಕಳೆದುಕೊಂಡು ಪರದಾಡುತ್ತಿದೆ ಹರಿಣಗಳ ಪಡೆ.












Click it and Unblock the Notifications