ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100ನೇ ಟಿ20: ಪಾಕಿಸ್ತಾನ ವಿರುದ್ಧ ವಿಶೇಷ ಬ್ಯಾಟ್‌ ಹಿಡಿದು ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿ

|
Google Oneindia Kannada News

ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಸಿದ್ಧರಾಗಿದ್ದಾರೆ. ಏಷ್ಯಾಕಪ್‌ನಲ್ಲಿ ಆಗಸ್ಟ್ 28ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯ ವಿರಾಟ್ ಕೊಹ್ಲಿ ವೃತ್ತಿಜೀವನದ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯ ಎನ್ನುವುದೇ ವಿಶೇಷ.

ವಿರಾಟ್ ಕೊಹ್ಲಿ ವಿಶೇಷ ಬ್ಯಾಟ್‌ನೊಂದಿಗೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಕೊಹ್ಲಿಯ ಏಷ್ಯಾಕಪ್ ಪ್ರಚಾರಕ್ಕಾಗಿ ಎಂಆರ್ ಎಫ್‌ ಗೋಲ್ಡ್ ವಿಝಾರ್ಡ್ ಗುಣಮಟ್ಟದ ವಿಶೇಷ ಬ್ಯಾಟ್ ಅನ್ನು ಪ್ರಾಯೋಜಿಸುತ್ತಿದೆ.

ಏಷ್ಯಾ ಕಪ್: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ಏಷ್ಯಾ ಕಪ್: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್

ವರದಿಗಳ ಪ್ರಕಾರ, ಬ್ಯಾಟ್ ವಿಶಿಷ್ಟವಾದ ಐಷಾರಾಮಿ ಮರದಿಂದ ಮಾಡಲ್ಪಟ್ಟಿದೆ ಮತ್ತು ಈ ವಿಶೇಷ ಬ್ಯಾಟ್‌ನ ಬೆಲೆ ತಿಳಿದರೆ ನೀವು ಶಾಕ್ ಆಗುತ್ತೀರಿ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಸುವ ಬ್ಯಾಟ್‌ನ ಬೆಲೆ ಸುಮಾರು 22,000 ರುಪಾಯಿ. ಸದ್ಯ ಈ ಬ್ಯಾಟ್‌ನ ಚಿತ್ರಗಳು ಈಗ ವೈರಲ್ ಆಗಿದೆ.

ಫಾರ್ಮ್‌ ಕಂಡುಕೊಳ್ಳಲು ಯತ್ನಿಸುತ್ತಿರುವ ವಿರಾಟ್ ಕೊಹ್ಲಿಗೆ ಪಾಕಿಸ್ತಾನ ಎದುರಿನ ಪಂದ್ಯ ಬಹಳ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಹೊಸ ಬ್ಯಾಟ್ ಕೊಹ್ಲಿಗೆ ಅದೃಷ್ಟ ತಂದುಕೊಡುತ್ತೆ ಎಂದು ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ.

ಭಾರತ-ಪಾಕಿಸ್ತಾನ ಕ್ರಿಕೆಟ್: ಮರೆಯಲಾಗದ 5 ಕಿರಿಕ್ ಘಟನೆಗಳುಭಾರತ-ಪಾಕಿಸ್ತಾನ ಕ್ರಿಕೆಟ್: ಮರೆಯಲಾಗದ 5 ಕಿರಿಕ್ ಘಟನೆಗಳು

 ಮೊದಲ ತರಬೇತಿ ಅವಧಿ ಪೂರ್ಣಗೊಳಿಸಿದ ಟೀಂ ಇಂಡಿಯಾ

ಮೊದಲ ತರಬೇತಿ ಅವಧಿ ಪೂರ್ಣಗೊಳಿಸಿದ ಟೀಂ ಇಂಡಿಯಾ

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಬುಧವಾರ ದುಬೈನಲ್ಲಿ ತಮ್ಮ ಮೊದಲ ತರಬೇತಿ ಅವಧಿಯನ್ನು ಪೂರ್ಣಗೊಳಿಸಿದೆ. ಏಷ್ಯಾಕಪ್‌ನ ತಮ್ಮ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಆಗಸ್ಟ್ 28ರ ಭಾನುವಾರದಂದು ಹೈ ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ, ಕಳೆದ ವರ್ಷದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

 ನೆಟ್ಸ್‌ನಲ್ಲಿ ಸತತ ಅಭ್ಯಾಸ ಮಾಡಿದ ವಿರಾಟ್ ಕೊಹ್ಲಿ

ನೆಟ್ಸ್‌ನಲ್ಲಿ ಸತತ ಅಭ್ಯಾಸ ಮಾಡಿದ ವಿರಾಟ್ ಕೊಹ್ಲಿ

ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ವಿರುದ್ಧದ ಭಾರತದ ಸೀಮಿತ ಓವರ್‌ಗಳ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ, ದುಬೈನಲ್ಲಿ ಭಾರತದ ಮೊದಲ ತರಬೇತಿ ಅವಧಿಯಲ್ಲಿ ನೆಟ್ಸ್‌ನಲ್ಲಿ ಬೆವರು ಹರಿಸಿದರು. ಕ್ರಿಕೆಟ್‌ನಿಂದ ವಿರಾಮ ಪಡೆದ ನಂತರ ಕೊಹ್ಲಿ ಉತ್ತಮ ಉತ್ಸಾಹದಲ್ಲಿದ್ದಾರೆ.

ಅಭ್ಯಾಸದಲ್ಲಿ ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿ ಇದ್ದಂತೆ ಕಂಡುಬಂದಿದೆ. ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಹಾಲ್ ಅವರ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಉತ್ತಮ ಹೊಡೆತಗಳನ್ನು ಬಾರಿಸಿದ್ದಾರೆ.

 ಪಂದ್ಯಕ್ಕೂ ಮುನ್ನ ಭಾರತ, ಪಾಕಿಸ್ತಾನ ಆಟಗಾರರ ಭೇಟಿ

ಪಂದ್ಯಕ್ಕೂ ಮುನ್ನ ಭಾರತ, ಪಾಕಿಸ್ತಾನ ಆಟಗಾರರ ಭೇಟಿ

ಭಾರತೀಯ ಆಟಗಾರರು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಿ ಆಟಗಾರರನ್ನು ಭೇಟಿಯಾದ ವಿಡಿಯೋವನ್ನು ಬಿಸಿಸಿಐ ಬುಧವಾರ ಹಂಚಿಕೊಂಡಿದ್ದು, ವಿರಾಟ್ ಕೊಹ್ಲಿ ಬಾಬರ್ ಅಜಮ್ ಅವರನ್ನು ವೀಡಿಯೋದಲ್ಲಿ ಅಭಿನಂದಿಸುತ್ತಿರುವುದನ್ನು ಕಾಣಬಹುದು.

ಆಗಸ್ಟ್ 27ರಂದು ಆಫ್ಘಾನಿಸ್ತಾನ-ಶ್ರೀಲಂಕಾ ಪಂದ್ಯದೊಂದಿಗೆ ಏಷ್ಯಾಕಪ್ 2022ರ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ. ಆಗಸ್ಟ್ 28ರಂದು ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಎರಡನೇ ಬಾರಿಗೆ ಏಷ್ಯಾಕಪ್ ಟಿ20 ಮಾದರಿಯಲ್ಲಿ ಆಯೋಜನೆ ಮಾಡಲಾಗಿದೆ.

 ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತೇನೆ

ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತೇನೆ

ಇಂಗ್ಲೆಂಡ್‌ನಲ್ಲಿ ಆದ ಅನುಭವದಿಂದ ಪಾಠ ಕಲಿತಿದ್ದೇನೆ. ಅಲ್ಲಿ ನಾನು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ ಎಂದು ನನಗೆ ಅನಿಸಲಿಲ್ಲ. ಯಾವ ವಿಭಾಗದಲ್ಲಿ ನಾನು ಸುಧಾರಣೆಯಾಗಬೇಕು ಎಂದು ಕಂಡುಕೊಂಡಿದ್ದೇನೆ. ನನ್ನನ್ನು ನಾನು ಸುಧಾರಿಸಲು ಅಭ್ಯಾಸ ಮಾಡುತ್ತಿದ್ದೇನೆ. ಬ್ಯಾಟಿಂಗ್‌ನಲ್ಲಿ ಉತ್ತಮ ಲಯವನ್ನು ಕಂಡುಕೊಂಡಾಗ ನಾನು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತೇನೆ ಎಂದು ನನಗೆ ತಿಳಿದಿದೆ. ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ವೃತ್ತಿಜೀವನದಲ್ಲಿ ಏರಿಳಿತಗಳು ಇರುತ್ತವೆ ಎಂದು ನನಗೆ ತಿಳಿದಿದೆ. ನಾನು ಅದರಿಂದ ಕಲಿಯಲು ಬಯಸುತ್ತೇನೆ ಮತ್ತು ಕ್ರೀಡಾಪಟುವಾಗಿ ಮತ್ತು ಮಾನವನಾಗಿ ನನ್ನಲ್ಲಿರುವ ಪ್ರಮುಖ ಮೌಲ್ಯಗಳು ಏನೆಂದು ಅರ್ಥಮಾಡಿಕೊಳ್ಳಲು ನಾನು ಬಯಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

English summary
India open their Asia Cup campaign against arch-rivals Pakistan, and the match will be a special occasion for Kohli. Virat Kohli will feature in the 100th T20I match of his career, Kohli will get to play with a special bat that has been custom-made for him. MRF will sponsor the special bat of 'Gold Wizard' quality for Kohli's Asia Cup campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X