Anvay Dravid: ಕನ್ನಡಿಗ ರಾಹುಲ್ ದ್ರಾವಿಡ್‌ ಪುತ್ರ ಅನ್ವಯ್‌ಗೆ ದೊಡ್ಡ ಜವಾಬ್ದಾರಿ

Anvay Dravid: ಟೀಂ ಇಂಡಿಯಾ ದಿಗ್ಗಜ ಹಾಗೂ ಮಾಜಿ ಮುಖ್ಯ ತರಬೇತುದಾರ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ. ಇದೀಗ ಅವರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ನಲ್ಲಿ ದೊಡ್ಡ ಜವಾಬ್ದಾರಿಯನ್ನು ನೀಡಲಾಗಿದೆ.

17 ವರ್ಷದ ಅನ್ವಯ್ ದ್ರಾವಿಡ್ ಅವರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ನಲ್ಲಿ ದೊಡ್ಡ ಜವಾಬ್ದಾರಿ ಸಿಕ್ಕಿದೆ. ಭಾರತೀಯ ಅಂಡರ್-19 ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ಬೆನ್ನಲ್ಲೇ, ಅನ್ವಯ್ ಅವರನ್ನು ಮುಂಬರುವ ಪ್ರತಿಷ್ಠಿತ 'ವಿನೂ ಮಂಕಡ್ ಟ್ರೋಫಿ' ಏಕದಿನ ಟೂರ್ನಿಗೆ ಕರ್ನಾಟಕ ಅಂಡರ್-19 ತಂಡದ ನಾಯಕನನ್ನಾಗಿ ನೇಮಕ ಮಾಡಲಾಗಿದೆ.

Anvay Dravid Kanndiga Rahul Dravid s Son Named Karnataka U-19 Captain for Vinoo Mankad Trophy

ಭಾರತೀಯ U-19 ತಂಡದಲ್ಲಿದ್ದ ಅನ್ವರ್ ಮಿಂಚಿಂಗ್

ಅನ್ವಯ್ ಇತ್ತೀಚೆಗೆ ಭಾರತ ಅಂಡರ್-19 ತಂಡದ ಪರ ವಿಕೇಟ್ ಕೀಪರ್ ಮತ್ತು ಬ್ಯಾಟರ್ ಆಗಿ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ಶ್ರೀಲಂಕಾ ಪ್ರವಾಸದಲ್ಲಿ ಭಾರತ U-19 ತಂಡದ ಪರ ಪದಾರ್ಪಣೆ ಮಾಡಿದ್ದ ಅವರು, ಆರಂಭದಲ್ಲೇ ಆಪತ್ಬಾಂಧವನಂತೆ ನಿಂತು 67 ಎಸೆತಗಳಲ್ಲಿ 87 ರನ್ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದರು. ನಂತರ ಆಸ್ಟ್ರೇಲಿಯಾ ಸರಣಿಯಲ್ಲೂ ಉತ್ತಮ ಕೊಡುಗೆ ನೀಡುವ ಮೂಲಕ ಆಯ್ಕೆಗಾರರ ಗಮನ ಸೆಳೆದಿದ್ದರು.

ವಿನೂ ಮಂಕಡ್ ಟ್ರೋಫಿಗೆ ಸಜ್ಜು

ಅಕ್ಟೋಬರ್ 8ರಿಂದ ವಿಶಾಖಪಟ್ಟಣಂನಲ್ಲಿ ಆರಂಭ ಆಗಲಿರುವ ವಿನೂ ಮಂಕಡ್ ಟ್ರೋಫಿ ಟೂರ್ನಿಯಲ್ಲಿ ಅನ್ವಯ್ ದ್ರಾವಿಡ್ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಟೂರ್ನಿಯಲ್ಲಿ ಕರ್ನಾಟಕ ತಂಡವು 'ಇ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ದೆಹಲಿ, ಗುಜರಾತ್, ಜಾರ್ಖಂಡ್, ಹಿಮಾಚಲ ಪ್ರದೇಶ ಹಾಗೂ ಛತ್ತೀಸ್‌ಗಢ ತಂಡಗಳ ವಿರುದ್ಧ ಸೆಣೆಸಲಿದೆ.

ಅಪ್ಪನ ಹಾದಿಯಲ್ಲೇ ಸಾಗುತ್ತಿರುವ ಅನ್ವಯ್ ದ್ರಾವಿಡ್

ರಾಹುಲ್ ದ್ರಾವಿಡ್ ಕೂಡ 1990ರ ದಶಕದ ಆರಂಭದಲ್ಲಿ ಭಾರತೀಯ ಅಂಡರ್-19 ತಂಡವನ್ನು ಪ್ರತಿನಿಧಿಸಿ, ನಂತರ ಹಂತ - ಹಂತವಾಗಿ ಉನ್ನತ ಸ್ಥಾನವನ್ನು ಅಲಂಕರಿಸುತ್ತಾ ಬಂದಿದ್ದರು. ಇದೀಗ ಅವರ ಪುತ್ರ ಅನ್ವಯ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದು, ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಎರಡರಲ್ಲೂ ನೆರವಾಗುವುದರ ಜೊತೆಗೆ ನಾಯಕತ್ವದ ಗುಣಗಳನ್ನೂ ಪ್ರದರ್ಶಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್‌ಸಿಎ) ಇವರ ಪ್ರದರ್ಶನ ಹಾಗೂ ನಾಯಕತ್ವ ಸಾಮರ್ಥ್ಯವನ್ನು ಗುರುತಿಸಿ ಈ ಪ್ರಮುಖ ಜವಾಬ್ದಾರಿಯನ್ನು ನೀಡಿದೆ.

ವಿನೂ ಮಂಕಡ್ ಟ್ರೋಫಿ ಪಂದ್ಯಾವಳಿಯು ಅಕ್ಟೋಬರ್ 8 ರಿಂದ 16ರ ವರೆಗೆ ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ಬಲಗೈ ಬ್ಯಾಟರ್-ವಿಕೆಟ್‌ಕೀಪರ್ ಆಗಿರುವ 17 ವರ್ಷದ ದ್ರಾವಿಡ್, ಇತ್ತೀಚೆಗೆ ರಾಜ್‌ಕೋಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಭಾರತ U-19 ಪಡೆಯ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಿದ್ದು, ಎರಡು ಪಂದ್ಯಗಳನ್ನು ಆಡಿದ್ದರು. ಇದಕ್ಕೂ ಮುನ್ನ ಈ ವರ್ಷದ ಜುಲೈನಲ್ಲಿ ನಡೆದ ಶ್ರೀಲಂಕಾ ಪ್ರವಾಸಕ್ಕೂ ಆಯ್ಕೆಯಾಗಿದ್ದರು.

ವಿನೂ ಮಂಕಡ್ ಟ್ರೋಫಿಗೆ ಕರ್ನಾಟಕ ಅಂಡರ್-19 ತಂಡ

ಅನ್ವಯ್ ದ್ರಾವಿಡ್ (ನಾಯಕ ಮತ್ತು ವಿಕೆಟ್‌ ಕೀಪರ್), ನಿತೀಶ್ ಆರ್ಯ, ಧ್ರುವ್ ಕೃಷ್ಣನ್, ಆರ್. ರೋಹಿತ್ ರೆಡ್ಡಿ, ಆದರ್ಶ್ ಎಸ್.ಜೆ., ಸುಜಯ್ ಕೊರ್ವಾರ್, ವರುಣ್ ಪಟೇಲ್ (ವಿಕೆಟ್‌ ಕೀಪರ್), ಅನಿಕೇತ್ ರೆಡ್ಡಿ, ಪಿ. ತೇಜಸ್ ರೆಡ್ಡಿ, ಸಮರ್ಥ್ ಎಂ. ಕುಲಕರ್ಣಿ, ವೈಭವ್ ಸಿ., ಗೌರವ್ ವೆಂಕಟೇಶ್, ರಥನ್ ಬಿ.ಆರ್., ಪ್ರೀತಮ್ ರಾಜ್ ಕೆ., ಧ್ಯಾನ್ ಎಂ.ಹಿರೇಮಠ.

ಸೆಪ್ಟೆಂಬರ್ 18ರಂದು ರಾಜ್‌ಕೋಟ್‌ನಲ್ಲಿ ಮಳೆಯಿಂದಾಗಿ ಓವರ್‌ಗಳನ್ನು ಕಡಿತಗೊಳಿಸಲಾಗಿದ್ದ ಮೊದಲ ಯೂತ್ ಏಕದಿನ ಪಂದ್ಯದಲ್ಲಿ, ಆಸ್ಟ್ರೇಲಿಯಾ U-19 ವಿರುದ್ಧ ಭಾರತ ಅಂಡರ್-19 ಪಡೆ 7 ರನ್‌ಗಳ ರೋಮಾಂಚಕ ಜಯ ಬಾರಿಸಿತು. ಈ ಗೆಲುವಿನಲ್ಲಿ ಅನ್ವಯ್ ದ್ರಾವಿಡ್ ಅವರ ಕೊನೆಯ ಹಂತದ ಸ್ಫೋಟಕ ಬ್ಯಾಟಿಂಗ್ ಹಾಗೂ ಯಶ್‌ವರ್ಧನ್ ಚೌಹಾಣ್ ಅವರ ಭರ್ಜರಿ ಅರ್ಧಶತಕದ ಕೊಡುಗೆ ಪ್ರಮುಖ ಪಾತ್ರವಹಿಸಿತ್ತು.

ಅನ್ವಯ್ ದ್ರಾವಿಡ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 182 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ನಿರಂಜನ್ ಶಾ ಕ್ರೀಡಾಂಗಣದಲ್ಲಿ ಮಳೆಯ ಅಡಚಣೆಯಿಂದಾಗಿ ಈ ಪಂದ್ಯವನ್ನು ತಲಾ 20 ಓವರ್‌ಗಳಿಗೆ ಕಡಿತಗೊಳಿಸಲಾಗಿತ್ತು. ಇನ್ನು ಇದೇ ವೇಳೆ ಮೂಲಕ ಭಾರತದ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಅವರು ಕೂಡ ತಮ್ಮ ಅಂಡರ್-19 ಚೊಚ್ಚಲ ಪಂದ್ಯವನ್ನು ಆಡಿದರು.

ಓವರ್‌ಗಳನ್ನು ಕಡಿತಗೊಳಿಸಲಾಗಿದ್ದ ಈ ಪಂದ್ಯದಲ್ಲಿ ಆರ್ಯವೀರ್ ಅವರು ತಮ್ಮ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿದರು. ಅವರು 5 ಬೌಂಡರಿಗಳೊಂದಿಗೆ 26 ಎಸೆತಗಳಲ್ಲಿ 28 ರನ್ ಬಾರಿಸಿ ಗಮನ ಸೆಳೆದರು. ಮತ್ತೊಂದೆಡೆ ಆರ್ಯವೀರ್ ಅವರ ಪಂದ್ಯವನ್ನು ವೀಕ್ಷಿಸಲು ತಂದೆ ಸೆಹ್ವಾಗ್ ಕ್ರೀಡಾಂಗಣದಲ್ಲೇ ಹಾಜರಿದ್ದದ್ದು ಗಮನ ಸೆಳೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+