Anvay Dravid: ಭಾರತ ತಂಡದಲ್ಲಿ ಸ್ಥಾನ ಪಡೆದ ಕನ್ನಡಿಗ ರಾಹುಲ್‌ ದ್ರಾವಿಡ್‌ ಹಾಗೂ ಸೆಹ್ವಾಗ್ ಪುತ್ರರು

Anvay Dravid: ಟೀಮ್ ಇಂಡಿಯಾ ಮಾಜಿ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ಮತ್ತು ವೀರೇಂದ್ರ ಸೆಹ್ವಾಗ್ ಮಗ ಆರ್ಯವೀರ್ ಮುಂಬರುವ ಎಸಿಸಿ ಅಂಡರ್-19 ಏಷ್ಯಾ ಕಪ್‌ಗೆ ಭಾರತದ ಯುವ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಒಮಾನ್‌ನಲ್ಲಿ ನವೆಂಬರ್ 5 ರಿಂದ 14ರ ವರೆಗೆ ಎಸಿಸಿ ಪುರುಷರ ಅಂಡರ್-19 ಏಷ್ಯಾ ಕಪ್ ಪಂದ್ಯಾವಳಿ ನಡೆಯಲಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿನೂ ಮಂಕಡ್ ಟ್ರೋಫಿ ಟೂರ್ನಿಯಲ್ಲಿ ತೋರಿದ ಅದ್ಭುತ ಪ್ರದರ್ಶನದ ಆಧಾರದ ಮೇಲೆ 17 ವರ್ಷದ ಅನ್ವಯ್ ದ್ರಾವಿಡ್ ಮತ್ತು 19 ವರ್ಷದ ಆರ್ಯವೀರ್ ಸೆಹ್ವಾಗ್ ಭಾರತೀಯ ತಂಡಕ್ಕೆ ಆಯ್ಕೆ ಆಗಿದ್ದಾರೆ.

Anvay Dravid Aaryavir Sehwag Selected for India Under 19 Asia Cup 2026 Know complete details

ಅನ್ವಯ್ ದ್ರಾವಿಡ್, ಆರ್ಯವೀರ್ ಆಕ್ರಮಣಕಾರಿ ಬ್ಯಾಟಿಂಗ್

ಕರ್ನಾಟಕವನ್ನು ಪ್ರತಿನಿಧಿಸುವ ವಿಕೆಟ್‌ ಕೀಪರ್-ಬ್ಯಾಟರ್ ಅನ್ವಯ್ ದ್ರಾವಿಡ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ವಿನೂ ಮಂಕಡ್ ಟ್ರೋಫಿಯಲ್ಲಿ ಗುಜರಾತ್ ವಿರುದ್ಧ 300ಕ್ಕೂ ಹೆಚ್ಚಿನ ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಅವರು ಕೇವಲ 100 ಎಸೆತಗಳಲ್ಲಿ 151 ರನ್‌ಗಳ ಸ್ಫೋಟಕ ಶತಕ ಬಾರಿಸಿದ್ದರು. ಇದಕ್ಕೂ ಮುನ್ನ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಯೂಥ್ ಏಕದಿನ ಸರಣಿಯಲ್ಲೂ 87 ರನ್ ಬಾರಿಸಿ ಗಮನ ಸೆಳೆದಿದ್ದರು. ಮತ್ತೊಂದೆಡೆ, ಡೆಲ್ಲಿ ತಂಡವನ್ನು ಪ್ರತಿನಿಧಿಸುವ ಆರ್ಯವೀರ್ ಸೆಹ್ವಾಗ್ ಚಂಡೀಗಢ ವಿರುದ್ಧದ ಪಂದ್ಯದಲ್ಲಿ 143 ಎಸೆತಗಳಲ್ಲಿ 173 ರನ್ ಸಿಡಿಸಿ ತಮ್ಮ ಅದ್ಭುತ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.

ಪಂದ್ಯಾವಳಿಯ ಸ್ವರೂಪ ಹಾಗೂ ಸರಣಿಯ ವೇಳಾಪಟ್ಟಿ

ಲಕ್ಷ್ಯ ರೈಚಂದಾನಿ ನಾಯಕತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದ್ದು, ಗ್ರೂಪ್ 'ಎ' ನಲ್ಲಿ ಭಾರತ, ಪಾಕಿಸ್ತಾನ, ನೇಪಾಳ ಮತ್ತು ಯುಎಇ ತಂಡಗಳು ಇರಲಿವೆ. ಗ್ರೂಪ್ 'ಬಿ' ನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಮಲೇಷ್ಯಾ ತಂಡಗಳಿವೆ. ಪ್ರತಿಯೊಂದು ಗುಂಪಿನಿಂದ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ.

ಭಾರತದ ಲೀಗ್ ಹಂತದ ಪಂದ್ಯಗಳ ವಿವರ

* ನವೆಂಬರ್ 6: ಭಾರತ vs ನೇಪಾಳ

* ನವೆಂಬರ್ 8: ಭಾರತ vs ಪಾಕಿಸ್ತಾನ

* ನವೆಂಬರ್ 10: ಭಾರತ vs ಯುಎಇ

ಅನ್ವಯ್ ದ್ರಾವಿಡ್‌ ಹಾಗೂ ಆರ್ಯಮನ್ ಸೇಹ್ವಾಗ್ ಈ ಯುವ ಆಟಗಾರರು ತಮ್ಮ ದೇಶೀಯ ಸರಣಿಯ ಭರ್ಜರಿ ಫಾರ್ಮ್ ಅನ್ನು ಏಷ್ಯಾ ಕಪ್‌ನಲ್ಲೂ ಮುಂದುವರೆಸುವ ನಿರೀಕ್ಷೆಯಿದೆ. ಇವರ ಆಟಕ್ಕಾಗಿಯೇ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+