ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಗೇಮ್ಸ್ ಗೀತೆ, ಮ್ಯಾಸ್ಕಟ್ ಇಂದು ಅನಾವರಣ; ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿ

By ಒನ್‌ಇಂಡಿಯಾ ಸ್ಪೋರ್ಟ್ಸ್ ಡೆಸ್ಕ್
|
Google Oneindia Kannada News

ಅಹಮದಾಬಾದ್, ಸೆಪ್ಟೆಂಬರ್ 4: 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಗುಜರಾತ್ ಸಜ್ಜಾಗಿದ್ದು, ಭಾನುವಾರ (ಸೆಪ್ಟೆಂಬರ್ 4) ಸಂಜೆ ನಡೆಯಲಿರುವ ಇಲ್ಲಿನ ಇಕೆಎ ಅರೆನಾ ಟ್ರಾನ್ಸ್‌ಸ್ಟೇಡಿಯಾದಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡಾ ಭಾಗವಹಿಸಲಿದ್ದಾರೆ. ಗುಜರಾತ್‌ನ ವಿವಿಧ ಕ್ಷೇತ್ರಗಳ ಗಣ್ಯರು ಸೇರಿ ಒಟ್ಟು 9000ಕ್ಕೂ ಹೆಚ್ಚು ಮಂದಿ ಈ ಆಕರ್ಷಕ ಸಮಾರಂಭಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ.

ಏಕದಿನ ಕ್ರಿಕೆಟ್‌: ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಪಂದ್ಯ ಗೆದ್ದು ಇತಿಹಾಸ ಬರೆದ ಜಿಂಬಾಬ್ವೆಏಕದಿನ ಕ್ರಿಕೆಟ್‌: ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಪಂದ್ಯ ಗೆದ್ದು ಇತಿಹಾಸ ಬರೆದ ಜಿಂಬಾಬ್ವೆ

ಈ ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ಅಧಿಕೃತ ಗೀತೆ ಮತ್ತು ಮ್ಯಾಸ್ಕಟ್(ಲಾಂಛನ)ವನ್ನು ಅನಾವರಣಗೊಳಿಸಲಾಗುತ್ತದೆ. ಇದರ ಜೊತೆಗೆ ಕ್ರೀಡಾಕೂಟದ ವೆಬ್‌ಸೈಟ್, ಮೊಬೈಲ್ ಆ್ಯಪ್‌ಗಳೂ ಬಿಡುಗಡೆಗೊಳ್ಳಲಿವೆ. ಇದರೊಂದಿಗೆ ದೇಶದ ಅತಿದೊಡ್ಡ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.

 Amit Shah To Launch 36th National Games Anthem and Mascot On Sunday

'ಕ್ರೀಡಾಕೂಟವನ್ನು ಆಯೋಜಿಸಲು ನಾವು ಉತ್ಸುಕಗೊಂಡಿದ್ದು, ಆತಿಥ್ಯ ಹಕ್ಕು ಸಿಕ್ಕಿರುವುದು ಹೆಮ್ಮೆ ನೀಡಿದೆ. ಭಾರತದ ಅಗ್ರ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು ನಮ್ಮ ರಾಜ್ಯಕ್ಕೆ ಆಗಮಿಸಲಿದ್ದಾರೆ ಎನ್ನುವ ವಿಚಾರ ಬಹಳ ಖುಷಿ ನೀಡುತ್ತಿದೆ. ಕ್ರೀಡಾಕೂಟಕ್ಕೆ ಬೇಕಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ' ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.

RSWS ಸೀಸನ್ 2: ಭಾರತದ ದಿಗ್ಗಜರ ತಂಡಕ್ಕೆ ಸಚಿನ್ ನಾಯಕRSWS ಸೀಸನ್ 2: ಭಾರತದ ದಿಗ್ಗಜರ ತಂಡಕ್ಕೆ ಸಚಿನ್ ನಾಯಕ

ಗುಜರಾತ್‌ನ ಕ್ರೀಡಾ ಸಚಿವ ಹರ್ಷ್ ಸಾಂಗ್ವಿ, ಅಹಮದಾಬಾದ್‌ನ ಮಹಾಪೌರ ಕಿರಿಟ್‌ಕುಮಾರ್ ಜೆ. ಪರ್ಮಾರ್, ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಯ ಹಂಗಾಮಿ ಅಧ್ಯಕ್ಷ ಅನಿಲ್ ಖನ್ನಾ, ಕೇಂದ್ರ ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಸುಜಾತ ಚತುರ್ವೇದಿ ಕಾರ‌್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

36ನೇ ರಾಷ್ಟ್ರೀಯ ಕ್ರೀಡಾಕೂಟವು 7 ವರ್ಷಗಳ ಬಳಿಕ ಆಯೋಜನೆಗೊಳ್ಳುತ್ತಿದ್ದು, ಸೆಪ್ಟೆಂಬರ್ 29ರಿಂದ ಅಕ್ಟೋಬರ್ 12ರ ವರೆಗೂ ನಡೆಯಲಿದೆ. ಗುಜರಾತ್‌ನ 6 ನಗರಗಳಾದ ಅಹಮದಾಬಾದ್, ಗಾಂಧಿನಗರ, ಸೂರತ್, ವಡೋದರ, ರಾಜ್‌ಕೋಟ್ ಮತ್ತು ಭಾವ್‌ನಗರಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸೈಕ್ಲಿಂಗ್ ಸ್ಪರ್ಧೆಗಳನ್ನು ನವದೆಹಲಿಯಲ್ಲಿ ನಡೆಸಲಾಗುತ್ತದೆ.

Amit Shah To Launch 36th National Games Anthem and Mascot On Sunday

28 ರಾಜ್ಯ ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 7000ಕ್ಕೂ ಹೆಚ್ಚು ಕ್ರೀಡಾಪಟುಗಳು, 36ಕ್ಕೂ ಹೆಚ್ಚು ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಇದೇ ಮೊದಲ ಬಾರಿಗೆ ಕ್ರೀಡಾಕೂಟದಲ್ಲಿ ದೇಸಿ ಕ್ರೀಡೆಗಳಾದ ಮಲ್ಲಕಂಭ ಮತ್ತು ಯೋಗಾಸನವನ್ನು ಸೇರ್ಪಡೆಗೊಳಿಸಲಾಗಿದೆ.

ಕಳೆದ ಆವೃತ್ತಿಯ ರಾಷ್ಟ್ರೀಯ ಕ್ರೀಡಾಕೂಟವು 2015ರಲ್ಲಿ ಕೇರಳದಲ್ಲಿ ನಡೆದಿತ್ತು.

ಅಮಿತ್ ಶಾ ಇತರ ಕಾರ್ಯಕ್ರಮಗಳು:

ಇದೇ ವೇಳೆ, ಅಮಿತ್ ಶಾ ರಾಷ್ಟ್ರೀಯ ಕ್ರೀಡಾಕೂಟದ ಲಾಂಛನ ಮತ್ತು ಅಧಿಕೃತ ಗೀತೆಯನ್ನು ಉದ್ಘಾಟನೆ ಮಾಡುವುದರ ಜೊತೆಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಜೊತೆ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಾಗೆಯೇ, ಅಮಿತ್ ಶಾ ಅಹ್ಮದಾಬಾದ್ ಪೌರ ಸಂಸ್ಥೆಯ ಸ್ಮಾರ್ಟ್ ಸ್ಕೂಲ್‌ಗಳಿಗೆ ಚಾಲನೆ ಕೊಡಲಿದ್ದಾರೆ. ಅದಾದ ಬಳಿಕ ೬ನೇ ಆಲ್ ಇಂಡಿಯಾ ಪ್ರಿಸ್ ಡ್ಯೂಟಿ ಮೀಟ್ ಅನ್ನು ಉದ್ಘಾಟಿಸುವ ಯೋಜನೆ ಇದೆ. ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಮತ್ತು ಆ ರಾಜ್ಯದ ಗೃಹ ಸಚಿವ ಹರ್ಷ್ ಸಾಂಘವಿ ಉಪಸ್ಥಿತರಿರಲಿದ್ದಾರೆ. ಪ್ರಿಸನ್ ಡ್ಯೂಟಿ ಸಮಾವೇಶ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಸೆಪ್ಟೆಂಬರ್ 4ರಿಂದ 6ರವರೆಗೂ ಇದು ನಡೆಯುತ್ತದೆ. ಬ್ಯೂರೋ ಆಫ್ ಪೊಲೀಸ್ ರೀಸರ್ಚ್ ಅಂಡ್ ಡೆವಲಪ್ಮೆಂಟ್ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸುತ್ತದೆ.

ಸಂಜೆ ನಡೆಯಲಿರುವ ಕರ್ಟನ್ ರೈಸರ್ ಕಾರ್ಯಕ್ರಮ ವೇಳೆ ಲಾಂಛನ ಮತ್ತು ಗೀತೆಯನ್ನು ಬಿಡುಗಡೆ ಮಾಡಲಾಗುತ್ತದೆ. ನ್ಯಾಷನಲ್ ಗೇಮ್ಸ್‌ನ ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್ ಕೂಡ ಅನಾವರಣಗೊಳ್ಳಲಿದೆ.

ಗುಜರಾತ್ ಸರಕಾರ ನಡೆಸಿದ 11ನೇ ಖೇಲ್ ಮಹಾಕುಂಭ ಕ್ರೀಡೋತ್ಸವ ಕೂಡ ಇದೇ ವೇಳೆ ಅಂತ್ಯಗೊಳ್ಳಲಿದೆ.

(ಒನ್ಇಂಡಿಯಾ ಸುದ್ದಿ)

English summary
Amit Shah is attending the curtain raiser programme for 36th Natonal Games. The Games' anthem and mascot will be launched during this program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X