RCB vs CSK: ಮತ್ತೊಮ್ಮೆ ಆರ್‌ಸಿಬಿ ತಂಡದ ಬಗ್ಗೆ ವ್ಯಂಗ್ಯವಾಡಿದ ಸಿಎಸ್‌ಕೆ ಮಾಜಿ ಆಟಗಾರರು!
ಮಾರ್ಚ್ 28ರಂದು ಶುಕ್ರವಾರ ನಡೆಯಲಿರುವ ಐಪಿಎಲ್ 2025ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಎದುರಿಸಲು ಸಜ್ಜಾಗಿದೆ. ಪಂದ್ಯಕ್ಕೆ ಮುನ್ನವೇ ಆರ್ ಸಿಬಿ ಸಿಎಸ್‌ಕೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದಾರೆ. ಆದರೆ ಸಿಎಸ್‌ಕೆ ಮಾಜಿ ಆಟಗಾರರು ಕೂಡ ಆರ್ ಸಿಬಿ ತಂಡದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ವ್ಯಂಗ್ಯವಾಡಿದ್ದಾರೆ.
ಸಿಎಸ್‌ಕೆ ಮಾಜಿ ಆಟಗಾರರಾದ ಅಂಬಾಟಿ ರಾಯುಡು ಮತ್ತು ಬದ್ರಿನಾಥ್ ಆರ್‌ಸಿಬಿಯ ಟ್ರೋಫಿ ರಹಿತ ಐಪಿಎಲ್ ಇತಿಹಾಸವನ್ನು ಅಣಕಿಸಿದ್ದಾರೆ. ಅಂಬಾಟಿ ರಾಯುಡು ಯೂಟ್ಯೂಬ್ ವೀಡಿಯೊದಲ್ಲಿ ಆರ್‌ಸಿಬಿಯ ಬಗ್ಗೆ ಮಾತನಾಡುವ ಸಂದರ್ಭದಲ್ಲಿ "ಈ ವರ್ಷವಾದರೂ ಆರ್ ಸಿಬಿ ಕಪ್ ಗೆಲ್ಲುತ್ತದೆಯೇ? ಎಂದು ರಾಯುಡುಗೆ ಬದ್ರಿನಾಥ್ ಪ್ರಶ್ನೆ ಮಾಡಿದ್ದಾರೆ. ಬಳಿಕ ಇಬ್ಬರೂ ವ್ಯಂಗ್ಯವಾಗಿ ನಗುತ್ತಿರುವುದನ್ನು ನೋಡಬಹುದು.

ಮಾತು ಮುಂದುವರೆಸಿದಾ ಅಂಬಾಟಿ ರಾಯುಡು ಈ ವರ್ಷ ಆರ್‌ಸಿಬಿ ಗೆಲ್ಲುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ ಮತ್ತು ಐಪಿಎಲ್‌ಗೆ ಆರ್‌ಸಿಬಿಯಂತಹ ತಂಡ ಬೇಕು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. "ಒಬ್ಬ ಅಭಿಮಾನಿಯಾಗಿ ಅವರು ಮಾಡಿದ ತಪ್ಪಿನಿಂದಾಗಿ ಸಾಕಷ್ಟು ಬಾರಿ ನಕ್ಕಿದ್ದೇನೆ. ಅವರು ಯಾವಾಗಲಾದರೂ ಕಪ್ ಗೆಲ್ಲಬೇಕು ಎಂದು ಬಯಸುತ್ತೇನೆ, ಆದರೆ ಈ ವರ್ಷ ಅಲ್ಲ. ಸಿಎಸ್‌ಕೆ ತಂಡ ಉತ್ತಮವಾಗಿ ಆಡಬೇಕು, ಈ ಬಾರಿ ಸಿಎಸ್‌ಕೆ ತಂಡ ಪ್ರಶಸ್ತಿ ಗೆಲ್ಲಬೇಕು ಎಂದು ಬಯಸುತ್ತೇವೆ, ಆದರೂ ನಮಗೆ ಐಪಿಎಲ್‌ನಲ್ಲಿ ಆರ್ ಸಿಬಿಯಂತಹ ತಂಡ ಬೇಕು" ಎಂದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು 2016ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಫೈನಲ್ ತಲುಪಿತ್ತು. ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದು, 2023ರಲ್ಲಿ ಕೊನೆಯ ಬಾರಿ ಚಾಂಪಿಯನ್ ಆಗಿದ್ದರು. ಎಸ್ ಧೋನಿ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಸಿಎಸ್‌ಕೆ ಗೆಲುವು ಸಾಧಿಸಿತ್ತು.
2024ರಲ್ಲಿ ಆರ್ ಸಿಬಿ ಮತ್ತು ಸಿಎಸ್‌ಕೆ ನಡುವೆ ಪ್ಲೇ ಆಫ್ ಸ್ಥಾನಕ್ಕಾಗಿ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಹೋರಾಟ ನಡೆದಿತ್ತು. ಈ ಪಂದ್ಯದಲ್ಲಿ ಆರ್ ಸಿಬಿ ಸಿಎಸ್‌ಕೆ ವಿರುದ್ಧ ಗೆಲುವು ಸಾಧಿಸಿ ಸಿಎಸ್‌ಕೆ ತಂಡವನ್ನು ಲೀಗ್‌ನಿಂದ ಹೊರದಬ್ಬಿ ಆರ್ ಸಿಬಿ ಪ್ಲೇಆಫ್ ಪ್ರವೇಶಿಸಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತಿತು.
2024ರಲ್ಲಿ ಬೆಂಗಳೂರಿನಲ್ಲಿ ಸಿಎಸ್‌ಕೆ ಸೋತಾಗ ಕಾಮೆಂಟರಿ ಮಾಡುತ್ತಿದ್ದ ಅಂಬಟಿ ರಾಯುಡು ಕಣ್ಣೀರು ಹಾಕಿದ್ದರು. ಅಂದಿನ ಹತಾಶೆ ಅವರನ್ನುಇಂದಿಗೂ ಕಾಡುತ್ತಿರಬಹುದು. ಸಮಯ ಸಿಕ್ಕಾಗೆಲ್ಲಾ ಅವರು ಆರ್ ಸಿಬಿ ಕಾಲೆಳೆಯುತ್ತಲೇ ಬಂದಿದ್ದಾರೆ.












Click it and Unblock the Notifications