RCB: ಆರ್‌ಸಿಬಿ ಈ ನಾಲ್ವರು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಿ; ಎಬಿಡಿ ಕೊಟ್ಟ ಸಲಹೆ ಏನು?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿಗಾಗಿ ಎಲ್ಲಾ ಫ್ರಾಂಚೈಸಿಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ನವೆಂಬರ್ 24-25 ರಂದು ಜೆಡ್ಡಾದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಎಲ್ಲಾ ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಕೇವಲ ಮೂರು ಆಟಗಾರರನ್ನು ಮಾತ್ರ ಉಳಿಸಿಕೊಂಡಿರುವ ಆರ್ ಸಿಬಿ ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡವನ್ನು ಕಟ್ಟಲು ಲೆಕ್ಕಾಚಾರ ಹಾಕಿಕೊಂಡಿದೆ.
ಆರ್ ಸಿಬಿ ಹಾಗೂ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಆರ್ ಸಿಬಿ ತಂಡವು ಮೆಗಾ ಹರಾಜಿನಲ್ಲಿ ಈ ನಾಲ್ವರು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಈವರೆಗೂ ಒಮ್ಮೆಯೂ ಕಪ್ ಗೆಲ್ಲದ ಆರ್ ಸಿಬಿಗೆ ಬೌಲಿಂಗ್ ದೊಡ್ಡ ಸವಾಲಾಗಿದ್ದು, ನಾಲ್ವರು ಬೌಲರ್ ಗಳ ಹೆಸರನ್ನು ಎಬಿಡಿ ಶಿಫಾರಸ್ಸು ಮಾಡಿದ್ದಾರೆ.

ಈ ನಾಲ್ವರು ತಂಡದಲ್ಲಿರಲಿ
ಆರ್ ಸಿಬಿ ತಂಡಕ್ಕಾಗಿ ಇಬ್ಬರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್ ಗಳ ಹೆಸರನ್ನು ಎಬಿ ಡಿವಿಲಿಯರ್ಸ್ ಶಿಫಾರಸ್ಸು ಮಾಡಿದ್ದಾರೆ. ಕಗಿಸೊ ರಬಾಡ, ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಹಾಲ್‌ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಸಲಹೆ ಕೊಟ್ಟಿದ್ದಾರೆ.
ಆರ್ ಸಿಬಿ ತಂಡವು ಈ ಬಾರಿ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲು ಕೆಲಸ ಮಾಡಬೇಕಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೌಲಿಂಗ್ ಮಾಡುವುದು ಯಾವಾಗಲೂ ಕಷ್ಟದ ಕೆಲಸ, ಇದಕ್ಕೆ ಅನುಭವಿ ಆಟಗಾರರ ಅಗತ್ಯವಿದೆ. ಅದಕ್ಕಾಗಿ ಮೂವರು ಭಾರತೀಯ ಬೌಲರ್ ಜೊತೆ ದಕ್ಷಿಣ ಆಫ್ರಿಕಾದ ಅನುಭವಿ ವೇಗಿ ಕಗಿಸೊ ರಬಾಡರನ್ನು ಎಬಿಡಿ ಹೆಸರಿಸಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಜಿ ಆಟಗಾರ, ಮಧ್ಯಮ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅಪಾರ ಅನುಭವ ಹೊಂದಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಪಿಚ್ ಭುವನೇಶ್ವರ್ ಕುಮಾರ್ ಅವರಂತಹ ಬೌಲರ್ ಗಳಿಗೆ ಚನ್ನಾಗಿ ಹೊಂದಿಕೆಯಾಗುತ್ತದೆ. ಅವರು ತಂಡದಲ್ಲಿದ್ದರೆ ಆರ್ ಸಿಬಿ ಬೌಲಿಂಗ್‌ಗೆ ಬಲ ತುಂಬುತ್ತಾರೆ ಎಂದು ಎಬಿಡಿ ಹೇಳಿದ್ದಾರೆ.
ಆರ್ ಸಿಬಿ ತಂಡದ ಮಾಜಿ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ವಾಪಸ್ ತಂಡಕ್ಕೆ ಬರಬೇಕು ಎನ್ನುವುದು ಎಬಿಡಿ ಅವರ ಇಚ್ಚೆಯಾಗಿದೆ. ಕಳೆದ ಮೆಗಾಹರಾಜಿನಲ್ಲಿ ಅವರು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು, ಆರ್ ಸಿಬಿ ಅವರನ್ನು ಕೈಬಿಟ್ಟು ಬಳಿಕ ಅದಕ್ಕೆ ತಕ್ಕ ಬೆಲೆ ತೆತ್ತಿದೆ. ಚಹಾಲ್ ಕೂಡ ಚಿನ್ನಸ್ವಾಮಿ ಅಂಗಳದಲ್ಲಿ ಬೌಲಿಂಗ್ ಮಾಡಿರುವ ಅನುಭವ ಹೊಂದಿದ್ದು ತಂಡಕ್ಕೆ ಮರಳಿದರೆ ಬೌಲಿಂಗ್ ಬಲಿಷ್ಠವಾಗಲಿದೆ ಎಂದು ಹೇಳಿದ್ದಾರೆ. ಉಳಿದಂತೆ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಕಬಿಸೋ ರಬಾಡ ಇರಬೇಕು ಎಂದಿದ್ದಾರೆ.












Click it and Unblock the Notifications