Get Updates
Get notified of breaking news, exclusive insights, and must-see stories!

Athlete DP Manu: ಜಾವೆಲಿನ್ ಪಟು ಕನ್ನಡಿಗನಿಗೆ ಸರ್ಕಾರದ ನೆರವು ಅಗತ್ಯ: ಎಎಪಿ

ಬೆಂಗಳೂರು, ಆಗಸ್ಟ್ 30: ಹಂಗೇರಿಯ ಬುದಾಪೆಸ್ಟ್‌ನಲ್ಲಿ ನಡೆದ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ ಕ್ರೀಡಾಕೂಟದ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ನೀರಜ್ ಚೋಪ್ರಾ ನೂತನ ಇತಿಹಾಸ ನಿರ್ಮಿಸಿದರು. ಅವರೊಂದಿಗೆ ಕನ್ನಡಿಗ ಡಿ.ಪಿ ಮನು ಕೂಡ ಗಮನ ಸೆಳೆದಿದ್ದು ಅವರಿಗೆ ರಾಜ್ಯ ಸರ್ಕಾರ ನೆರವು ನೀಡಬೇಕು ಎಂದು ಆಮ್ ಆದ್ಮಿ ಪಕ್ಷವು ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಆಗ್ರಹಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಆಮ್‌ ಆದ್ಮಿ ಪಕ್ಷದ (AAP) ಉಪಾಧ್ಯಕ್ಷ ಮೋಹನ್ ದಾಸರಿ ಅವರು, ನೀರಜ್ ಚೋಪ್ರಾ ಅವರ ಐತಿಹಾಸಿಕ ಸಾಧನೆಗೆ ಇಡೀ ಭಾರತೀಯರು ಸಲಾಮ್ ಹೊಡೆದಿದೆ. ಈ ಮಧ್ಯೆ ಕರ್ನಾಟಕದ ಹೆಮ್ಮೆಯ ಕನ್ನಡಿಗ ಡಿ.ಪಿ ಮನು ಕೂಡ ಗಮನ ಸೆಳೆದಿದ್ದಾರೆ. ಜಾವೆಲಿನ್ ಥ್ರೋ ಫೈನಲ್‌ನಲ್ಲಿ 84.14 ಮೀ. ದೂರಕ್ಕೆ ಭರ್ಜಿ ಎಸೆದು 6ನೇ ಸ್ಥಾನ ಪಡೆದರು. ಅವರಿಗೆ ಅಗತ್ಯದ ಬೆಂಬಲ ಸಿಕ್ಕರೆ ಮುಂದೊಂದು ದಿನ ಕನ್ನಡಿಗ ಭಾರತಕ್ಕೆ ಐತಿಹಾಸಿಕ ಪದಕ ಗೆದ್ದುಕೊಡುತ್ತಾರೆ. ಸರ್ಕಾರ ನೆರವು ಒದಗಿಸಬೇಕಿದೆ ಎಂದು ಮನವಿ ಮಾಡಿದರು.

AAP Mohan Dasari Seeks State Govt Support For Javelin Thrower Kannadaiga DP Manu

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ಸ್ಪರ್ಧೆಯಲ್ಲಿ ಫೈನಲ್ ತಲುಪಿ ಉತ್ತಮ ಪ್ರದರ್ಶನ ನೀಡಿ ರಾಜ್ಯಕ್ಕೆ ಡಿ.ಪಿ. ಮನು ಕೀರ್ತಿ ತಂದಿದ್ದಾರೆ. ಇವರು ಹಾಸನ ಜಿಲ್ಲೆ, ಬೇಲೂರು ತಾಲೂಕು, ಕುಪ್ಪಗೋಡು ಗ್ರಾಮದ ಕನ್ನಡಿಗರು. ಅವರ ಸಾಧನೆಗೆ ಪಕ್ಷದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕನ್ನಡಿಗನ ಗೆಲುವಿಗೆ ಸಹಕಾರ ಕೊಡಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮುಂದೆ ಪದಕ ಗೆಲ್ಲಲು ನಿಮ್ಮಿಂದ ಡಿಪಿ ಮನುರವರಿಗೆ ಬೇಕಾದ ಎಲ್ಲಾ ತರಹದ ಸಹಕಾರ ನೀಡಿ ಎಂದು ಅವರು ಒತ್ತಾಯಿಸಿದರು.

AAP Mohan Dasari Seeks State Govt Support For Javelin Thrower Kannadaiga DP Manu

ಟ್ವೀಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ಅವರಿಗೆ ಟ್ಯಾಗ್‌ ಮಾಡಲಾಗಿದೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾರಿಗೆ, ನೀವೆಲ್ಲರೂ ಅಭಿನಂದನೆ ಸಲ್ಲಿಸಿರುತ್ತೀರುವುದು ಒಳ್ಳೆಯ ವಿಚಾರ.

ಅಥ್ಲೆಟ್ ನೀರಜ್ ಚೋಪ್ರಾ ಅವರ ಜೊತೆಗೆ ನಮ್ಮ ರಾಜ್ಯದ ಹಾಸನದ ಹುಡುಗ ಡಿ.ಪಿ ಮನು ರವರೂ ಭಾಗವಹಿಸಿದ್ದರು ಎಂಬುದು ನಿಮಗೆ ಗೊತ್ತಿದೆಯೆ..? ಎಂದು ಪ್ರಶ್ನಿ ಸುವ ಮೂಲಕ ಮೋಹನ್ ದಾಸರಿ ಅವರು, ಕನ್ನಡಿಗನ ಸಾಧನೆಯನ್ನು , ರಾಜ್ಯದ ಹೆಮ್ಮೆಯ ಕ್ರೀಡಾಪಟು ಅನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.

ಸರ್ಕಾರ ಪ್ರೋತ್ಸಾಹದ ಮಾತು ಆಡಲಿಲ್ಲ

ಮನು ಅವರು ಕ್ರೀಡೆಯಲ್ಲಿ ಭಾಗವಹಿಸುವಾಗ, ಅಂತಿಮ ಹಂತಕ್ಕೆ ಫೈನಲ್ ತಲುಪಲು ಅರ್ಹತೆ ಪಡೆದಾಗ, ಅವರ ಗೆಲುವಿನ ಕುರಿತು ಶುಭ ಕೋರಿರಲಿಲ್ಲ. ಇನ್ನೂ ಫೈನಲ್ ನಲ್ಲಿ ಪ್ರಪಂಚಕ್ಕೆ 6ನೇ ಸ್ಥಾನ ತಂದು ಕೊಟ್ಟಾಗಲೂ ನೀವು ಯಾರೂ ಮನುರವರ ಪರವಾಗಿ ಯಾವುದೇ ರೀತಿಯ ಪ್ರೋತ್ಸಾಹದ ಮಾತುಗಳನ್ನು ಆಡಲಿಲ್ಲ, ಅಭಿನಂದಿಸಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಡಿಪಿ ಮನುರವರು ಪ್ರಪಂಚ ಮಟ್ಟದಲ್ಲಿ, ಒಂದು ಕಡೆ ದೇಶವನ್ನು ಪ್ರತಿನಿಧಿಸುತ್ತಿದ್ದರೆ, ಅದೇ ಸಮಯದಲ್ಲಿ 7 ಕೋಟಿ ಕನ್ನಡಿಗರನ್ನೂ ಪ್ರತಿನಿಧಿಸುತ್ತಿದ್ದಾರೆ. ನೀವುಗಳು ಅಷ್ಟೊಂದು ಉನ್ನತ ಮಟ್ಟದಲ್ಲಿರುವವರು ಪ್ರೊತ್ಸಾಹ ನೀಡದಿದ್ದರೆ ಮತ್ತಾರು ನೀಡುತ್ತಾರೆ?, ಸರ್ಕಾರಕ್ಕೆ ಕನ್ನಡಿಗನ ಸಾಧನೆಯನ್ನು ತಿಳಿಸಿದ್ದಾರೆ.

ಕನ್ನಡ, ಕನ್ನಡಿಗ, ಕರ್ನಾಟಕ ಅಂತ ಚುನಾವಣೆಗಾಗಿ ಮಾತ್ರ ಮಾತನಾಡುವುದಲ್ಲ ಕನ್ನಡತನವೆಂದರೆ, ಅದನ್ನು ಪ್ರತೀ ವಿಷಯದಲ್ಲೂ ಮಾಡಿ ತೋರಿಸಬೇಕು. ಇನ್ನೂ ಸಮಯ ಮೀರಿಲ್ಲ, ಡಿಪಿ ಮನುರವರನ್ನು ಪ್ರೊತ್ಸಾಹಿಸಿ., ಮುಂದಿನ ತರಬೇತಿಗೆ ಎಲ್ಲಾ ರೀತಿಯ ಸೌಲಭ್ಯ ಸಹಕಾರ ನೀಡಿ, ಮುಂದೊಂದು ದಿನ ಭಾರತಕ್ಕೆ ಪದಕ ಗೆದ್ದು ರಾಜ್ಯಕ್ಕೆ ಮತ್ತಷ್ಟು ಹೆಮ್ಮೆ ತರಲು ಎಂದು ಅವರು ಕೋರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+