IPL 2022: ಆರ್‌ಸಿಬಿ ಬಗ್ಗೆ ಕೊನೆಗೂ ಮೌನ ಮುರಿದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್
ಬೆಂಗಳೂರು, ಮಾರ್ಚ್ 29: ಕಳೆದ 14 ವರ್ಷದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಐಪಿಎಲ್ ಕಪ್ ಗೆಲ್ಲದಿದ್ದರೂ, ಕರ್ನಾಟಕ ಅಭಿಮಾನಿಗಳು ಮಾತ್ರ ತಂಡವನ್ನು ಬಿಟ್ಟುಕೊಟ್ಟಿಲ್ಲ.
ಈ ವರ್ಷ ಇಲ್ಲ ಮುಂದಿನ ವರ್ಷ ಕಪ್ ಗೆಲ್ಲುತ್ತಾರೆ ಎನ್ನುವ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ. ಆರ್‌ಸಿಬಿ ಅನ್ನುವುದು ಕೇವಲ ತಂಡವಲ್ಲ, ಅದೊಂದು ಎಮೋಷನ್ ಎನ್ನುವುದು ಬೆಂಗಳೂರಿಗರ ನಂಬಿಕೆ. ಈ ಬಾರಿ ಹೊಸ ಹುರುಪು, ಹೊಸ ನಾಯಕನೊಂದಿಗೆ ಆರ್‌ಸಿಬಿ ಕಣಕ್ಕಿಳಿದಿದೆ.
ಪ್ರತಿ ಐಪಿಎಲ್ ಸೀಸನ್‌ಗಳಂತೆ ಮೊದಲ ಪಂದ್ಯವನ್ನು ಆರ್‌ಸಿಬಿ ಪ್ರತಿ ಬಾರಿಯಂತೆ ದೇವರಿಗೆ ಅರ್ಪಿಸಿದೆ. ಘಟಾನುಘಟಿ ಆಟಗಾರರು ಈಗ ಆರ್‌ಸಿಬಿ ಪರ ಆಡುತ್ತಿಲ್ಲ. ಅವರಲ್ಲಿ ಬೆಂಗಳೂರನ್ನು ಎರಡನೇ ತವರು ಎಂದುಕೊಂಡಿದ್ದ ಯಜುವೇಂದ್ರ ಚಹಲ್ ಕೂಡ ಒಬ್ಬರು.

ಯಜುವೇಂದ್ರ ಚಹಲ್ ಅವರು ಕಳೆದ ಹಲವು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡಿದ್ದರು. ಇದೀಗ ಚಹಲ್ ಈ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿದಿದ್ದಾರೆ. ಯಾರೂ ಊಹಿಸದ ರೀತಿಯಲ್ಲಿ ಆರ್‌ಸಿಬಿ ತಂಡ ಯಜುವೇಂದ್ರ ಚಹಲ್‌ರನ್ನು ತಂಡದಿಂದ ಕೈಬಿಡಲಾಗಿತ್ತು. ಇದೀಗ ಯಜುವೇಂದ್ರ ಚಹಲ್ ಕೊನೆಗೂ ಮೌನ ಮುರಿದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕುರಿತು ಮಾತನಾಡಿದ್ದಾರೆ.
ಆರ್‌ಸಿಬಿ ಬಗ್ಗೆ ಚಹಲ್ ಹೇಳಿದ್ದೇನು?
'ಈ ಬಾರಿ ಆರ್‌ಸಿಬಿ ನನ್ನನ್ನು ಕೈಬಿಡುವ ಮುನ್ನ ಒಮ್ಮೆ ಕೇಳಬೇಕಿತ್ತು. ಆರ್ಸಿಬಿಯಲ್ಲಿ ಇರಲು ನೀವು ಇಷ್ಟ ಪಡುತ್ತೀರಾ? ಎಂದು ಕೇಳಬೇಕಿತ್ತು. ನಾವು ನಿಮ್ಮನ್ನು ಹರಾಜಿನಲ್ಲಿ ಮತ್ತೆ ಖರೀದಿ ಮಾಡುತ್ತೇವೆ ಎಂದಿದ್ದರು. ಆದರೆ, ಮಾಡಲಿಲ್ಲ. ನನಗೆ ಹಣದ ಮೇಲೆ ಆಸೆ ಇರಲಿಲ್ಲ. ನನಗೆ ಆರ್‌ಸಿಬಿ ತಾಯಿ ಇದ್ದಂತೆ. ಇಷ್ಟು ವರ್ಷ ಆ ತಂಡದಲ್ಲಿ ಆಡಿದ್ದೆ. ನನ್ನ ಬೆಂಗಳೂರು ಅಭಿಮಾನಿಗಳಿಗೆ ಸದಾ ಚಿರಋಣಿಯಾಗಿರುತ್ತೇನೆ. ಏನೇ ಆದರೂ, ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ..'ಎಂದು ಯಜುವೇಂದ್ರ ಚಹಲ್ ಹೇಳಿದ್ದಾರೆ. ಈ ಮಾತುಗಳನ್ನು ಕೇಳಿ ಆರ್‌ಸಿಬಿ ಅಭಿಮಾನಿಗಳು ಚಹಲ್‌ರನ್ನು ನೀವು ರಿಟೈನ್ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ಮೊದಲ ಪಂದ್ಯದಲ್ಲೇ ಆರ್‌ಸಿಬಿ ಕೆಟ್ಟ ದಾಖಲೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ವರ್ಷವನ್ನು ಕೆಟ್ಟ ದಾಖಲೆಯೊಂದಿಗೆ ಪ್ರಾರಂಭಿಸಿದೆ. ಹೌದು, ಪಂಜಾಬ್ ನಡುವಿನ ಮೊದಲ ಪಂದ್ಯದಲ್ಲಿ ದೊಡ್ಡ ಮೊತ್ತ ಪ್ರೇರೇಪಿಸಿದರೂ ಉತ್ತಮ ಬೌಲಿಂಗ್ ಮಾಡದ ಹಿನ್ನಲೆ ಆರ್‌ಸಿಬಿ ಸೋಲನ್ನಪ್ಪಿತು. ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ತಂಡದಲ್ಲಿಲ್ಲದಿರುವುದು ದೊಡ್ಡ ಹೊಡೆತ ನೀಡಿದೆ.












Click it and Unblock the Notifications