ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

70ನೇ ಅಖಿಲ ಭಾರತ ಪೊಲೀಸ್ ಹಾಕಿ ಚಾಂಪಿಯನ್‌ಶಿಪ್ 2021: ಹರಿಯಾಣವನ್ನು ಮಣಿಸಿದ ಕರ್ನಾಟಕ

|
Google Oneindia Kannada News

ಬೆಂಗಳೂರು, ಡಿ. 06: ಬೆಂಗಳೂರಿನಲ್ಲಿ ನಡೆಯುತ್ತಿರುವ 70ನೇ ಅಖಿಲ ಭಾರತ ಪೊಲೀಸ್ ಹಾಕಿ ಚಾಂಪಿಯನ್ ಶಿಪ್ 2021 ರಲ್ಲಿ ಕರ್ನಾಟಕ ಪೊಲೀಸ್ ತಂಡ ಮೊದಲ ಜಯ ದಾಖಲಿಸಿದೆ. ಎದುರಾಳಿ ಹರಿಯಾಣವನ್ನು 3-5 ಗೋಲ್ ಅಂತರದಿಂದ ಸೋಲಿಸಿ ಜಯವನ್ನು ಮುಡಿಗೇರಿಸಿಕೊಂಡಿದೆ.

ಬೆಂಗಳೂರಿನ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಪೊಲೀಸ್ ತಂಡ ಮೊದಲ ಪಂದ್ಯದಲ್ಲಿ ಎದುರಾಳಿ ಹರ್ಯಾಣವನ್ನು ಮಣಿಸಿದೆ. ಎನ್. ಬಿ. ಪ್ರದೀಪ್ ನೇತೃತ್ವದ ತಂಡ ಮೊದಲ ಪಂದ್ಯದಲ್ಲಿ ಹರಿಯಾಣವನ್ನು ಮಣಿಸಿದೆ.

ಆಟ ಆರಂಭವಾಗುತ್ತಿದ್ದಂತೆ ಕರ್ನಾಟಕ ಪೊಲೀಸ್ ತಂಡ ಹತ್ತನೇ ನಿಮಿಷಕ್ಕೆ ಗೋಲ್ ಬಾರಿಸುವ ಮೂಲಕ ಮೊದಲ ನಬರ್ ಗಳಿಸಿತು. ಸುಮಾರು 29 ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ಹರ್ಯಾಣ ತಂಡದ ಕ್ಯಾಪ್ಟನ್ ನಿರ್ಮಲ್ ಕೂಡ ಅಷ್ಟೇ ಗೋಲ್ ಬಾರಿಸುವ ಮೂಲಕ ಎರಡೂ ತಂಡ ಸಮ ಅಂಕಗಳನ್ನು ದಾಖಲಿಸಿದ್ದವು. ಮೂರನೇ ಕ್ವಾಟರ್‌ನಲ್ಲಿ ರಕ್ಷಣಾತ್ಮಕ ಪ್ರದರ್ಶನ ತೋರಿದ ಕರ್ನಾಟಕ ಪೊಲೀಸ್ ತಂಡ 36, 38 ನೇ ನಿಮಿಷದಲ್ಲಿ ಗೋಲ್ ಬಾರಿಸುವ ಮೂಲಕ ಕರ್ನಾಟಕ ಪೊಲೀಸ್ ತಂಡ ಒಂದು ಅಂಕ ಮೇಲುಗೈ ದಾಖಲಿಸಿತ್ತು. ಅದಾದ ಬಳಿಕ ತೀವ್ರ ಪೈಪೋಟಿ ನೀಡಿದ ಹರಿಯಾಣ ಪೊಲೀಸ್ ತಂಡದ ವಿರುದ್ಧ 57 ನೇ ನಿಮಿಷದಲ್ಲಿ ಮತ್ತೊಂದು ಗೋಲ್ ಬಾರಿಸುವ ಮೂಲಕ ಕರ್ನಾಟಕ ಪೊಲೀಸ್ ತಂಡ ಎರಡು ಅಂಕ ಪಡೆಯಿತು. ಕರ್ನಾಟಕ ಪೊಲೀಸ್ ತಂಡದ ಆಟಗಾರ ಪರಮೇಶ್ ನಾಲ್ಕನೇ ಗೋಲ್ ಹೊಡೆಯುವ ಮೂಲಕ ತಂಡಕ್ಕೆ ಮತ್ತಷ್ಟು ಭದ್ರ ಬುನಾದಿ ಹಾಕಿದ್ದರು. ಹ್ಯಾಟ್ರಿಕ್ ಐದನೇ ಗೋಲ್ ಬಾರಿಸುವ ಮೂಲಕ ಕರ್ನಾಟಕ ಪೊಲೀಸ್ ತಂಡದ ನಾಯಕ ಪ್ರದೀಪ್ ಮೊದಲ ಜಯವನ್ನು ತನ್ನದಾಗಿಸಿಕೊಂಡರು.

70th All India Police Hockey Championship 2021: Hosts Karnataka Police get off to a winning start

ಇದಕ್ಕೂ ಮೊದಲು ನಡೆದ ಸಿಆರ್‌ಪಿಎಫ್ ದೆಹಲಿ ಮತ್ತು ಒಡಿಶಾ ಪೊಲೀಸ್ ತಂಡದ ನಡುವಿನ ಪಂದ್ಯದಲ್ಲಿ 7-1 ಅಂತರದಲ್ಲಿ ಜಯವನ್ನು ತನ್ನದಾಗಿಸಿಕೊಂಡಿದೆ. ದೆಹಲಿ ತಂಡದ ಭಾರತಿ ಠಾಕೂರ್ ಹನ್ನೆರಡನೇ ನಿಮಿಷದಲ್ಲಿ ಮೊದಲ ಗೋಲ್ ಬಾರಿಸಿದ್ದರು. 39 ನೇ ನಿಮಿಷದ ವೇಳೆಗೆ 3-0 ಅಂತರವನ್ನು ದೆಹಲಿ ಸಿಆರ್‌ಪಿಎಫ್ ಮಹಿಳಾ ತಂಡ ಕಾಯ್ದುಕೊಂಡಿತ್ತು. ಅಂತಿಮವಾಗಿ ದೆಹಲಿ ಸಿಆರ್‌ಪಿಎಫ್ ಮಹಿಳಾ ತಂಡ ಏಳು ಅಂಕ ಗಳಿಸಿತ್ತು. ಎದುರಾಳಿ ಒಡಿಶಾ ಪೊಲೀಸ್ ತಂಡ ಒಂದು ಅಂಕ ಗಳಿಸಲು ಅವಕಾಶ ಕೊಡದೇ ಪ್ರಬಲ ಪ್ರದರ್ಶನ ಕೊಟ್ಟಿತು.

ಒಡಿಶಾ ಪೊಲೀಸ್‌ (ಪುರುಷ) ತಂಡ ಹಾಗೂ ಶಸ್ತಾಸ್ತ್ರ ಸೀಮಾ ಬಲ (ಎಸ್ಎಸ್‌ಡಿ) ನಡುವಿನ ಪಂದ್ಯ 4-4 ಸಮ ಅಂಕ ಗಳಿಸುವ ಮೂಲಕ ಪಂದ್ಯ ಡ್ರಾ ನಲ್ಲಿ ಅಂತಯವಾಗಿದೆ. ಪಂದ್ಯ ಆರಂಭವಾದ 9 ನೇ ನಿಮಿಷಕ್ಕೆ ಗೋಲ್ ಬಾರಿಸಿದ ಒಡಿಶಾ ಪೊಲೀಸ್ ತಂಡ ಹದಿನೈದನೇ ನಿಮಿಷದ ವೇಳೆಗೆ 2-1 ಅಂತರ ಕಾಪಾಡಿಕೊಂಡಿತ್ತು. ಜಯದತ್ತ ಸಾಗಿದ್ದ ಒಡಿಶಾ ತಂಡದ ವಿರುದ್ಧ ಸೆಣಸಾಟ ವಾಡಿದ ಎಸ್ಎಸ್ ಡಿ ತಂಡ ಅಂತಿಮವಾಗಿ ನಾಲ್ಕು ಅಂಕ ಗಳಿಸುವ ಮೂಲಕ ಸಮ ಬಲ ಸಾಧಿಸಿತು. ಪಂದ್ಯ ಡ್ರಾ ನೊಂದಿಗೆ ಅಂತ್ಯವಾಯಿತು.

70th All India Police Hockey Championship 2021: Hosts Karnataka Police get off to a winning start

ಬಿಎಸ್ಎಫ್ ಜಲಂಧರ್ ತಂಡ ಎದುರಾಳಿ ಉತ್ತರ ಖಾಂಡ ಪೊಲಿಸ್ ತಂಡವನ್ನು 5-0 ಅಂತರದಿಂದ ಜಯ ಗಳಿಸಿದೆ. ಜಾರ್ಖಂಡ್ ಮತ್ತು ಪುದುಚೆರಿ ಪೊಲೀಸರ ನಡುವಿನ ಪಂದ್ಯದಲ್ಲಿ ಜಾರ್ಖಂಡ್ ಪೊಲೀಸ್ ತಂಡ 9 ಅಂಕ ಪಡೆದು ದಿಗ್ವಜಯ ಸಾಧಿಸಿದೆ. ಎದುರಾಳಿ ಪುದುಚೆರಿ ಪೊಲೀಸ್ ತಂಡ ಕೇವಲ ಒಂದು ಗೋಲ್‌ಗೆ ತೃಪ್ತಿ ಪಡಬೇಕಾಯಿತು. ಬೆಂಗಳೂರಿನಲ್ಲಿ ನಡೆಯತ್ತಿರುವ 70ನೇ ಅಖಿಲ ಭಾರತ ಪೊಲೀಸ್ ಹಾಕಿ ಚಾಂಪಿಯನ್‌ಶಿಪ್ 2021 ಪಂದ್ಯದಲ್ಲಿ ಟ್ರೋಫಿಯನ್ನು ಯಾರು ಮುಡಿಗೇರಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Recommended Video

ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದ ನಂತರ ವೈರಲ್ ಆದ ವಿಶೇಷ ಫೋಟೋ | Oneindia Kannada

English summary
70th All India Police Hockey Championship 2021 : Hosts Karnataka Police got off to a rollicking start here at the ongoing 70th All India Police Hockey Championship 2021 on Sunday know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X