ಮಲಗಿದ್ದ ಮಹಿಳೆ ಕೆನ್ನೆ ಕಚ್ಚಿ ಪರಾರಿಯಾದವ ಸಿಕ್ಕಿಬಿದ್ದ

By: ಬೆಂಗಳೂರು ಪ್ರತಿನಿಧಿ
Subscribe to Oneindia Kannada

ಬೆಂಗಳೂರು/ಶಿರಸಿ, ಆಗಸ್ಟ್ 30: ಮನೆಯಲ್ಲಿ ಮಲಗಿದ್ದ ಮಹಿಳೆ ಕೆನ್ನೆಯನ್ನು ರಕ್ತ ಬರುವಂತೆ ಕಚ್ಚಿ ಪರಾರಿಯಾಗಿದ್ದ ಯುವಕನನ್ನು ಎಚ್ಎ ಎಲ್ ಪೊಲೀಸರು ಬಂಧಿಸಿದ್ದಾರೆ.

ಕೆನ್ನೆ ಕಚ್ಚಿದ ಯುವಕನನ್ನು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಆತನ ಹುಟ್ಟೂರಿನಿಂದ ಬಂಧಿಸಿ ಕರೆ ತರಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಡಾರ್ಜಿಲಿಂಗ್ ಮೂಲದ ಮಹಿಳೆ ಮನೆಯಲ್ಲಿದ್ದ ವೇಳೆ ಆಗಮಿಸಿದ ಆರೋಪಿ ಸುನೀಲ್ ಅಲಿಯಾಸ್ ಪುನೀತ್ (24) ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಆಕೆ ಪ್ರತಿರೋಧ ತೋರಿದಾಗ ಮಹಿಳೆಯ ಎಡ ಕೆನ್ನೆಯನ್ನು ರಕ್ತ ಬರುವಂತೆ ಕಚ್ಚಿ ಪರಾರಿಯಾಗಿದ್ದ.[ಬೆಂಗಳೂರು: ಮಲಗಿದ್ದ ಮಹಿಳೆಯ ಕೆನ್ನೆ ಕಚ್ಚಿ ಯುವಕ ಪರಾರಿ]

Women harassment: Bengaluru police arrested Sirsi youth

ಪ್ರಕರಣ ಠಾಣೆ ಮೆಟ್ಟಿಲೇರುತ್ತಿದ್ದ೦ತೆ ಬೆ೦ಗಳೂರು ತೊರೆದಿದ್ದ ಆರೋಪಿ, ಸಿದ್ದಾಪುರ ತಾಲೂಕಿನ ತನ್ನ ಹುಟ್ಟೂರಿಗೆ ಹೋಗಿ ತಲೆಮರೆಸಿಕೊ೦ಡಿದ್ದ. ಕುಡಿತದ ಅಮಲಿನಲ್ಲಿ ಮಹಿಳೆ ಜತೆ ಅಸಭ್ಯವಾಗಿ ನಡೆದುಕೊಂಡೆ ಎಂದು ಪುನೀತ್ ಹೇಳಿಕೆ ನೀಡಿದ್ದಾನೆ.[ಸಿಲಿಕಾನ್ ಸಿಟಿ ಬೆಂಗಳೂರು ಪುರುಷರಿಗೂ ಸೇಫ್ ಅಲ್ಲ]

3 ತಿ೦ಗಳಿನಿ೦ದ ಪುನೀತ್ ಹಾಗೂ ಡಾರ್ಜಿಲಿಂಗ್ ಮಹಿಳೆ ಒ೦ದೇ ಕಟ್ಟಡದಲ್ಲಿ ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದರು. ಪುನೀತ್ ಜತೆ ಮಹಿಳೆ ಬಹಳ ಸಲುಗೆಯಿಂದ ಇದ್ದದ್ದೆ ಘಟನೆಗೆ ಪ್ರೇರಣೆಯಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಗಂಡನಿಂದ ವಿಚ್ಛೇದಿತ ಮಹಿಳೆ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ 5 ವರ್ಷಗಳಿಂದ ವಾಸವಾಗಿದ್ದರು. ಮಹಿಳೆಯೊಂದಿಗೆ ಆಕೆಯ ಸಹೋದರಿ ವಾಸ ಮಾಡುತ್ತಿದ್ದಳು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru police arrested Sirsi origin youth who harassed Darjeeling woman in a apartment HAL, Bengaluru. Sunil (Puneeth) from Siddapur Taluk Uttara Kannada bit Darjeeling woman's cheek and escaped from the site.
Please Wait while comments are loading...