ಶಿರಸಿಯಲ್ಲಿ ಮಾಜಿ ಸಂಸದೆ ರಮ್ಯಾ ವಿರುದ್ಧ ಪ್ರತಿಭಟನೆ

By: ನಮ್ಮ ಪ್ರತಿನಿಧಿ
Subscribe to Oneindia Kannada

ಉತ್ತರ ಕನ್ನಡ, ಅಕ್ಟೋಬರ್ 31 : ಮಾಜಿ ಸಂಸದೆ ರಮ್ಯಾ ವಿರುದ್ಧ ಶಿರಸಿ ಬಿಜೆಪಿ ನಗರ ಮಂಡಳ ಮಹಿಳಾ ಮೋರ್ಚಾದ ಸದಸ್ಯರು ಪ್ರತಿಭಟನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಮ್ಯಾ ಮಾಡಿರುವ ಟ್ವಿಟ್ ಅವಹೇಳನ ಎಂದು ಆರೋಪಿಸಿ ರಮ್ಯಾ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಮಿಂಚು, ರಮ್ಯಾ ಕಾಲ್ಗುಣ ಕಾರಣವೇ?

ಮಂಗಳವಾರ ಶಿರಸಿಯ ಹಳೆ ಬಸ್ ನಿಲ್ದಾಣದ ಬಳಿ ಬಿಜೆಪಿ ಮಹಿಳಾ ಕಾರ್ಯಕರ್ತರು ರಮ್ಯಾ ವಿರುದ್ಧ ಘೋಷಣೆಗಳನ್ನು ಕೂಗಿ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ರಮ್ಯಾ ಅವರಿಗೆ ಅಭಿವೃದ್ಧಿ ಎಂದರೆ ಏನೂ ಎಂದು ತಿಳಿದಿಲ್ಲ ಎಂದು ಟೀಕಿಸಿದರು.

BJP protest against Former MP Ramya

ಜಿಲ್ಲಾ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ರೇಖಾ ಹೆಗಡೆ ಮಾತನಾಡಿ, 'ರಮ್ಯಾ ಅವರದ್ದು ಆಚಾರವಿಲ್ಲದ ನಾಲಿಗೆಯಾಗಿದೆ. ಅವರನ್ನು ಮಾಜಿ ಸಂಸದೆ ಎನ್ನಲು ನಾಚಿಕೆಯಾಗುತ್ತದೆ. ತಮಗಿಂತ ದೊಡ್ಡ ವ್ಯಕ್ತಿಗಳ ಕುರಿತು ಅವಹೇಳನ ಮಾಡಿದರೆ ತಾವು ದೊಡ್ಡವರಾಗುತ್ತೇವೆ ಎಂಬ ಮೂರ್ಖ ಕಲ್ಪನೆ ಕಾಂಗ್ರೆಸ್ ನವರದ್ದು' ಎಂದು ವಾಗ್ದಾಳಿ ನಡೆಸಿದರು.

'ರಮ್ಯಾ ಅವರಿಗೆ ಅಭಿವೃದ್ಧಿ ಎಂದರೆ ಏನೆಂದು‌ ತಿಳಿದಿಲ್ಲ. ಅಶಾಂತಿ ವಾತಾವರಣವನ್ನು ನಿರ್ಮಾಣ ಮಾಡುವ ಕೆಲಸವನ್ನು ಕಾಂಗ್ರೆಸ್ ನವರು ಮಾಡುತ್ತಿದ್ದಾರೆ' ಎಂದು ರೇಖಾ ಹೆಗಡೆ ವಾಗ್ದಾಳಿ ನಡೆಸಿದರು.

ಮಹಿಳಾ ಮೋರ್ಚಾ ಗ್ರಾಮೀಣ ಅಧ್ಯಕ್ಷೆ ಉಷಾ ಹೆಗಡೆ, ನಗರ ಮಂಡಳ‌ ಅಧ್ಯಕ್ಷೆ ಪವಿತ್ರಾ ಹೊಸರು ಹಾಗೂ ಸುಮಂಗಲಾ ಭಟ್, ಪ್ರೇಮಕಲಾ ನಾಯ್ಕ, ಸುವರ್ಣ ಸಜ್ಜನ್, ಉಷಾ ನಾಯ್ಕ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sirasi BJP mahila morcha workers protested against Former MP Ramya on October 31, 2017 for tweet against Prime Minister Narendra Modi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ