ವಿದೇಶ ಪ್ರವಾಸಕ್ಕೆ ಸಂಡಾಸು ಕೂಡ ಹೊತ್ತೊಯ್ಯುವ ಉ.ಕೊರಿಯಾದ ಕಿಮ್ ಜಾಂಗ್ ಉನ್

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಂಗಳವಾರ ಸಿಂಗಾಪೂರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ಭೇಟಿ ಮಾಡಿದ್ದು ಭಾರೀ ಸುದ್ದಿ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಕಿಮ್ ಇದ್ದಾನಲ್ಲಾ, ಪುಣ್ಯಾತ್ಮ ಒಬ್ಬನೇ ಹೋಗಿಲ್ಲ. ಐಎಲ್- 76 ವಿಮಾನದಲ್ಲಿ ತನ್ನ ಆಹಾರ, ಬುಲೆಟ್ ಪ್ರೂಫ್ ಲಿಮೋಸಿನ್ ಮತ್ತು ಪೋರ್ಟಬಲ್ ಸಂಡಾಸು (ಟಾಯ್ಲೆಟ್) ತೆಗೆದುಕೊಂಡು ಹೋಗಿದ್ದಾರೆ.

ಈ ಸರ್ವಾಧಿಕಾರಿ ಕಿಮ್ ಗೆ ವಿದೇಶದಲ್ಲಿರುವಾಗ ಎಲ್ಲದರ ಬಗ್ಗೆ ಹಾಗೂ ಎಲ್ಲರ ಬಗ್ಗೆಯೂ ಗುಮಾನಿ. ಅದರಲ್ಲೂ ಕಿಮ್ ಗೆ ಇದು ಮೊದಮೊದಲ ಅಂತರರಾಷ್ಟ್ರೀಯ ಪ್ರವಾಸ. ತನ್ನ ತಂದೆಯಿಂದ ಏಳು ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡ ನಂತರ, ಮತ್ತು ಮೂವತ್ತೆರಡು ವರ್ಷಗಳಲ್ಲಿ ಉತ್ತರ ಕೊರಿಯಾ ಅಧ್ಯಕ್ಷನ ಮೊದಲ ಪ್ರವಾಸ ಇದು.

ಅಂದಹಾಗೆ ಕಿಮ್ ಚೀನಾವೊಂದನ್ನು ಬಿಟ್ಟು ಉಳಿದ ಯಾವ ದೇಶವನ್ನು ನಂಬುವ ಪೈಕಿ ಅಲ್ಲ. ಅಂಥದ್ದರಲ್ಲಿ ಎರಡು ವಿಮಾನದ ತುಂಬ ಸರಕು- ಸರಂಜಾಮು ಹೇರಿಕೊಂಡು, ಸಂಭವನೀಯ ದಾಳಿ ಎದುರಿಸುವುದಕ್ಕೂ ಸಿದ್ಧವಾಗಿ ಸಿಂಗಾಪೂರಕ್ಕೆ ಹೋಗಿಬಿಟ್ಟಿದ್ದಾರೆ.

Why did Kim Jong Un bring his own toilet to the Singapore summit?

ಕಿಮ್ ಪ್ರವಾಸ ಮಾಡುವಾಗ ಸಂಡಾಸನ್ನು ತೆಗೆದುಕೊಂಡು ಹೋಗುತ್ತಾರಂತೆ. ಅದೂ ಏಕೆ ಗೊತ್ತಾ? ಆ ಮೂಲಕ (ಮಲ- ಮೂತ್ರಗಳ ಪರೀಕ್ಷೆ) ಕಿಮ್ ನ ಆರೋಗ್ಯದ ಸಮಸ್ಯೆಗಳೇನಾದರೂ ಇದ್ದಲ್ಲಿ ಅದನ್ನು ತಿಳಿದುಕೊಂಡು, ಬಹಿರಂಗ ಮಾಡಿ, ಉತ್ತರ ಕೊರಿಯಾದಲ್ಲಿ ಅಸ್ಥಿರ ಸನ್ನಿವೇಶ ಸೃಷ್ಟಿಸಬಹುದು ಎಂಬ ಆತಂಕದ ಕಾರಣಕ್ಕೆ ಹೀಗೆ ಮಾಡುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+