
ಭಾರತಕ್ಕೆ ವಿಮಾನಗಳ ಸಂಖ್ಯೆ ಹೆಚ್ಚಿಸಲು ಸಿಂಗಾಪುರ ಏರ್ ಲೈನ್ಸ್ ತೀರ್ಮಾನ
ಸಿಂಗಾಪುರ, ಮೇ 30: ಕೋವಿಡ್-19 ಸಾಂಕ್ರಾಮಿಕದ ಭಾರತೀಯ ವಿಮಾನಯಾನ ಕ್ಷೇತ್ರದಲ್ಲಿ ಚೇತರಿಕೆ ಕಾಣುತ್ತಿದ್ದು, ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಸಿಂಗಾಪುರ್ ಏರ್ ಲೈನ್ಸ್ ಭಾರತಕ್ಕೆ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ. ಸಿಂಗಾಪುರ್ ಏರ್ ಲೈನ್ಸ್ ಕೊರೊನಾ ಪೂರ್ವದ ತನ್ನ ಸಾಮರ್ಥ್ಯದ ಶೇ.75 ರಷ್ಟು ವಿಮಾನಗಳೊಂದಿಗೆ ಕಾರ್ಯಾಚರಣೆ ಮಾಡುತ್ತಿದೆ.
ಸಿಂಗಾಪುರ್ ಏರ್‌ಲೈನ್ಸ್ (SIA) ಗ್ರೂಪ್ ಸಂಪೂರ್ಣ ಸೇವಾ ವಾಹಕ ಸಿಂಗಾಪುರ್ ಏರ್‌ಲೈನ್ಸ್ ಮತ್ತು ಕಡಿಮೆ ವೆಚ್ಚದ ಏರ್ ಲೈನ್ ಸ್ಕೂಟ್ ವಿಮಾನಗಳನ್ನು ಒಳಗೊಂಡಿದೆ. ಪ್ರಸ್ತುತ ಭಾರತದಾದ್ಯಂತ 13 ಸ್ಥಳಗಳಿಗೆ ವಿಮಾನಯಾನ ಸೇವೆ ನೀಡುತ್ತಿದೆ.
ನೇಪಾಳ ವಿಮಾನ ಪತನ, 16 ಮೃತದೇಹಗಳು ಪತ್ತೆ
ಮುಂಬರುವ ತಿಂಗಳುಗಳಲ್ಲಿ ಭಾರತಕ್ಕೆ ಹೆಚ್ಚಿನ ವಿಮಾನಗಳನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ಹಿರಿಯ ಸಿಂಗಾಪುರ್ ಏರ್ ಲೈನ್ಸ್ ಕಾರ್ಯನಿರ್ವಾಹಕರು ಸೋಮವಾರ ಮಾಹಿತಿ ನೀಡಿದ್ದಾರೆ.
"ಭಾರತೀಯ ವಿಮಾನಯಾನ ಮಾರುಕಟ್ಟೆ ತುಂಬಾ ಬಲವಾಗಿ ಚೇತರಿಸಿಕೊಳ್ಳುತ್ತಿದೆ. ವಿಮಾನ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮುಂಬರುವ ಅಕ್ಟೋಬರ್ ನಿಂದ ಪ್ರಾರಂಭವಾಗುವ ಚಳಿಗಾಲದ ವೇಳಾಪಟ್ಟಿ ಅಥವಾ ಮುಂದಿನ ವರ್ಷದ ವೇಳಾಪಟ್ಟಿಯಲ್ಲಿ ನಾವು ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ಈಗಿನ ಚೇತರಿಕೆ ಆಶಾದಾಯಕವಾಗಿ ಕಾಣಿಸುತ್ತಿದೆ" ಎಂದು ಸಿಂಗಾಪುರ್ ಏರ್‌ಲೈನ್ಸ್ ವಾಣಿಜ್ಯ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಲೀ ಲಿಕ್ ಹ್ಸಿನ್ ತಿಳಿಸಿದ್ದಾರೆ.
ಭಾರತದ 14 ನಗರಗಳಿಂದ ಸೇವೆ; ಸಿಂಗಾಪುರ್ ಏರ್ ಲೈನ್ಸ್ ಭಾರತದ ಎಂಟು ನಗರಗಳಾದ ಚೆನ್ನೈ, ಮುಂಬೈ, ದೆಹಲಿ, ಬೆಂಗಳೂರು, ಕೋಲ್ಕತ್ತಾ, ಅಹಮದಾಬಾದ್, ಕೊಚ್ಚಿ ಮತ್ತು ಹೈದರಾಬಾದ್‌ನಿಂದ ಸಿಂಗಾಪುರಕ್ಕೆ ವಾರಕ್ಕೆ 73 ವಿಮಾನಗಳು ಕಾರ್ಯ ನಿರ್ವಹಿಸುತ್ತವೆ. ಅಮೃತಸರ, ಕೊಯಮತ್ತೂರು, ಹೈದರಾಬಾದ್, ತಿರುಚಿರಾಪಳ್ಳಿ, ತಿರುವನಂತಪುರಂ ಮತ್ತು ವಿಶಾಖಪಟ್ಟಣಂ ನಗರಗಳಿಂದ 38 ಸ್ಕೂಟ್ ವಿಮಾನಗಳು ನಿರ್ವಹಿಸುತ್ತವೆ.
ವಿಶೇಷ ವರ್ತನೆಯ ಬಾಲಕನಿಗೆ ವಿಮಾನ ಪ್ರಯಾಣ ನಿರಾಕರಣೆ: ಇಂಡಿಗೋ ಏರ್‌ಲೈನ್ಸ್‌ಗೆ 5 ಲಕ್ಷ ದಂಡ
ಏರ್‌ಲೈನ್ಸ್ ಅಧಿಕಾರಿಗಳ ಪ್ರಕಾರ ಸಿಂಗಾಪುರ್ ಏರ್ ಲೈನ್ಸ್ ಸಂಸ್ಥೆ ತನ್ನ ಸಾಮರ್ಥ್ಯದ ಶೇ.75 ರಷ್ಟು ವಿಮಾಗಳೊಂದಿಗೆ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಎರಡು ವರ್ಷಗಳ ಕಾಲ ವಿಮಾನಯಾನ ಸ್ಥಗಿತಗೊಂಡ ನಂತರ, ನಿಗದಿತ ವಾಣಿಜ್ಯ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಗಳು 2022 ಮಾರ್ಚ್ 27 ರಿಂದ ಭಾರತಕ್ಕೆ ಮತ್ತು ಭಾರತದಿಂದ ಸಿಂಗಾಪುರಕ್ಕೆ ಪುನರಾರಂಭಗೊಂಡವು.

ಮಾರುಕಟ್ಟೆ ಸುಧಾರಣೆ; ಸಿಂಗಾಪುರ ಏರ್‌ಲೈನ್ಸ್ ವಕ್ತಾರರು ಮಾರುಕಟ್ಟೆಯ ಪ್ರತಿಕ್ರಿಯೆಯು ಭಾರತದಿಂದ ಪ್ರಸ್ತುತ ಹೊರಹೋಗುವ ಪ್ರಯಾಣಿಕರ ದಟ್ಟಣೆಯು ಸಾಕಷ್ಟು ಸುಧಾರಣೆಯಾಗಿದೆ. ಆದರೆ ಬಿಸಿನೆಸ್ ಕ್ಲಾಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲು ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಮುಂಬೈ ಮತ್ತು ದೆಹಲಿಯಿಂದ ಏರ್‌ಬಸ್ A380 ವಿಮಾನ ಸೇವೆಗಳನ್ನು ಪುನರಾರಂಭಿಸುವುದರ ಹೊರತಾಗಿ, ವಿಮಾನಯಾನ ಸಂಸ್ಥೆಯು ಜನವರಿಯಲ್ಲಿ ತನ್ನ ಹೊಸ ಬೋಯಿಂಗ್ 737-8 ವಿಮಾನವನ್ನು ಹೈದರಾಬಾದ್, ಕೊಚ್ಚಿ ಮತ್ತು ಕೋಲ್ಕತ್ತಾದಿಂದ ಪ್ರಾರಂಭಿಸಿತು. ಇದು ಬಿಸಿನೆಸ್ ಕ್ಲಾಸ್ ವಿಮಾನವಾಗಿದ್ದು, ಸಂಪೂರ್ಣ ಫ್ಲಾಟ್ ಬೆಡ್‌ಗಳಲ್ಲಿ ಒರಗಿಕೊಳ್ಳುವ ಆಸನಗಳನ್ನು ಒಳಗೊಂಡಿದೆ.
"ಭಾರತದ ವಿಮಾನಯಾನ ಮಾರುಕಟ್ಟೆ ಅತ್ಯಂತ ವೇಗವಾಗಿ ಚೇತರಿಸಕೊಳ್ಳುತ್ತಿದೆ ಎಂದು" ಲೀ ಲಿಕ್ ಹ್ಸಿನ್ ಹೇಳಿದ್ದಾರೆ.
Recommended Video
ಹೆಚ್ಚಾಗುತ್ತಿರುವ ಇಂಧನ ದರಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರು, "ನಾವು ನಿಯಂತ್ರಣ ಮಾಡಬುದಾದ ವೆಚ್ಚವನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು. ಆದರೆ ಇಂಧನ ದರವು ನಾವು ನಿಯಂತ್ರಿಸದ ವಿಷಯವಾಗಿದ್ದು, ಇಂಧನದ ದರ ಹೆಚ್ಚಾದರೆ ವಿಮಾನಯಾನ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ" ಎಂದು ಹೇಳಿದರು.