• search
  • Live TV
ಸಿಂಗಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಂಗಪುರ ಸಂಸತ್ತಿನಲ್ಲಿ ನೆಹರೂ ಹೊಗಳಿದ ಪ್ರಧಾನಿ ಲೂಂಗ್

|
Google Oneindia Kannada News

ಸಿಂಗಪುರ, ಫೆಬ್ರವರಿ 17: ಸಿಂಗಾಪುರ ಸಂಸತ್ತಿನಲ್ಲಿ ಜವಾಹರ್‌ಲಾಲ್ ನೆಹರೂ ಅವರನ್ನು ಉಲ್ಲೇಖ ಮಾಡಲಾಗಿದ್ದು, ಪ್ರಜಾಪ್ರಭುತ್ವದ ಕುರಿತು ಅವರ ಚಿಂತನೆಯನ್ನು ಪ್ರಧಾನಿ ಲೀ ಸೀನ್ ಲೂಂಗ್ ಹೊಗಳಿದ್ದಾರೆ.

ಉನ್ನತ ಚಿಂತನೆಗಳು ಮತ್ತು ಶ್ರೇಷ್ಠ ಮೌಲ್ಯಗಳ ಆಧಾರದಲ್ಲಿ ಹೆಚ್ಚಿನ ರಾಷ್ಟ್ರಗಳು ನಿರ್ಮಾಣಗೊಂಡಿರುತ್ತವೆ. ಆದರೆ ಸಮಯ ಕಳೆದಂತೆ ಹಾಗೆಯೇ ಉಳಿಯುವುದಿಲ್ಲ, ದಶಕಗಳು ಮತ್ತು ತಲೆಮಾರುಗಳು ಕಳೆದಂತೆ ಸ್ಥಾಪಕ ನಾಯಕರನ್ನು ಮತ್ತು ಆರಂಭದ ತಲೆಮಾರನ್ನು ಮೀರಿ ವಿಚಾರಗಳು ಬದಲಾಗುತ್ತವೆ ಎಂದಿದ್ದಾರೆ.

ಬಿಜೆಪಿ ಸರ್ಕಾರದ ರಾಷ್ಟ್ರೀಯತೆಯು ಬ್ರಿಟಿಷರ ಒಡೆದು ಆಳುವ ನೀತಿಯಂತಿದೆಬಿಜೆಪಿ ಸರ್ಕಾರದ ರಾಷ್ಟ್ರೀಯತೆಯು ಬ್ರಿಟಿಷರ ಒಡೆದು ಆಳುವ ನೀತಿಯಂತಿದೆ

ಸ್ವತಂತ್ರ ಭಾರತಕ್ಕೆ ಅತ್ಯುನ್ನತ ಆದರ್ಶ ಮತ್ತು ಶ್ರೇಷ್ಠ ಮೌಲ್ಯಗಳ ಅಡಿಪಾಯ ಹಾಕಲಾಗಿದೆ ಎಂದು ಲಿ ಸೇನ್​​​​ ಲೂಂಗ್ ಹೇಳಿದ್ದಾರೆ. ಸಿಂಗಾಪುರ್​ನ ವರ್ಕರ್ಸ್ ಪಾರ್ಟಿಯ ಮಾಜಿ ಸಂಸದೆ ರಯೀಸಾ ಖಾನ್ ಅವರು ಇತ್ತೀಚೆಗೆ ತನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಸಂಸತ್ತಿನಲ್ಲಿ ಹೇಳಿದ್ದರು. ಆದರೆ ಅದು ಕಟ್ಟುಕತೆಯಾಗಿತ್ತು. ನಂತರ ಇದೇ ಎಡವಟ್ಟಿನ ಕಾರಣಕ್ಕೆ ಅವರು ರಾಜೀನಾಮೆಯನ್ನೂ ಕೊಟ್ಟಿದ್ದಾರೆ.

ಆದರೆ ರಯೀಸಾ ಖಾನ್​ ಹೇಳಿಕೆಗಳನ್ನು ಪರಿಶೀಲಿಸಿ, ತನಿಖೆ ನಡೆಸುವ ಸಂಬಂಧ ಒಂದು ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ಫೆ.10ರಂದು ತನ್ನ ತನಿಖಾ ವರದಿ ನೀಡಿದ್ದು, ಸದ್ಯ ಸಿಂಗಾಪುರ ಸಂಸತ್ತಿನಲ್ಲಿ ಈ ವರದಿ ಮೇಲೆ ಚರ್ಚೆ ನಡೆಯುತ್ತಿದೆ. ಇದೇ ವೇಳೆ ಮಾತನಾಡಿದ ಪ್ರಧಾನಮಂತ್ರಿ ಭಾರತ ಮತ್ತು ಅದರ ಮೊದಲ ಪ್ರಧಾನಮಂತ್ರಿ ಬಗ್ಗೆ ಉಲ್ಲೇಖಿಸಿದ್ದಾರೆ.

ಉತ್ಸಾಹದ ತೀವ್ರತೆಯಲ್ಲಿ ಹೋರಾಟಗಳು ಮೊಳಕೆಯೊಡೆಯುತ್ತವೆ, ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಜಯಸಾಧಿಸಿದ ನಾಯಕರು, ಸಾಮಾನ್ಯವಾಗಿ ಮಹಾನ್ ಧೈರ್ಯ, ಬಹುಸಂಸ್ಕೃತಿ ಮತ್ತು ಅಪರಿಮಿತ ಸಾಮರ್ಥ್ಯಗಳನ್ನು ಹೊಂದಿದ್ದ ಅಸಾಧಾರಣ ವ್ಯಕ್ತಿಗಳಾಗಿದ್ದರು.

'ನೆಹರು ಈಗಲೂ ಬಿಜೆಪಿಗೆ ಅಡೆತಡೆಯಾಗಿದ್ದಾರೆ' ಎಂದ ಕಾಂಗ್ರೆಸ್‌ ನಾಯಕ'ನೆಹರು ಈಗಲೂ ಬಿಜೆಪಿಗೆ ಅಡೆತಡೆಯಾಗಿದ್ದಾರೆ' ಎಂದ ಕಾಂಗ್ರೆಸ್‌ ನಾಯಕ

ಅವರು ಕಠಿಣ ಪರಿಸ್ಥಿತಿಯನ್ನು ಎದುರಿಸಿದರು, ರಾಷ್ಟ್ರ ನಾಯಕರಾಗಿ ಹೊರಹೊಮನ್ಮಿದರು, ಡೇವಿಡ್‌ ಬೆನ್ ಗುರಿಯನ್ ಜವಾಹರ್‌ಲಾಲ್ ನೆಹರು ಅಂತಹ ನಾಯಕರು, ನಮ್ಮ ರಾಷ್ಟ್ರದಲ್ಲಾಂತಹ ನಾಯಕರು ಇದ್ದಾರೆ ಎಂದು ಲೂಂಗಾ ತಿಳಿಸಿದ್ದಾರೆ.

ಹೆಚ್ಚಿನ ರಾಜಕೀಯ ವ್ಯವಸ್ಥೆಗಳಲ್ಲಿ ಸ್ಥಾಪಕ ನಾಯಕರ ಆಶಯಗಳು ಕಡೆಗಣನೆಗೆ ಒಳಗಾಗುತ್ತವೆ, ಬೆನ್ ಗುರಿಯನ್ ಅವರ ಇಸ್ರೇಲ್ ಚಿತ್ರಣವು ಬದಲಾಗಿದೆ. ಎರಡು ವರ್ಷದಲ್ಲಿ ನಾಲ್ಕು ಚುನಾವಣೆಗಳನ್ನು ಕಂಡಿದೆ. ಹಿರಿಯ ರಾಜಕಾರಣಿಗಳು ಮತ್ತು ಅಧಿಕಾರಿಗಳು ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಕೆಲವರು ಜೈಲು ಪಾಲಾಗಿದ್ದಾರೆ ಎಂದರು.

ಹಾಗೆಯೇ ನೆಹರೂ ಅವರು ಭಾರತದಲ್ಲಿ, ಮಾಧ್ಯಮ ವರದಿಗಳ ಪ್ರಕಾರ ಲೋಕಸಭೆಯ ಸುಮಾರು ಅರ್ಧದಷ್ಟು ಸಂಸದರು ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಅನೇಕ ಗಂಭೀರ ಅಪರಾಧ ಪ್ರಕರಣಗಳು ಕೋರ್ಟ್‌ನಲ್ಲಿ ಬಾಕಿ ಇವೆ. ಹೆಚ್ಚಿನವು ರಾಜಕೀಯ ಪ್ರೇರಿತ ಆರೋಪಗಳು ಎಂದು ಕೇಳಿಬಂದಿವೆ ಎಂದು ಅವರು ಹೇಳಿದ್ದಾರೆ.

English summary
Singapore Prime Minister Lee Hsien Loong invoked India’s first prime minister Jawaharlal Nehru while arguing how democracy should work in the city-state during a passionate debate in Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X