ಶಿವಮೊಗ್ಗಕ್ಕೆ ಭರ್ಜರಿ ಉಡುಗೊರೆ ಕೊಟ್ಟ ಸಿಎಂ ಯಡಿಯೂರಪ್ಪ
Recommended Video
ಶಿವಮೊಗ್ಗ, ಆಗಸ್ಟ್ 16 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗಕ್ಕೆ ಹಲವಾರು ಕೊಡುಗೆ ನೀಡಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ 1, 279 ಕೋಟಿ ರೂ. ಗಳ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ವಿವಿಧ ತಾಲೂಕುಗಳಿಗೆ ಸೇರಿದ ಯೋಜನೆಗಳು ಇದರಲ್ಲಿವೆ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಯೋಜನೆಗಳಿಗೆ ಒಪ್ಪಿಗೆ ಕೊಡಲಾಗಿದೆ. ಶಿವಮೊಗ್ಗಕ್ಕೆ ಭೇಟಿ ನೀಡಿದಾಗ ಯಡಿಯೂರಪ್ಪ 50 ಕೋಟಿ ರೂ.ಗಳನ್ನು ಜಿಲ್ಲೆಯ ಅಭಿವೃದ್ಧಿಗೆ ಘೋಷಣೆ ಮಾಡಿದ್ದರು.
ಆಗಸ್ಟ್ 13ರಂದು ಶಿಕಾರಿಪುರದಲ್ಲಿ ಮಾತನಾಡಿದ್ದ ಯಡಿಯೂರಪ್ಪ, "ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತದೆ. ಶಿಕಾರಿಪುರ ಹಾಗೂ ಸೊರಬ ತಾಲೂಕಿನ ನೀರಾವರಿ ಯೋಜನೆಗಳಿಗೆ 1, 300 ಕೋಟಿ. ರೂ. ಬಿಡುಗಡೆಯಾಗಿದೆ" ಎಂದು ಹೇಳಿದ್ದರು.

ಯೋಜನೆಗಳ ವಿವರ
* ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗ 956 ಕೋಟಿ
* ಸಾಗರ ತಾಲೂಕಿನ 66 ಕೆರೆಗಳನ್ನು ವರದಾ ನದಿ ನೀರಿನ ಮೂಲಕ ತುಂಬಿಸುವುದು 285 ಕೋಟಿ
* ಚಿಕ್ಕ ವಿಮಾನಗಳ ಲ್ಯಾಂಡಿಂಗ್‌ಗಾಗಿ ರನ್ ವೇ ನಿರ್ಮಾಣ 38 ಕೋಟಿ











Click it and Unblock the Notifications