ಶಾಸಕರಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ: ಸೋಮಶೇಖರ್
ಶಿವಮೊಗ್ಗ, ಜೂನ್ 01: ನಮ್ಮ ಶಾಸಕರು ಯಾವುದೇ ಗುಂಪುಗಾರಿಕೆಯನ್ನು ನಡೆಸಿಲ್ಲ. ಪಕ್ಷದಲ್ಲಿ ಎಲ್ಲರೂ ಒಂದಾಗಿದ್ದೇವೆ. ಮೂರು ತಿಂಗಳ ನಂತರ ಎಲ್ಲರೂ ಒಂದು ಕಡೆ ಸೇರಿದ್ದಾರೆ ಅಷ್ಟೆ. ಅದರಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಇದೆಲ್ಲ ಸುಳ್ಳು ಎಂದಿದ್ದಾರೆ ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್.
Recommended Video
ಕಾರೆಹೊಂಡ ಗ್ರಾಮಸ್ತರ ಜೊತೆ ಕಾಲಕಳೆದ ಕುಮಾರ್ ಬಂಗಾರಪ್ಪ | Oneindia Kannada
ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ನುಡಿದಂತೆ ನಡೆದುಕೊಂಡಿದ್ದಾರೆ. ನಮ್ಮನ್ನೆಲ್ಲ ಮಂತ್ರಿ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದರು, ಅದನ್ನು ಉಳಿಸಿಕೊಂಡಿದ್ದಾರೆ. ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ಸೇರಿದಂತೆ ಬಸವನಗೌಡ ಪಾಟೀಲ್ ಯತ್ನಳ್ ಅವರ ಬಹಿರಂಗ ಹೇಳಿಕೆಗಳಿಂದ ಅಸಮಾಧಾನ ವ್ಯಕ್ತವಾಗಿದೆ" ಎಂದಿದ್ದಾರೆ.

ಮುಖ್ಯಮಂತ್ರಿಗಳ ಜೊತೆ ನಾವು ಎಂದಿಗೂ ಜೊತೆಗೆ ಇರುತ್ತೇವೆ. ಈಗಲೂ ಶಿಸ್ತಿನಲ್ಲಿಯೇ ಇದ್ದೇವೆ ಎಂದು ಹೇಳಿದರು.












Click it and Unblock the Notifications