ಎಟಿಎಂ ದರೋಡೆಕೋರರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಶಿವಮೊಗ್ಗ, ಜನವರಿ 16: ಎಟಿಎಂ ಕಳ್ಳತನ ಮಾಡಲು ಯತ್ನಿಸುತ್ತಿದ್ದ ಖದೀಮರ ತಂಡವೊಂದನ್ನು ಗ್ರಾಮಸ್ಥರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಶಿವಮೊಗ್ಗ ಸಮೀಪದ ಸಂತೇಕಡೂರಿನಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಇಂದು ಮುಂಜಾನೆ ಸುಮಾರು 3 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಹೊರಭಾಗದಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂ ಕಳ್ಳತನ ಮಾಡಲು 6 ಮಂದಿ ಖದೀಮರು ವ್ಯಾನ್ ನಲ್ಲಿ ಬಂದಿದ್ದರು. ಎಟಿಎಂಗೆ ನುಗ್ಗಿ, ಹಣದೋಚಲು ಯತ್ನಿಸಿದಾಗ ಗ್ರಾಮಸ್ಥರು ಜಾಗೃತರಾದ ಹಿನ್ನೆಲೆ ದರೋಡೆಕೋರರು ಸಿಕ್ಕಿಬಿದ್ದಿದ್ದಾರೆ.

ಆರು ಜನರ ಪೈಕಿ ಮೂವರು ದರೋಡೆಕೋರರು ಎಟಿಎಂ ಕೇಂದ್ರದೊಳಗೆ ನುಗ್ಗಿದ್ದಾರೆ. ಎಂಟಿಎಂ ಮೆಷಿನ್ ಒಡೆದು ಹಣ ದೋಚಲು ಯತ್ನಿಸಿದ್ದಾರೆ. ಇದನ್ನು ತಡೆಯಲು ಮುಂದಾದ ಸೆಕ್ಯೂರಿಟಿ ಮೇಲೂ ಹಲ್ಲೆ ನಡೆಸಿದ್ದಾರೆ.

Villagers captures ATM thieves and rescue security guard

ಹೊರಗೆ ಜೋರು ಶಬ್ದವಾದ್ದರಿಂದ ಗ್ರಾಮಸ್ಥರು ಎಚ್ಚವಾಗಿದ್ದಾರೆ ಎಇಟಿಎಂ ಕೇಂದ್ರದತ್ತ ಆಗಮಿಸಿ ಕಳ್ಳರನ್ನು ಸುತ್ತುವರೆದಿದ್ದಾರೆ. ಈ ವೇಳೆ ಆರು ಮಂದಿ ಖದೀಮರಲ್ಲಿ ಇಬ್ಬರು ಪರಾರಿಯಾಗಿದ್ದು, ಸಿಕ್ಕಿಹಾಕಿಕೊಂಡ ನಾಲ್ವರಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+