ಶಿವಮೊಗ್ಗ : ಪ್ರತ್ಯೇಕ ಘಟನೆಗಳಲ್ಲಿ 5 ಸಾವು

ಶಿವಮೊಗ್ಗ, ಜೂನ್ 03 : ಎರಡು ದಿನದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ 5 ಜನರು ಮೃತಪಟ್ಟಿದ್ದಾರೆ. ಭಾನುವಾರ ಒಂದೇ ದಿನ ಮೂವರು ಸಾವನ್ನಪ್ಪಿದ್ದಾರೆ. ಹಾಡಹಗಲೇ ಶಿವಮೊಗ್ಗದ ವಿದ್ಯಾನಗರದಲ್ಲಿ ಯುವಕನ ಹತ್ಯೆಯಾಗಿದೆ.

ಪ್ರಕರಣ 1 : ಆದಾಯ ತೆರಿಗೆ ಇಲಾಖೆ ಅಧಿಕಾರಿ ಪತ್ನಿ, ಪುತ್ರಿ ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕಿನ ಮಹಿಷಿಯಲ್ಲಿ ನಡೆದಿದೆ. ಚಂದ್ರಕುಮಾರಿ (37), ಸಂಧ್ಯಾ (17) ನೀರುಪಾಲಾದವರು.

ರಜೆಯ ಹಿನ್ನಲೆಯಲ್ಲಿ ಮಹಿಷೆಯ ಅಶ್ವಥ ನಾರಾಯಣ ದೇವಾಲಯಕ್ಕೆ ಐಟಿ ಇಲಾಖೆ ಅಧಿಕಾರಿ ನಾರಾಯಣ ಕುಟುಂಬ ಸೇಮತ ಆಗಮಿಸಿದ್ದರು. ತುಂಗಾನದಿ ಬಳಿಗೆ ಹೋದಾಗ ಚಂದ್ರ ಕುಮಾರಿ ಕಾಲು ಜಾರಿದ್ದರು. ಸಂಧ್ಯಾ ಅವರು ಅವರನ್ನು ರಕ್ಷಣೆ ಮಾಡಲು ತೆರಳಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

ಪ್ರಕರಣ 2 : ಕ್ಷುಲ್ಲಕ ಕಾರಣಕ್ಕ ಯುವಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ವಿದ್ಯಾನಗರದಲ್ಲಿ ನಡೆದಿದೆ. ರವಿ ಎಂಬಾತ ಪ್ರಭು ಎಂಬಾತನ ಮೇಲೆ ಹಲ್ಲೆ ಮಾಡಿದ್ದ. ಆಸ್ಪತ್ರೆಗೆ ಸಾಗಿಸುವಾಗ ಪ್ರಭು ಮೃತಪಟ್ಟಿದ್ದು, ಆರೋಪಿ ರವಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

Various incidents 5 killed in Shivamogga

ಪ್ರಕರಣ 3 : ಕೆರೆಯಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ ಘಟನೆ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ. ತಮ್ಮಡಿಹಳ್ಳಿ ಗ್ರಾಮದ ವಸಂತ್, ಚಿರಂತ್ ಮತ್ತು ಅಜೇಯ ಮೃತ ಬಾಲಕರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+