ಭದ್ರಾವತಿಯ ಯುಜಿಡಿ ಶುದ್ಧೀಕರಣ ಘಟಕದಲ್ಲಿ ಎರಡು ಮೃತದೇಹಗಳು ಪತ್ತೆ
ಶಿವಮೊಗ್ಗ, ಜೂನ್ 14: ಭದ್ರಾವತಿಯ ಸಿದ್ಧರೂಢ ಬಡಾವಣೆಯಲ್ಲಿ ಶೃಂಗೇರಿ ಶಂಕರ ಮಠದ ಬಳಿಯಿರುವ ಯುಜಿಡಿ ಶುದ್ಧೀಕರಣ ಘಟಕದಲ್ಲಿ ಎರಡು ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.
Recommended Video
ಯಡಿಯೂರಪ್ಪನನ್ನ ಅಲುಗಾಡಿಸಲು ಯಾರಿಂದಲೂ ಆಗಲ್ಲ | State Government is safe dont worry : M P Renukacharya
ಓರ್ವ ಪುರುಷ ಹಾಗೂ ಓರ್ವ ಮಹಿಳೆಯ ಮೃತದೇಹಗಳು ಈ ಯುಜಿಡಿಯ ಬಾವಿಯಲ್ಲಿ ಪತ್ತೆಯಾಗಿದ್ದು, ಮಹಿಳೆಯನ್ನು ಹಳೆನಗರ ನಿವಾಸಿ ಭಾಗ್ಯಮ್ಮ (40) ಎಂದು ಗುರುತಿಸಲಾಗಿದೆ. ಆದರೆ ಪುರುಷನ ದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಇಬ್ಬರೂ ಸಾವನ್ನಪ್ಪಿ ನಾಲ್ಕೈದು ದಿನಗಳು ಕಳೆದಿರಬಹುದು ಎನ್ನಲಾಗಿದೆ. ಇಬ್ಬರ ಮೃತದೇಹವೂ ನಿನ್ನೆ ರಾತ್ರಿ ಪತ್ತೆಯಾಗಿದೆ. ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತದೇಹಗಳನ್ನು ಪರಿಶೀಲನೆ ಮಾಡಲಾಗಿದೆ. ಈ ಯುಜಿಡಿ ಶುದ್ಧೀಕರಣ ಘಟಕದಲ್ಲಿ ಅನೈತಿಕ ಚಟುವಟಿಕೆ, ಕುಡಿತ ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆಯೂ ಮಾತುಗಳು ಕೇಳಿಬಂದಿವೆ.












Click it and Unblock the Notifications