• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗ: ಹುಲಿ ಉಗುರು ಮಾರುತ್ತಿದ್ದ ಮೂವರ ಬಂಧನ

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಆಗಸ್ಟ್ 28: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಆನಂದಪುರದಲ್ಲಿ ಹುಲಿ ಉಗುರು ಮಾರುತ್ತಿದ್ದವರನ್ನು ಐಜಿಪಿ ತಂಡ ಮೂವರನ್ನು ಬಂಧಿಸಿದ್ದು, ಸುಮಾರು 2 ಲಕ್ಷ ರೂ. ಮೌಲ್ಯದ ಹುಲಿ ಉಗುರನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ವಿಶ್ವನಾಥ್, ಮೋಹನ್ ಹಾಗೂ ಮತ್ತೋರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿರಿಸಲಾಗಿದೆ. ಮಲೆನಾಡು ಕಾಡುಗಳ್ಳರ ತವರೂರಾಗಲಿದೆಯೇ ಎಂಬ ಪ್ರಶ್ನೆ ಮಲೆನಾಡಿಗರಲ್ಲಿ ಉದ್ಭವವಾಗಿದ್ದು, ಇದಕ್ಕೆಲ್ಲ ಶಿಕ್ಷೆ ನೀಡಿ ಶೀಘ್ರ ಕಡಿವಾಣ ಹಾಕಬೇಕಿದೆ.

ಉಗುರಿಗಾಗಿ ರಾಷ್ಟ್ರೀಯ ಪ್ರಾಣಿ ಹುಲಿ ಕೊಂದ ದುಷ್ಕರ್ಮಿಗಳ ಬಂಧನ

ಕೊರೊನಾ ವೈರಸ್ ಈಗ ಎಲ್ಲೆಡೆ ಪಸರಿಸಿದ್ದು, ಕಳ್ಳತನ, ಹಗಲು ದರೋಡೆ ಇನ್ನು ಅನೇಕ ದುಷ್ಕೃತ್ಯ ನಡೆಯಲು ಹಾದಿ ಹಾಕಿ ಕೊಟ್ಟಂತಿದೆ. ಈ ಸಲುವಾಗಿ ಸಾರ್ವಜನಿಕರು ಹಾಗೂ ಅಧಿಕಾರಿಗಳು ಇಂತಹ ಕೃತ್ಯ ನಡೆಯದಂತೆ ನೋಡಿ ಸಮಾಜವನ್ನು ಕಾಪಾಡಬೇಕಿದೆ.

English summary
The IGP team arrested three tiger nails dealers at Sagara taluk Anandpura in Shivamogga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X