ಕೊರೊನಾ ವೈರಸ್ ಹಿನ್ನೆಲೆ ಹುಟ್ಟುಹಬ್ಬ ಆಚರಣೆ ಇಲ್ಲ: ಸಂಸದ‌ ಬಿ.ವೈ ರಾಘವೇಂದ್ರ

ಶಿವಮೊಗ್ಗ, ಆಗಸ್ಟ್ 14: ರಾಜಕಾರಣಿಗಳ ಹುಟ್ಟುಹಬ್ಬ ಎಂದರೆ ಆಯಾ ಪಕ್ಷದ ಕಾರ್ಯಕರ್ತರಲ್ಲಿ ಸಡಗರ ಸಂಭ್ರಮ ಮನೆ ಮಾಡಿರುತ್ತದೆ. ಅದ್ಧೂರಿಯಾಗಿ ಆಚರಣೆ ಮಾಡಿ, ಪಟಾಕಿ ಸಿಡಿಮದ್ದು ಸಿಡಿಸಿ, ಸಿಹಿ ವಿತರಣೆ ಈ ರೀತಿಯಾಗಿ ಅನೇಕ ಆಚರಣೆಗಳನ್ನು ನಡೆಸಲಾಗುತ್ತದೆ.

ಆದರೆ ಈ ಕೊರೊನಾ ವೈರಸ್ ಸಂಕಷ್ಟ ಸಮಯದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡದಂತೆ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಕೋವಿಡ್-19 ಕಾಯಿಲೆಯಿಂದ ಇಡೀ ವಿಶ್ವವೇ ಜಾಗತಿಕ ಮಟ್ಟದಲ್ಲಿ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಸುಸ್ಥಿರ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

Shivamogga: There Is No Birthday Celebration Of MP BY Raghavendra This Year

ಪ್ರಸ್ತುತ ಸಂದರ್ಭದಲ್ಲಿ ಯಾವುದೇ ಸಭೆ-ಸಮಾರಂಭವನ್ನು ನಡೆಸದಂತೆ ಕಾನೂನುಗಳನ್ನು ಪಾಲಿಸಲು ಅತ್ಯಂತ ಅವಶ್ಯವಾಗಿದೆ ಎಂದು‌ ವಿನಂತಿಸಿದ್ದಾರೆ.

Shivamogga: There Is No Birthday Celebration Of MP BY Raghavendra This Year

""ಪತ್ರದಲ್ಲಲಿ ತಿಳಿಸಿರುವಂತೆ ಆಗಸ್ಟ್ ೧೬ ರ ಭಾನುವಾರದಂದು ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ತೀರ್ಮಾನಿಸಿದ್ದೇನೆ. ಆದ್ದರಿಂದ ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರು ಹಾಗೂ ಕಾರ್ಯಕರ್ತರು ಯಾವುದೇ ಕಾರ್ಯಕ್ರಮವನ್ನು ಆಯೋಜಿಸದೇ, ಸರ್ಕಾರದ ನಿರ್ದೇಶನಗಳನ್ನು ಪಾಲಿಸಲು ಹಾಗೂ ಸಹಕರಿಸಲು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ'' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+