ಶಿವಮೊಗ್ಗː ಟಿಪ್ಪುನಗರದಲ್ಲಿ ಯುವಕನ ಕತ್ತು ಸೀಳಿ ಕೊಲೆ

ಶಿವಮೊಗ್ಗ, ಸೆ. 19: ಇಲ್ಲಿನ ಟಿಪ್ಪು ನಗರದಲ್ಲಿ 28 ವರ್ಷ ವಯಸ್ಸಿನ ಯುವಕನನ್ನು ಕತ್ತು ಸೀಳಿ, ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ಟಿಪ್ಪು ನಗರದ 7ನೇ ಕ್ರಾಸ್ ಬಳಿಯ ಶಾದಿ ಮಹಲ್ ಸಮೀಪ ಮುಕ್ತಿಯಾರ್ ಎಂಬ 28 ವರ್ಷ ವಯಸ್ಸಿನ ಯುವಕನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲ್ಲಲಾಗಿದೆ.

Shivamogga: Tippu nagar- Youth hacked to death

ಮೇಲ್ನೋಟಕ್ಕೆ ಹಳೆ ದ್ವೇಷದಿಂದ ನಡೆದ ಕೃತ್ಯ ಎಂದು ಶಂಕಿಸಲಾಗಿದೆ. ಗ್ಯಾಂಗ್ ವಾರ್ ಇರಬಹುದು ಎಂಬ ಅನುಮಾನವೂ ಬಂದಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಾಗರದಲ್ಲಿ ಗಾಂಜಾ ವಶ:
ಸಾಗರ ತಾಲ್ಲೂಕು ತಂಗಳವಾಡಿ ಗ್ರಾಮದ ಸರ್ವೇ ನಂ 01 ರಲ್ಲಿ ಹೊಸದಾಗಿ ಬೆಳೆದಿರುವ ಅಡಿಕೆ ತೋಟದಲ್ಲಿ ಹೊಸ ಕೊಪ್ಪ ಗ್ರಾಮದ ವಾಸಿ ರಮೇಶ ಎಂಬುವರು ಅಕ್ರಮವಾಗಿ ಗಾಂಜಾ ಬೆಳೆ ಬೆಳೆದಿರುವುದರ ಬಗ್ಗೆ ಸಾಗರ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಇ.ಓ ಮಂಜುನಾಥ ಅವರಿಗೆ ಮಾಹಿತಿ ಸಿಕ್ಕಿದೆ.

ದಾಳಿ ನಡೆಸಿ ಪರಿಶೀಲಿಸಿದ್ದರಲ್ಲಿ ಆರೋಪಿ ರಮೇಶ ತೋಟದಲ್ಲಿಅಕ್ರಮವಾಗಿಗಾಂಜಾ ಗಿಡಗಳನ್ನು ಬೆಳೆಸಿರುವುದು ಕಂಡು ಬಂದಿದೆ.ಸುಮಾರು 18 ಕೆ.ಜಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದು ಇದರ ಬೆಲೆ ಸುಮಾರು 36,000/- ರೂ ಆಗ ಬಹುದೆಂದುಅಂದಾಜಿಸಲಾಗಿದ್ದು, ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡುಕಾನೂನು ರೀತ್ಯಾ ಕ್ರಮ ಜರುಗಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+